ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದು, ಆಸ್ತಿ ವಿವರವನ್ನೂ ಘೋಷಿಸಿದ್ದಾರೆ. ಸೋಮಶೇಖರ್ ಅವರು ಒಟ್ಟು 1.22 ಕೋಟಿ ರೂ. ಸಾಲ ಹೊಂದಿದ್ದು, ಕುಟುಂಬದ ಸದಸ್ಯರಿಗೆ 2.46 ಕೋಟಿ ರೂ. ಸಾಲ ನೀಡಿದ್ದಾರೆ. ಪುತ್ರನಿಗೆ 1.23 ಕೋಟಿ ರೂ.ಸಾಲ ನೀಡಿದರೆ.ತನ್ನ ಪತ್ನಿಗೆ 16 ಲಕ್ಷ ರೂ. ಹಾಗೂ ತಾಯಿ ಸೀತಮ್ಮ ಅವರಿಗೆ ಒಂದು ಕೋಟಿ ರೂ. ಸಾಲ ನೀಡಿದ್ದಾರೆ. ಮಾತ್ರವಲ್ಲದೆ, ಸಹೋದರ ಎಸ್.ಟಿ. ಶ್ರೀನಿವಾಸ್ ಗೆ 6.50 ಲಕ್ಷ ರೂ ಸಾಲ ನೀಡಿದ್ದಾರೆ ಎಸ್.ಟಿ ಸೋಮಶೇಖರ್ ಮತ್ತು ಅವರ ಮನೆಯ ಸದಸ್ಯರ ಹೆಸರಿನಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ ಇದೆ. ಸೋಮಶೇಖರ್ ಅವರ ಹೆಸರಿನಲ್ಲಿ 27.88 ಕೋಟಿ ರೂ. ಮೌಲ್ಯದ ಆಸ್ತಿ ಇದ್ದು, 5.46 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ರಾಧಾ ಹೆಸರಿನಲ್ಲಿ 53.86 ಲಕ್ಷ ರೂ. ಮೂಲ್ಯದ ಚರಾಸ್ತಿ, 8.72 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿ, ಪುತ್ರ ನಿಶಾಂತ್ ಹೆಸರಿನಲ್ಲಿ 48.18 ಲಕ್ಷ ರೂ. ಚರಾಸ್ತಿ, 3.75 ಕೋಟಿ ರೂ. ಮೂಲ್ಯದ ಸ್ಥಿರಾಸ್ತಿ ಇದೆ.
ಎಂ.ಟಿ.ಬಿ. ನಾಗರಾಜ್ ಆಸ್ತಿ ಹೆಚ್ಚಳ.:
1510 ಕೋಟಿ ಆಸ್ತಿಯನ್ನು ಎಂಟಿಬಿ ನಾಗರಾಜ್ ಘೋಷಣೆ ಮಾಡಿದ್ದಾರೆ. ಕಳೆದ 2019 ರ ವಿಧಾನಸಭ ಉಪ ಚುನಾವಣೆಯಲ್ಲಿ 1015 ಕೋಟಿ ಘೊಷಣೆ ಮಾಡಿದ್ದರು. ಕಳೆದ ನಾಲ್ಕು ವರ್ಷದಲ್ಲಿ 495 ಕೋಟ್ ಹೆಚ್ಚಳವಾಗಿರುವುದು ಅವರ ಆಸ್ತಿ ವಿವರ ಮೂಲಕ ತಿಳಿದು ಬಂದಿದೆ.
ನಿಖಿಲ್ ಕುಮಾರಸ್ವಾಮಿ 76.89 ಕೋಟಿ ಆಸ್ತಿ ಒಡೆಯ.:
ನಿಖಿಲ್ ಹೆಸರಲ್ಲಿ 46.81 ಕೋಟಿ ರೂ ಮೌಲ್ಯದ ಚರಾಸ್ತಿ, 28 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ರೇವತಿ ಹೆಸರಿನಲ್ಲಿ 1.79+ ಕೋಟಿ ರೂ ಮೌಲ್ಯದ ಚರಾಸ್ತಿ 28.36 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ. ಅದರಲ್ಲಿ ಪತ್ನಿಗೆ ಒಂದು ಕೋಟಿ ರೂ ಸಾಲ ನೀಡಿದ್ದಾರೆ. ಒಟ್ಟು 38.94 ಕೋಟಿ ಸಾಲ ಇದೆ. ತಂದೆಯಿಂದ 9.18 ಸಾಲ ಪಡೆದುಕೊಂದಿದ್ದಾರೆ. 65.45 ಲಕ್ಷ ಮೌಲ್ಯದ ಚಿನ್ನ, 16 ಕೆಜಿ ಬೆಳಿ, 11.08 ಲಕ್ಷ ರೂ ಮೌಲ್ಯ ಪತಿ ಬಳಿ 36.35 ಲಕ್ಷ ರೂ. ಮೌಲ್ಯದ ಚಿನ್ನ. 11.33 ಲಕ್ಷ ರೂ. ಮೌಲ್ಯದ 12.59 ಕ್ಯಾರೆಟ್ ವಜ್ರ, 23.20 ಲಕ್ಷ ಮೌಲ್ಯದ 33 ಕೆಜಿ ಬೆಳಿ ಇದೆ.
