ಅಮ್ಮ...,ಅಮ್ಮ ಎಂದು ಕರೆಯುತ್ತಿದ್ದ ಮನೆಯ ಕಾರು ಚಾಲಕನನ್ನು ಆ ದಂಪತಿ ಕುಟುಂಬ ಮಗನಂತೆಯೇ ನೋಡಿಕೊಂಡಿದ್ದರು. ಮನೆಯಲ್ಲಿ ಎಲ್ಲೆಡೆ ಓಡಾಕೊಂಡಿದ್ದ. ಆತನಿಗೆ ಎಲ್ಲಾ ಸ್ವಾತಂತ್ರವನ್ನು ನೀಡಿದ್ದರು ಇದೇ ಆ ದಂಪತಿ ಮಾಡಿದ ದೊಡ್ಡ ತಪ್ಪು. ಮನೆ ವ್ಯವಹಾರವೆಲ್ಲಾ ಗೊತ್ತಿದ್ದ ಆತನಿಗೆ ಆ ಮನೆಯಲ್ಲಿದ್ದ ದೊಡ್ಡ ಮೊತ್ತದ ಹಣದ ಮೇಲೆ ಕಣ್ಣು ಬಿದ್ದಾಗ ಆತನ ಮನಸ್ಸು ಚಂಚಲಗೊಂಡು ಆತನ ಕೈಯಿಂದ ಏನೆಲ್ಲಾ ಕೃತ್ಯ ಮಾಡಿಸಿತು ಗೊತ್ತಾ...
ಯಾರಿಗೆ ಎಷ್ಟೇ ವಿಶ್ವಾಸ ತೋರಿದರೂ, ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಅಂತಾ ಸಂದೇಶ ನೀಡುತ್ತೆ ಈ ಸ್ಟೋರಿ. ಹೌದು ಈ ಸ್ಟೋರಿಯಲ್ಲಿ ಕೊಲೆಯಾದ ಕಮಲಮ್ಮ, ಮನೆಯ ಕಾರು ಚಾಲಕನನ್ನು ಮನೆ ಮಗನಂತೆ ನೋಡಿಕೊಳ್ಳುತ್ತಿದ್ದರು. ಅಮ್ಮಾ ಅಂತಲೇ ಬಾಯಿಂದ ಕರೆಯುತ್ತಿದ್ದ ಡ್ರೈವರ್ ಹನುಮಂತ ನಾಯಕ್ ಗೆ ಎಲ್ಲಾ ಸ್ನಾತಂತ್ಪ ನೀಡಿದ್ರು. ಕಮಲಮ್ಮ ಪತಿ ಮಲ್ಲಿಕಾರ್ಜುನಯ್ಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ರು.ಮಲ್ಲಿಕಾರ್ಜುನಯ್ಯವರು ಸಹ ಈತನನ್ನು ನಂಬಿದ್ದರು. ಈ ನಂಬಿಕೆಯೇ ಮುಂದೊಂದು ದಿನ ತಮ್ಮ ಬದುಕನ್ನು ನಾಶ ಮಾಡುತ್ತೆ ಎಂದು ಆ ದಂಪತಿ ಊಹಿಸಿರಲಿಲ್ಲ. ಮಲ್ಲಿಕಾರ್ಜುನಯ್ಯ ಮತ್ತು ಕಮಲಮ್ಮ ದಂಪತಿ ತಮ್ಮ ಮಗಳ ಮುಂದಿನ ವೈದ್ಯಕೀಯ ಶಿಕ್ಷಣಕ್ಕಾಗಿ ಸಂಗ್ರಹಿಸಿಟ್ಟಿದ್ದ 35 ಲಕ್ಷ ರೂಪಾಯಿ ಹಣದ ಮೇಲೆ ಡ್ರೈವರ್ ಹನುಮಂತ ನಾಯಕ್ ಗೆ ಕಣ್ಣು ಬಿದ್ದಾಗ...ಆತನ ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಮೂಡಿದ್ದು ಹೇಗೆ ಗೊತ್ತಾ...,ಮುಂದೆ ಓದಿ
