ಜೈನ ಧರ್ಮದ ಗುರುಗಳಾದ ಚಿಕ್ಕೋಡಿಯ ಶ್ರೀ ಕಾಮಕುಮಾರ ಮಹಾಮುನಿಗಳನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಹಾಗೂ ಹನುಮಜಯಂತಿಯಲ್ಲಿ ಭಾಗವಹಿಸಿದ್ದನೆಂಬ ಕಾರಣಕ್ಕೆ ಟಿ.ನರಸೀಪುರದ ಯುವಬ್ರಿಗೇಡ್ ಕಾರ್ಯಕರ್ತರಾದ ವೇಣುಗೋಪಾಲ್ ರನ್ನು ಅತ್ಯಂತ ಹೀನಾಯವಾಗಿ ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ!. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಇಂದು *ತೀರ್ಥಹಳ್ಳಿ ಮಂಡಲ ಬಿಜೆಪಿ ವತಿಯಿಂದ* ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತೀರ್ಥಹಳ್ಳಿ ಪಟ್ಟಣದಾದ್ಯಂತ ಪ್ರತಿಭಟನಾ ಮೆರವಣಿಗೆ ಸಂಚರಿಸಿ, ತಾಲೂಕು ಕಚೇರಿಗೆ ತೆರಳಿ ಸರ್ಕಾರದ ಈ ವಿರುದ್ಧ ತೀವ್ರವಾಗಿ ಖಂಡಿಸಲಾಯಿತು. ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಲಾಯಿತು.
إرسال تعليق