ಸಚಿವ ಮುಗೇಶ್ ನಿರಾಣಿ ಗಿಂತ ಪತ್ನಿಯೇ ಶ್ರೀಮಂತರು.:
ಬೃಹತ್ ಕೈಗಾರಿಗೆ ಸಚಿವ ಮುರುಗೇಶ್ ನಿರಾಣಿ ಅವರಿಗಿಂತ ಪತ್ನಿಯೇ ಶ್ರೀಮಂತರಾಗಿದ್ದಾರೆ. ಸಾಲದಲ್ಲಿಯೂ ಪತ್ನಿಯೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯ ಬೀಳಗಿ ವಿಧಾನಸಭೆ ಕ್ಷೇತ್ರದಿಂದ ಗುರುವಾರ ನಾಮಪ್ತ್ರ ಸಲ್ಲಿಸಿದ ಸಚಿವ ಮುರುಗೇಶ್ ನಿರಾಣಿ ನೀಡಿದ ಅಫಿಡವಿಟ್ ನಲ್ಲಿ ಈ ಚರಾಸ್ತಿ 27 ಕೋಟಿ 22 ಲಕ್ಷ 15 ಸಾವಿರದ 990 ರೂ, ಅವರ ಪತ್ನಿ ಕಮಲಾ ಅವರ ಚರಾಸ್ತಿಯ ಮೊತ್ತ 38 ಕೋಟಿ 35 ಲಕ್ಷ 40 ಸಾವಿರದ 018 ರೂ, ಸಚಿವ ನಿರಾಣಿಯವರ ಬಳಿ 8 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯಿದ್ದರೆ, ಪತ್ನಿ ಬಳಿ 23 ಕೋಟಿ 85 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿಯಿದೆ.
ಸಚಿವ ನಿರಾಣಿ 22 ಕೋಟಿ 62 ಲಕ್ಷ 74 ಸಾವಿರದ 474 ರೂ.ಸಾಲ ಮಾಡಿದ್ದರೆ, ಪತ್ನಿ ಹೆಸರಿನಲ್ಲಿ 47 ಕೋಟಿ 56 ಲಕ್ಷ 27 ಸಾವಿರದ 397 ರೂ. ಸಾಲವಿದೆ. ಸಚಿವರ ಬಳಿ 11 ಲಕ್ಷ ರೂ ಮೌಲ್ಯದ ಫೋರ್ಡ್ ಇಕೋ, 7 ಲಕ್ಷ 75 ಸಾವಿರ ರೂ. ಮೌಲ್ಯದ ಟಾಟಾ ಸಫಾರಿ, 20 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ, 15 ಲಕ್ಷ ರೂ ಬೆಳಿಯ ವಸ್ತುಗಳಿವೆ, ಅವರ ಪತ್ನಿ ಬಳಿ 6 ಲಕ್ಷ ರೂ, ಮೌಲ್ಯದ ಮಾರುತಿ ಎಸ್ಟೀಮ್ ಕಾರ್, 66 ಲಕ್ಷ ರೂ ಮೌಲ್ಯದ 1.150 ಗ್ರಾಂ ಚಿನ್ನ, 2 ಲಕ್ಷ ರೂ. ಮೌಲ್ಯದ ಬೆಳಿಯ ಆಭರಣಗಳಿವೆ. ಇನ್ನು ಸಚಿವರ ಹೆಸರಿನಲ್ಲಿ ಮುಧೋಳ, ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್, ಯಾದವಾಡದಲ್ಲಿ ನಿವೇಶನಗಲೀವೆ. ಬೀಳಗಿ ತಾಲೀಕಿನ ಮನ್ನಿಕೇರಿಯಲ್ಲಿ 4 ಎಕರೆ 4 ಕುಂಟೆ ಜಮೀನಿದೆ. ಪತ್ನಿ ಹೆಸರಿನಲ್ಲಿ ಮುಧೋಳದಲ್ಲಿ ಕಟ್ಟಡ, ಬೆಂಗಳೂರಿನ ಬ್ರಿಗೇಡ್ ಗೇಟ್ ವೇನಲ್ಲಿ ಫ್ಲ್ಯಾಟ್ ಇದೆ. ಪತ್ನಿ ಕಮಲಾ ಮುಧೋಳದಲ್ಲಿ 8 ಎಕರೆ 2 ಕುಂಟೆ ಜಮೀನು ಹೊಂದಿದ್ದಾರೆ.