ಕಳೆದ ಒಂದು ವರ್ಷದಿಂದ ಮಲ್ಲಿಕಾರ್ಜುನರವರ ಮನೆಯಲ್ಲಿ, ಹನುಮಂತ ನಾಯ್ಕ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಈತನ ಮೃಧು ವರ್ತನೆಯಿಂದ ಮಲ್ಲಿಕಾರ್ಜುನಯ್ಯ ಮತ್ತು ಕಮಲಮ್ಮ ದಂಪತಿಗೆ ಈತನ ಬಗ್ಗೆ ಯಾವುದೇ ಅನುಮಾನಗಳು ಇರಲಿಲ್ಲ. ಹೀಗಾಗಿ ಮನೆಯ ಗುಟ್ಟುಗಳೆಲ್ಲಾ ಡ್ರೈವರ್ ಹನುಮಂತ್ ನಾಯಕ್ ಗೆ ಗೊತ್ತಿತ್ತು. ಮಲ್ಲಿಕಾರ್ಜುನಯ್ಯ ಹೊಸದುರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿದಿನ ಹನುಮಂತ ನಾಯಕ್ ಜೊತೆ ಕಾರಿನಲ್ಲಿ ಹೋಗಿ ಬರ್ತಿದ್ದರು. ಮನೆಯಲ್ಲಿ ಪತ್ನಿಯ ಸ್ವಂತ ಕೆಲಸಗಳಿದ್ದಲ್ಲಿ ಇದೇ ಹನುಮಂತ ನಾಯಕ್ ನೇ ಡ್ರೈವರ್ ಆಗಿ ಹೋಗಿ ಬರ್ತಿದ್ದ. ಹೀಗಾಗಿ ಮಲ್ಲಿಕಾರ್ಜುನಯ್ಯ ಮತ್ತು ಕಮಲಮ್ಮ ದಂಪತಿಗೆ ಸಹಜವಾಗಿಯೇ ಹನುಮಂತ ಹತ್ತಿರವಾಗಿದ್ದ. ಮಲ್ಲಿಕಾರ್ಜುನಯ್ಯನವರ ಮಗ ಎಂಬಿಬಿಎಸ್ ಮುಗಿಸಿದ್ದು, ಎಂಡಿ ಪ್ರವೇಶಕ್ಕಾಗಿ, ಸ್ನೇಹಿತರಿಂದ ಬಂದುಗಳಿಂದ 35 ಲಕ್ಷ ರೂಪಾಯಿ ಹಣವನ್ನು ಮನೆಯಲ್ಲಿ ತಂದಿಟ್ಟಿದ್ದರು. ಈ ಹಣವನ್ನು ಖುದ್ದು ಹನುಮಂತನೇ ಕಾರಿನಿಂದ ತೆಗೆದು, ಮನೆಯ ಬೆಡ್ ರೂಂ ನ ವಾರ್ಡ್ ರೋಬ್ ನಲ್ಲಿಟ್ಟದ್ದ,
ಹನುಮಂತ ನಾಯ್ಕ್ ನಿಗೆ 35 ಲಕ್ಷ ರೂಪಾಯಿ ಹಣದ ಮೇಲೆ ಕಣ್ಣು ಬಿದ್ದಾಗ ಮನಸ್ಸು ವಿಕಾರಗೊಳ್ಳುತ್ತೆ. ಹೇಗಾದ್ರೂ ಮಾಡಿ ಹಣ ಲಪಟಾಯಿಸಬೇಕು ಎಂಬ ಕೆಟ್ಟ ಆಲೋಚನೆ ಹೊಳೆಯುತ್ತೆ. ಇದನ್ನು ತಾನೊಬ್ಬನಿಂದ ಆಗುವ ಕೆಲಸವಲ್ಲ ಎಂದು ಆತನಿಗೆ ಗೊತ್ತಿತ್ತು. ಹೀಗಾಗಿ ಆತ, ಗೋಪಾಳದಲ್ಲಿ ನಡೆಯುವ ತನ್ನ ಸ್ನೇಹಿತರ ಬರ್ತ್ ಡೆ ಪಾರ್ಟಿಯಲ್ಲಿ , ವಿಚಾರವನ್ನು ಹಂಚಿಕೊಳ್ಳುತ್ತಾನೆ. ಆಗ ಸ್ಕೆಚ್ ರೂಪಿತವಾಗುತ್ತೆ. ಹಣ ದೋಚಲು ಹಲವು ಸುತ್ತಿನ ಸಭೆಗಳು ಅಲ್ಲಲ್ಲಿ ನಡೆಯುತ್ತವೆ. ಅಂತಿಮವಾಗಿ ಮಲ್ಲಿಕಾರ್ಜುನಯ್ಯ ಗೋವಾ ಪ್ರವಾಸಕ್ಕೆ ಹೊರಟಾಗ ಹನುಮಂತ ಅಂಡ್ ಟೀಂ ಅಲರ್ಟ್ ಆಗುತ್ತೆ.
