ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿಗೆ ಮಣ್ಣು ಮುಕ್ಕಿಸಿದ ಆಪ್ತ: ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಸೋಲುಂಡ ಆಧುನಿಕ ಭಗೀರಥ!

 ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಮ್ಮ ಆಪ್ತನಾಗಿದ್ದ ಎಚ್.ಡಿ.ತಮ್ಮಯ್ಯ ಅವರಿಂದ ಸೋಲಿನ ಶಾಕ್ ಅನುಭವಿಸಿದ್ದಾರೆ.

                                                        ಸಿ.ಟಿ ರವಿ ಮತ್ತು ಸಿ.ಪಿ ಯೋಗೇಶ್ವರ್

Posted By : Rekha.M
Source : Online Desk

ಬೆಂಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಮ್ಮ ಆಪ್ತನಾಗಿದ್ದ ಎಚ್.ಡಿ.ತಮ್ಮಯ್ಯ ಅವರಿಂದ ಸೋಲಿನ ಶಾಕ್ ಅನುಭವಿಸಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ತಮ್ಮಯ್ಯ ಅವರು ಬಿಜೆಪಿಯ ಭದ್ರ ಕೋಟೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಅವರಿಗೆ ಟಿಕೆಟ್ ಘೋಷಿಸಿದಾಗ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಎಲ್ಲದರ ನಡುವೆ ತಮ್ಮಯ್ಯ ಬಿಜೆಪಿಯ ಪ್ರಬಲ ನಾಯಕನನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಿಂಗಾಯತ ಸಮುದಾಯಕ್ಕೆ ಸೇರಿರುವ ತಮ್ಮಯ್ಯ ಬಿಜೆಪಿಯಲ್ಲಿದ್ದರು. ಚಿಕ್ಕಮಗಳೂರು ನಗರಸಭೆಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅವರಿಗೆ ವಿರೋಧದ ನಡುವೆಯೂ ಕಾಂಗ್ರೆಸ್ ಟಿಕೆಟ್ ಘೋಷಿಸಿತ್ತು. ತಮ್ಮಯ್ಯ 60101 ಮತಗಳನ್ನು ಪಡೆದಿದ್ದು, ಸಿ.ಟಿ.ರವಿ 52201 ಮತಗಳನ್ನು ಪಡೆದಿದ್ದಾರೆ. 2018ರಲ್ಲಿ ಸಿ.ಟಿ.ರವಿ 26,314 ಮತಗಳ ಅಂತರದಿಂದ ಗೆದ್ದಿದ್ದರು.

ಇನ್ನೂ ಬೊಂಬೆ ನಗರಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ವಿರುದ್ಧ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಮತ್ತೊಮ್ಮೆ ಸೋಲನುಭವಿಸಿದ್ದಾರೆ. ಈ ಬಾರಿ ಗೆಲ್ಲಲೇಬೇಕೆಂದು ಶತಾಯ ಗತಾಯ ಪ್ರಯತ್ನಿಸಿದ್ದ ಯೋಗೇಶ್ವರ್ ಸ್ವಾಭಿಮಾನಿ ಸಂಕಲ್ಪ ನಡಿಗೆ ಕೈಗೊಂಡು ಜನರ ಬಳಿ ತಲುಪಲು ಪ್ರಯತ್ನಿಸಿದ್ದರು, ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿದ್ದ ನೀರಾವರಿ ಹರಿಕಾರ ಎಂದೇ ಯೋಗೇಶ್ವರ್ ಪ್ರಸಿದ್ಧರಾಗಿದ್ದರು. ದರೆ ಮತದಾರ ಪ್ರಭು ಮಾತ್ರ ಅವರ ಕೈ ಹಿಡಿಯಲಿಲ್ಲ.


Post a Comment

أحدث أقدم