ಗೋಪಾಲಯ್ಯ ಆಸ್ತಿ ವಿವರ:
ಗೋಪಾಲಯ್ಯ ಒಟ್ಟು ಆಸ್ತಿ 36.01 ಕೋಟಿ ರೂ ಇದೆ. ಚರಾಸ್ತಿ 1.96 ಕೋಟಿ, ಸ್ಥಿರಾಸ್ತಿ 35.01 ಕೋಟಿ ಇದ್ದು ಇದರಲ್ಲಿ ಸಾಲ 23.10 ಕೋಟಿ ಇದೆ. ಪತ್ನಿಯಿಂದ ಮಾಡಿದ ಕೈಸಾಲ 2.61 ಕೋಟಿ, ಬಂಗಾರ 15.60 ಲಕ್ಷ, ಬೆಳಿ 5 ಲಕ್ಷ ಇದ್ದು, ಪತ್ನಿ ಹೇಮಲತಾ ಒಟ್ಟು ಆಸ್ತಿ ಮೌಲ್ಯ 73.33 ಕೋಟಿ ಹೊಂದಿದ್ದಾರೆ. ಅವರು ಸಾಲ 39.50 ಕೋಟಿ ಮಾಡಿದ್ದು, ಬಂಗಾರ 82.60 ಲಕ್ಷ, ಬೆಳಿ 9.60 ಲಕ್ಷ ಹೊಂದಿದ್ದಾರೆ. ಮಗ ಮಂಜುನಾಥ ಗೌಡ ಆಸ್ತಿ 28.43 ಲಕ್ಷ ಮತ್ತು ಮತ್ತೊಬ್ಬ ಪುತ್ರ ಸಂಜಯ ಗೌಡ ಆಸ್ತಿ 4.71 ಲಕ್ಷ ಆಸ್ತಿ ಹೊಂದಿದ್ದಾರೆ.
ಆರ್. ಅಶೋಕ್ ಆಸ್ತಿ ವಿವರ:
ಆರ್. ಅಶೋಕ್ ಒಟ್ಟು ಆಸಿ ಮೌಲ್ಯ 5.28 ಕೋಟಿ ಇದೆ. ಚರಾಸ್ತಿ 2.18 ಕೋಟಿ, ಸ್ಥಿರಾಸ್ತಿ 3.10 ಕೋಟಿ ರೂ. ಹಾಗೂ ಆರ್. ಅಶೋಕ್ ಒಟ್ಟು ಸಾಲ 97.78 ಲಕ್ಷ ರೂ. ಪತ್ನಿಯಿಂದ ಪಡೆದ ಸಾಲ 42.10 ಲಕ್ಷ ರೂ, ಚಿನ್ನ 21.60 ಲಕ್ಷ. ಬೆಳಿ ಆಭರಣ 18.80 ಲಕ್ಷ ಇದೆ. ಪತ್ನಿ ಪ್ರಮಿಳಾ ರಾಣೀ ಒಟ್ಟು ಆಸ್ತಿ ಮೌಲ್ಯ 11.61 ಕೋಟಿ ಇದ್ದು, ಚರಾಸ್ತಿ 1.16 ಕೋಟಿ ರೂ. ಸ್ಥಿರಾಸ್ತಿ 10.44 ಕೋಟಿ ರೂ. ಪತ್ನಿ ಸಾಲ 64.04 ಲಕ್ಷ ಇದೆ. ಚಿನ್ನ 33.31 ಲಕ್ಷ ಬೆಳಿ 8.19 ಲಕ್ಷ, ವಜ್ರ ಆಭರಣ 17.30 ಲಕ್ಷ ಇದ್ದು, ಕುಟುಂಬದ ಒಟ್ಟು ಆಸ್ತಿ ಮೌಲ್ಯ 70.45 ಕೋಟಿ ರೂ. ಇದೆ.
ಭಾಸ್ಕರ್ ರಾವ್ ಆಸ್ತಿ ವಿವರ:
ಭಾಸ್ಕರ್ ರಾವ್ ಒಟ್ಟು ಆಸಿ ಮೌಲ್ಯ 7.56 ಕೋಟಿ ಇದೆ. ಚರಾಸ್ತಿ 2.81 ಕೋಟಿ, ಸ್ಥಿರಾಸ್ತಿ 4.75 ಕೋಟಿ, ಬಂಗಾರ 5 ಲಕ್ಷ , ಪತ್ನಿ ಚಂದಿರಾ ರಾವ್ ಒಟ್ಟು ಆಸ್ತಿ ಮೌಲ್ಯ 16.35 ಕೋಟಿ ಇದ್ದು ಚರಾಸ್ತಿ 2.38 ಕೋಟಿ, ಸ್ಥಿರಾಸ್ತಿ 13.97 ಕೋಟಿ, ಬಂಗಾರ 22.50 ಲಕ್ಷ, ವಜ್ರ ಆಭರಣ 9 ಲಕ್ಷ ಇದ್ದು, ಬೆಳಿ 6.50 ಲಕ್ಷ ಇದೆ ಎಂದು ತಿಳಿಸಿದ್ದಾರೆ.
إرسال تعليق