ಹೌದು ಮಲ್ಲಿಕಾರ್ಜುನಯ್ಯ ಕೆಲ ದಿನಗಳಲ್ಲಿ ನಿವೃತ್ತಿಯಾಗುವವರಿದ್ದು. ಈ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ರು. ಆಗ ಬೇಕಂತಲೇ..,ಹನುಮಂತ ನಾಯಕ್ ಸರ್ ನಾನು ಗೋವಾಕ್ಕೆ ಬರೋದಕ್ಕೆ ಆಗೊಲ್ಲ. ಮನೆಯಲ್ಲಿ ಕೆಲಸ ಇದೆ. ನನ್ನ ಸ್ನೇಹಿತನನ್ನು ಕಳಿಸಿಕೊಡುತ್ತೇನೆ ಎಂದು ಸಬೂಬು ಹೇಳಿ ನುಣಿಚಿಕೊಂಡಿದ್ದಾನೆ. ಮಲ್ಲಿಕಾರ್ಜುನಯ್ಯ ಆಯ್ತಪ್ಪ ಎಂದು ಹೇಳಿ ಗೋವಾಗೆ ತೆರಳಿದ್ದಾರೆ. ಆಗ ಮಕ್ಕಳು ದೂರದೂರುಗಳಲ್ಲಿ ಇದ್ದ ಸಂದರ್ಭದಲ್ಲಿ ಮನೆಯಲ್ಲಿ ಕಮಲಮ್ಮ ಮನೆಯಲ್ಲಿ ಒಬ್ಬರೇ ಇರಬೇಕಾದ ಪರಿಸ್ಥಿತಿ ಎದುರಾಯಿತು. ಕಮಲಮ್ಮ ಮನೆಯಲ್ಲಿ ಒಬ್ಬರೇ ಇರುವುದು ಮನೆಯಲ್ಲಿ ಎಲ್ಲಿ ಹಣ ಇದೆ ಎಂಬುದು ಹನುಮಂತ ನಾಯಕ್ ಗೆ ಖಾತರಿಯಾಗಿತ್ತು.ಹೀಗಾಗಿ ತನ್ನ ಸ್ನೇಹಿತರಾದ ಮಲ್ಲಿಕಾರ್ಜುನಯ್ಯ ಗೋವಾಕ್ಕೆ ತೆರಳುತ್ತಿದ್ದಂತೆ ಮಾರನೇ ದಿನ ಮಲ್ಲಿಕಾರ್ಜುನ ತನ್ನ ಸ್ನೇಹಿತರಾದ ಅನುಪಿನಕಟ್ಟೆಯ ಪ್ರಭು ನಾಯ್ಕ, ಅಪ್ಪು ನಾಯ್ಡು ರಾಜ @ ತೀತಾ ಮತ್ತು ಶಿವಮೊಗ್ಗ ನಗರದ ಗುಂಡಪ್ಪ, ಶೆಡ್ ನ ವಾಸಿಗಳಾದ ಪ್ರದೀಪ @ ಮೊದಲಿಯಾರ್ ಮತ್ತು ಸತೀಶ್ ರವರೊಂದಿಗೆ ಸೇರಿಕೊಂಡು ಒಳಸಂಚು ರೂಪಿಸಿದ್ದಾನೆ. ಅಂದುಕೊಂಡಂತೆ ಕಮಲಮ್ಮ ಮನೆಯಲ್ಲಿ ಒಬ್ಬರೇ ಇರುವಾಗ :ರಾತ್ರಿ ತನ್ನ ಸ್ನೇಹಿತರೊಂದಿಗೆ ಕಮಲಮ್ಮ ಮನೆಗೆ ಬಂದಿದ್ದಾನೆ. ಆ ಸಂದರ್ಭದಲ್ಲಿ ಕಮಲಮ್ಮರಿಗೆ ಗಂಡ ಮಲ್ಲಿಕಾರ್ಜುನಯ್ಯನವರೇ ಫೋನ್ ಮಾಡಿದ್ರು. ಆಗ ಕಮಲಮ್ಮ ಹನುಮಂತ ನಾಯಕ್ ಮನೆಗೆ ಬಂದಿರೋ ವಿಷಯ ತಿಳಿಸಿದ್ರು.
