ಶಿವಮೊಗ್ಗ:CEIR ( Centrol Equipment Identity Register) Portal ನ ಸಹಾಯದಿಂದ ಒಟ್ಟು 101 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿದ ಪೊಲೀಸ್ ತಂಡ.

 ಮೊಬೈಲ್ ಫೋನ್ ಗಳು ಕಳ್ಳತನ/ ದರೋಡೆ/ ಸುಲಿಗೆ/ ಕಳೆದು ಹೋದ ಸಂದರ್ಭದಲ್ಲಿ, ಶೀಘ್ರವಾಗಿ ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲು ಮತ್ತು ಮೊಬೈಲ್ ಗಳು ದುರುಪಯೋಗವಾಗದಂತೆ ತಡೆಗಟ್ಟಲು ಅನುಕೂಲವಾಗುವ ನಿಟ್ಟಿನಲ್ಲಿ CEIR ( Centrol Equipment Identity Register) Portal  ಅನ್ನು  ಅಬಿವೃದ್ದಿ ಪಡಿಸಲಾಗಿರುತ್ತದೆ.

ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಫ್ರಭು ಡಿ.ಟಿ. ಪೊಲೀಸ್ ಉಪಾಧೀಕ್ಷಕರು, ಜಿಲ್ಲಾ ಅಪರಾಧ ದಾಖಲಾತಿ ವಿಭಾಗ, ಶಿವಮೊಗ್ಗ ಜಿಲ್ಲೆ, ರವರ ಮೇಲ್ವಿಚಾರಣೆಯಲ್ಲಿ, ಶ್ರೀ, ಸಂತೋಷ್ ಪಾಟೀಲ ಪೊಲೀಸ್ ನಿರೀಕ್ಷಕರು, ಸೈಬರ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡವು CEIR ( Centrol Equipment Identity Register) Portal  ನ ಸಹಾಯದಿಂದ ಒಟ್ಟು 101 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿರುತ್ತಾರೆ.

 ಈ ದಿನ ದಿನಾಂಕ 14-04-2023 ರಂದು ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಮಾನ್ಯ ಪೊಲೀಸ್ ಸಭಾಂಗಣದಲ್ಲಿ ಮಾನ್ಯ  ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪತ್ತೆ ಮಾಡಲಾದ ಮೊಬೈಲ್ ಫೋನ್ ಗಳನ್ನು ಮಾಲೀಕರುಗಳಿಗೆ ಹಿಂದಿರುಗಿಸಿದರು. ಸದರಿ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳವು/ ದರೋಡೆ/ ಸುಲಿಗೆ/ ಕಳೆದು ಹೋದ ಸಂದರ್ಭದಲ್ಲಿ,CEIR ( Centrol Equipment Identity Register) Portal ಗೆ ಲಾಗಿನ್ ಆಗಿ, ದೂರನ್ನು ದಾಖಲಿಸಿ ಸದರಿ ಪೋರ್ಟಲ್ ನ ಉಪಯೋಗವನ್ನು ಪಡೆದುಕೊಳ್ಳುವುದು.


Post a Comment

أحدث أقدم