ಶಿವಮೊಗ್ಗ : ಇದ್ದರು ಇಲ್ಲದಂತೆ ಜಿ ಜೆ ಸೂರ್ಯ ಕಾಲೇಜ್ ಪಾಳು ಬಿದ್ದ ಮನೆಯಂತೆ ?




ಶಿವಮೊಗ್ಗದ ಜಿ.ಜೆ ಸೂರ್ಯ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಮೂಲಸೌಕರ್ಯಗಳು ಮರಿಚಿಕೆಯಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮುಖ್ಯವಾಗಿ ಇಲ್ಲಿ ಸಮರ್ಪಕವಾಗಿ ನೀರು, ವಿದ್ಯುಚ್ಛಕ್ತಿ ಕೂಡ ಇಲ್ಲವಾಗಿದೆ. ಮಾತ್ರವಲ್ಲದೇ ಶಿಕ್ಷಕರ ಕೊರತೆಯೂ ಕಾಡುತ್ತಿದೆ. ಸಾಂಸ್ಕೃತಿಕ ಚಟುವಟಿಕೆಗಳು ಕಣ್ಮರೆಯಾಗಿವೆ.

ಅಲ್ಲದೇ, ವಿದ್ಯಾರ್ಥಿಗಳಿಂದ ಯಥೇಚ್ಛವಾಗಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯ ನಿಗಧಿಪಡಿಸಿರುವುದಕ್ಕಿಂತ ಹೆಚ್ಚಾಗಿ ಪರೀಕ್ಷಾ ಶುಲ್ಕವನ್ನು ಇಲ್ಲಿ ವಸೂಲಿ ಮಾಡಲಾಗುತ್ತಿದೆ. ಅಲ್ಲದೇ, ವಾಹನ ಶುಲ್ಕ ಬೇರೆಯಾಗಿ, ಅಪ್ಲಿಕೇಶನ್ ಶುಲ್ಕ ಬೇರೆಯಾಗಿ ಕಟ್ಟಿಸಿಕೊಳ್ಳಲಾಗುತ್ತಿದೆ. 

ಕ್ಲಿನಿಕಲ್ ಪೋಸ್ಟಿಂಗ್‌ಗೆ, ಕಾಲೇಜು ಶುಲ್ಕವನ್ನು ಬೇರೆ ಬೇರೆಯಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇಷ್ಟಾದರೂ ಕಾಲೇಜಿನಲ್ಲಿ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲ. ಸರಿಯಾಗಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸಿಗುತ್ತಿಲ್ಲ. ಯೂನಿಫಾರಂ ಸಿಕ್ಕಿಲ್ಲ. ಪದೇ ಪದೇ ಕಾಲೇಜು ಸ್ಥಳ ಬದಲಾವಣೆ ಆಗುತ್ತಿದೆ.

ಜತೆಗೆ ಇಲ್ಲಿ ಸೂಕ್ತವಾದ ಗ್ರಂಥಾಲಯದ ಸೌಲಭ್ಯವಿಲ್ಲ, ಮುಖ್ಯಶಿಕ್ಷರ ಕೊರತೆ ಇದೆ. ಎಚ್ಒಡಿ ಇಲ್ಲ ಹಾಗಾಗಿ ತಾವುಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಬಗ್ಗೆ ಗಮನಹರಿಸಿ ಕಾಲೇಜಿನ ಅವ್ಯವಸ್ಥೆ ಸರಿಪಡಿಸಬೇಕು. ಆಡಳಿತ ಮಂಡಳಿಯನ್ನು ಬದಲಾಯಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಜಿ.ಜೆ ಸೂರ್ಯ ಕಾಲೇಜ್  ವಿದ್ಯಾರ್ಥಿಗಳಿಗಳು ಡಿಸಿ ಕಚೇರಿ ಎದುರು  ಪ್ರತಿಭಟನೆ ಮಾಡಲಾಯಿತು .

Post a Comment

أحدث أقدم