ಹನುಮಂತ ನಾಯಕ್ ಅಂಡ್ ಟೀಂ ಕಮಲಮ್ಮರನ್ನು ಕೊಲೆ ಮಾಡಿದ ನಂತರ ಐದು ಮಂದಿ ಕಾರಿನಲ್ಲಿ ಅನುಪಿನ ಕಟ್ಟೆಯ ಮೂಲಕ ಪರಾರಿಯಾಗುತ್ತೆ. ಎಲ್ಲರೂ ಬೇರೆ ಬೇರೆ ಊರುಗಳಿಗೆ ಸ್ಕ್ಯಾಟರ್ ಆಗ್ತಾರೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಪೊಲೀಸರಿಗೆ ತನಿಖೆಗೆ ಕೊಂಚ ಹಿನ್ನಡೆಯಾಗುತ್ತೆ. ಎಲ್ಲರ ಮೊಬೈಲ್ ಸ್ವಿಚ್ ಆಗಿರುತ್ತೆ. ಮುಖ್ಯವಾಗಿ ಹನುಮಂತನ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಆತನ ಮೇಲೆಯೇ ಅನುಮಾನಗೊಂಡ ಪೊಲೀಸರು, ತನಿಖೆ ಕೈಗೊಳ್ಳುತ್ತಾರೆ. ಹನುಮಂತನ ಸ್ನೇಹಿತರು ಹಾಗು ಬಂಧುಗಳನ್ನು ವಿಚಾರಣೆಗೊಳಪಡಿಸುತ್ತಾರೆ. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪ್ರದೀಪ್ ಅಣ್ಣನನ್ನು ವಿಚಾರಿಸಿದಾಗ, ಕೆಲ ಸತ್ಯಗಳು ಹೊರಬೀಳುತ್ತೆ. ಆರೋಪಿಗಳು ಪೇಸ್ ಬುಕ್ ವಾಟ್ಸಾಪ್ ಮೂಲಕ ಕಾಲ್ ಮಾಡ್ತಿದ್ದ ಅಂಶ ಬೆಳಕಿಗೆ ಬರುತ್ತೆ. ಹನುಮಂತ ನಾಯಕ್ ಗೋಕರ್ಣದಲ್ಲಿ ಸೆರೆ ಸಿಕ್ಕರೆ, ಪ್ರದೀಪ್ ನನ್ನು ಚೆನ್ನೈ ನಲ್ಲಿ ಸೆರೆ ಹಿಡಿಯಲಾಗುತ್ತೆ. ತದ ನಂತರದಲ್ಲಿ ಪ್ರಕರಣದಲ್ಲಿ ಆರು ಆರೋಪಿಗಳನ್ನು ಬಂಧಿಸಲಾಗುತ್ತೆ.
