ಶಿವಮೊಗ್ಗ: ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಪಥಸಂಚಲನ .

 ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ಹಿನ್ನೆಲೆಯಲ್ಲಿ, ಈ ದಿನ ದಿನಾಂಕ 05-04-2023 ರ ದು ಸಂಜೆ ಶ್ರೀ ತ್ಯಾಗರಾಜನ್, ಐಪಿಎಸ್, ಮಾನ್ಯ ಉಪ ಪೊಲೀಸ್ ಮಹಾನಿರೀಕ್ಷಕರು, ಪೂರ್ವ ವಲಯ ದಾವಣಗೆರೆ, ರವರ ಮಾರ್ಗದರ್ಶನದಲ್ಲಿ, ಶ್ರೀ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಶಿವಮೊಗ್ಗ ನಗರದಲ್ಲಿ ರೂಟ್ ಮಾರ್ಚ್ (ಪಥಸಂಚಲನವನ್ನು) ಹಮ್ಮಿಕೊಂಡಿದ್ದು, ಪಥಸಂಚಲನವನ್ನು ಶಿವಮೊಗ್ಗ ನಗರದ ಎನ್.ಟಿ. ರಸ್ತೆಯ ಮೂಲಕ ಸುಂದರಾಶ್ರಯ, ಓಟಿ ರಸ್ತೆ ಎ.ಎ.ಸರ್ಕಲ್, ಎಸ್. ಎನ್.ಸರ್ಕಲ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವೇಶ್ವರ ದೇವಸ್ಥಾನ, ಸಿನಿಮಾ ರಸ್ತೆ, ತಿಮ್ಮಪ್ಪನ ಕೊಪ್ಪಲು, ಕೆ.ಆರ್. ಪುರಂ ರಸ್ತೆ ಮುಖಾಂತರವಾಗಿ ಎನ್.ಟಿ. ರಸ್ತೆಯ ಅಂಬೆಡ್ಕರ್ ಹಾಸ್ಟೆಲ್ ಬಳಿ ಮುಕ್ತಾಯ ಮಾದಲಾಗಿರುತ್ತದೆ.


ರೂಟ್ ಮಾರ್ಚ್ (ಪಥಸಂಚಲನ) ದಲ್ಲಿ ಶ್ರೀ ಅನಿಲ್ ಕುಮಾರ್ ಭುಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಬಿಂದು ಮಣಿ ಆರ್.ಎಸ್. ಐಪಿಎಸ್ ಉಪಾಧೀಕ್ಷಕರು, ಶಿವಮೊಗ್ಗ- ಬಿ ಉಪ ವಿಭಾಗ, ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಸಿಆರ್ ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಯ ಅಧಿಕಾರಿ ಮತ್ತು ಸಿಬ್ಬಂಧಿಗಳು, ಕೆ ಎಸ್ ಆರ್ ಪಿ ( ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ) ಯ ಅಧಿಕಾರಿ ಮತ್ತು ಸಿಬ್ಬಂಧಿಗಳು, ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಸಿವಿಲ್ ಅತ್ತು ಡಿಎ ಆರ್ ನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.


Post a Comment

أحدث أقدم