ಕರ್ಣಾಟಕ ರಾಜ್ಯ ವಿಧಾನಸಭಾ ಸಾರ್ವರ್ತಿಕ ಚುನಾವಣೆಯ ಹಿನ್ನಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದು, ಈ ದಿನ ದಿನಾಂಕ 03-04-2023 ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಅನಧೀಕೃತವಾಗಿ ಸಾಗಾಟ ಮಾಡುತ್ತಿದ್ದ ಈ ಕೆಳಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
1. ಲಾರಿಯಲ್ಲಿ ಸಾಗಾಟ ಮಾಡಿತ್ತಿದ್ದ ಅಂದಾಜು ಮೌಲ್ಯ ರೂ 2,30,000/- ಗಳ ಬಟ್ತೆ ಮತ್ತು ಗೃಹ ಉಪಯೋಗಿ ವಸ್ತುಗಳು.
2. ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು ಮೌಲ್ಯ ರೂ 60,000/- ಗಳ 80 ಬ್ಯಾಗ್ ಗಳಲ್ಲಿ ತುಂಬಿದ್ದ 24 ಕ್ವಿಂಟಾಲ್ ಅಕ್ಕಿ.
3. ಲಗೇಜ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು ಮೌಲ್ಯ ರೂ 1,00,000/- ಗಳ ಕಾಫಿ ಮತ್ತು ಟೀ ಪುಡಿ.
4. ಲಗೇಜ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು ಮೌಲ್ಯ ರೂ 1,38,000/- ಗಳ ಹಾರ್ಡ್ ವೇರ್ ಪರಿಕರಗಳು.
5. ಲಗೇಜ್ ವಾಹನದಲ್ಲಿ ಸಾಗಾಟ ಮಡುತ್ತಿದ್ದ ಅಂದಾಜು ಮೌಲ್ಯ ರೂ 1,50,000/- ಗಳ ಅಡುಗೆ ಎಣ್ಣೆ ಮತ್ತು ಜ್ಯೂಸ್.
6. ಲಗೇಜ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು ಮೌಲ್ಯ ರೂ 15,00,000/- ಗಳ ಬಟ್ಟೆ ಮತ್ತು ಹಾರ್ಡ್ ವೇರ್ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡಿದ್ದು,
ಮೇಲ್ಕಂಡ ಎಲ್ಲಾ ವಸ್ತುಗಳು ಸೇರಿ ಒಟ್ಟು ರೂ 21,78,000/- ಮೌಲ್ಯದ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
إرسال تعليق