ಆರೋಪಿಗಳ ವಿವರ1) ಹನುಮಂತನಾಯ್ಕ, ಹೆಚ್. ಆರ್, ಬಿನ್ ರೂಪಾ-ನಾಯ, 22 ವರ್ಷ, ಡ್ರೈವಿಂಗ್ ಕೆಲಸ, ವಾಸ ಹುಣಸೋಡು ತಾಂಡ, ಆಬ್ಬಲಗರ ಪೋಸ್ಟ್, ಶಿವಮೊಗ್ಗ ತಾಲೂಕು, 2) ಪ್ರದೀಪ್ ಏ @ ಮೊದಲಿಯಾರ ಬಿನ್ ಎ ವೇಲು, 21 ವರ್ಷ, ಕೂಲಿ ಕೆಲಸ ವಾಸ ಗುಂಡಪ್ಪ, ಶೆಡ್, 2ನೇ ಕ್ರಾಸ್, ಶಂಕರಮಠ ಹಿಂಬಾಗ, ಶಿವಮೊಗ್ಗ ಟೌನ್,
3) ಅಪ್ಪನಾಯ್ಕ @ ಅಪ್ಪ ಬಿನ್ ಶಂಕರನಾಯ್ಕ, 21 ವರ್ಷ, ಗಾರೆ ಕೆಲಸ, ವಾಸ ಅನುವಿಕಟ್ಟೆ, ಗ್ರಾಮ ಲಂಬಾಣಿ ತಾಂಡ ಶಿವಮೊಗ್ಗ, ತಾಲೂಕು,
4) ಪ್ರಭುನಾಯ್ಕ, ಸಿ @ ಸೈಕ್, ಬಿನ್ ಚಂದ್ರನಾಯ್ಕ, 26 ವರ್ಷ, ಗಾರೆ ಕೆಲಸ, ವಾಸ ಅನುಪಿನಕಟ್ಟೆ ಗ್ರಾಮ, 2ನೇ ಕ್ರಾಸ್ ಲಂಬಾಣಿ ತಾಂಡ, ಶಿವಮೊಗ್ಗ ತಾಲೂಕು ಸತೀಶ್ ವಿ ಬಿನ್ ಲೇಟ್ ಎ ವೇಲು, 26 ವರ್ಷ, ಕಾಂಟೇಜ್ ಕೆಲಸ, ವಾಸ ಗುಂಡಪ್ಪ, ಶೆಡ್, 2ನೇ ಕ್ರಾಸ್, ಶಂಕರ ಮಠಹಿಂಬಾಗ ಶಿವಮೊಗ್‌ಗ ಟೌನ್,
6) ರಾಜು ವೈ @ ತೀತಾ @ ತೀರ್ಥ ಬಿನ್ ವೆಂಕಾನಾಯ್ಕ, 24 ವರ್ಷ, ಗಾರೆ ಕೆಲಸ ವಾಸ ಅನುಪಿಕಟ್ಟೆ ಗ್ರಾಮ ಲಂಬಾಣಿ ತಾಂಡ, ಶಿವಮೊಗ್ಗ ತಾಲೂಕು
ಸುಮಾರು 43 ಲಕ್ಷದ ಸ್ವತ್ತು ವಶ
ಕಮಲಮ್ಮ ಕೊಲೆ ಮಾಡಿದ ಆರೋಪಿತಗಳಿಂದ 33,74,800/- ರೂ ನಗದು ಹಣ, ಕೃತ್ಯಕ್ಕೆ ಬಳಸಿದ್ದ ಅಂದಾಜು ಮೌಲ್ಯ 5,00,000/- ರೂಗಳ ಟಾಟಾ ಇಂಡಿಕಾ ಕಾರು, ಅಂದಾಜು ಮೌಲ, 90,000/- ರೂಗಳ 7 ಮೊಬೈಲ್ ಫೋನ್ ಗಳು, ಅಂದಾಜು ಮೌಲ್ಯ 1,50,000/- ರೂಗಳ 3 ಮೊಟರ್ ಸೈಕಲ್ ಗಳು ಮತ್ತು ಕೊಲೆ ಮಾಡಲು ಬಳಸಿದ್ದ ಆಯುಧ ಸೇರಿದಂತೆ ಒಟ್ಟು 41,14,800/- ಮೌಲ್ಯದ ನಗದು ಹಣ ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಕಾಲದಲ್ಲಿ ಪ್ರಕರಣ ಭೇದಿಸಿದ ತನಿಖಾ ತಂಡಗಳ ಉತ್ತಮವಾದ ಕಾರ್ಯವನ್ನು ಎಸ್ಪಿ ಮಿಥುನ್ ಕುಮಾರ್ ಶ್ಲಾಘೀಟಿದ್ದಾರೆ.
إرسال تعليق