ಮತಾಂತರ ನಿಷೇಧ ಕಾನೂನು ರದ್ದು, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆದು ಟಿಪ್ಪು ಜಯಂತಿ ಆಚರಣೆ ಸಾಧ್ಯತೆ: ಎಂಬಿ ಪಾಟೀಲ್

 ಕಾಂಗ್ರೆಸ್ ಸರ್ಕಾರ ವಿವಾದಾತ್ಮಕ ಗೋಹತ್ಯೆ ಕಾಯ್ದೆಯನ್ನು ರದ್ದುಪಡಿಸುವ, ಮತಾಂತರ ನಿಷೇಧ ಕಾನೂನನ್ನು ಹಿಂಪಡೆದು ಟಿಪ್ಪು ಸುಲ್ತಾನ್ ಜಯಂತಿಯನ್ನು ಪುನರಾರಂಭಿಸುವ ಸಾಧ್ಯತೆಯಿದೆ ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಭಾನುವಾರ ಸೂಚಿಸಿದ್ದಾರೆ.

                                                               ಎಂ.ಬಿ ಪಾಟೀಲ್

Posted By : Rekha.M

ವಿಜಯಪುರ: ಕಾಂಗ್ರೆಸ್ ಸರ್ಕಾರ ವಿವಾದಾತ್ಮಕ ಗೋಹತ್ಯೆ ಕಾಯ್ದೆಯನ್ನು ರದ್ದುಪಡಿಸುವ, ಮತಾಂತರ ನಿಷೇಧ ಕಾನೂನನ್ನು ಹಿಂಪಡೆದು ಟಿಪ್ಪು ಸುಲ್ತಾನ್ ಜಯಂತಿಯನ್ನು ಪುನರಾರಂಭಿಸುವ ಸಾಧ್ಯತೆಯಿದೆ ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಭಾನುವಾರ ಸೂಚಿಸಿದ್ದಾರೆ.

ಆದಾಗ್ಯೂ, 'ಈ ವಿಷಯಗಳು ಸೂಕ್ಷ್ಮವಾಗಿರುವುದರಿಂದ, ಅವುಗಳನ್ನು ಪಕ್ಷ ಮತ್ತು ಸರ್ಕಾರದಲ್ಲಿ ವಿವರವಾಗಿ ಚರ್ಚಿಸಲಾಗುವುದು' ಎಂದ ಅವರು, ಹಿಂದಿನ ಬಿಜೆಪಿ ಸರ್ಕಾರವು ರದ್ದುಗೊಳಿಸಿದ್ದ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿಯನ್ನು ಮರುಸ್ಥಾಪಿಸುವ ಬಗ್ಗೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಏಕೆಂದರೆ, ಈ ವಿಷಯವು ಇದೀಗ ನ್ಯಾಯಾಲಯದ ಅಂಗಳದಲ್ಲಿದೆ.

ಎಸ್‌ಸಿಗಳಿಗೆ ಶೇ 2ರಷ್ಟು ಮೀಸಲಾತಿ ಹೆಚ್ಚಳವನ್ನು ಹಿಂದಿನ ಸರ್ಕಾರದ ಕಣ್ಣೊರೆಸುವ ತಂತ್ರವಾಗಿದ್ದು, ಎಸ್‌ಸಿ ಮೀಸಲಾತಿಯನ್ನು ಹೆಚ್ಚಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲ. ರಾಜ್ಯ ಸರ್ಕಾರವು ಅದನ್ನು ಶಿಫಾರಸು ಮಾಡಬಹುದು. ಆದರೆ, ಕೇಂದ್ರವು ಅನುಮೋದಿಸಬೇಕು ಮತ್ತು ಸಂವಿಧಾನದಲ್ಲಿನ ಕೆಲವು ವಿಧಿಗಳನ್ನು ತಿದ್ದುಪಡಿ ಮಾಡಬೇಕು. ಹಿಂದಿನ ಬಿಜೆಪಿ ಸರ್ಕಾರ ಯಾವುದೇ ಕಾರ್ಯವಿಧಾನವನ್ನು ಅನುಸರಿಸದೆ ಕೇವಲ ಹೆಚ್ಚಳವನ್ನು ಘೋಷಿಸಿತು ಎಂದು ಅವರು ಹೇಳಿದರು.

ವಿವಿಧ ಸಮುದಾಯಗಳಿಗೆ ಅನುಕೂಲವಾಗುವಂತೆ ಶೇ 50 ರಷ್ಟು ಮೀಸಲಾತಿಯನ್ನು ತೆಗೆದುಹಾಕುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು. 

ಬಿಜೆಪಿಯು 'ಹಿಜಾಬ್ ಮತ್ತು ಹಲಾಲ್‌ನಂತಹ ಸೂಕ್ಷ್ಮ ಮತ್ತು ಪ್ರಜ್ಞಾಶೂನ್ಯ ವಿಷಯಗಳನ್ನು' ಮಾತ್ರ ಎತ್ತುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಸರ್ಕಾರವು ಜನರ ಜೀವನವನ್ನು ಉನ್ನತೀಕರಿಸುವಲ್ಲಿ ವಿಫಲವಾಗಿದೆ. ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಜನರನ್ನು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಅವರು ಹೇಳಿದರು.


Post a Comment

أحدث أقدم