ಶಿವಮೊಗ್ಗ: 03 ತಂಡಗಳ ಪ್ರತ್ಯೇಕ ದಾಳಿ: ಅಕ್ರಮವಾಗಿ ಸಾಗಿಸುತ್ತಿದ್ದ 11 ಮರಳು ತುಂಬಿದ ಮತ್ತು 02 ಜಲ್ಲಿಕಲ್ಲು ತುಂಬಿದ 13 ವಾಹನಗಳು ವಶ

 ಈ ದಿನ  ದಿನಾಂಕ 15-04-2023 ರಂದು ಶ್ರೀ ಸೆಲ್ವಮಣಿ ಆರ್, ಐಎಎಸ್, ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಸೂಚನೆಯ ಮೇರೆಗೆ, ಶ್ರೀ ಗಜಾನನ ವಾಮನ ಸುತರ, ಪೊಲೀಸ್ ಉಪಾಧೀಕ್ಷಕರು, ತೀರ್ಥಹಳಿ ಉಪ ವಿಭಾಗ ಮತ್ತು ಶ್ರೀ ಅಮೃತ್ ಅತ್ರೇಶ್, ತಹಶೀಲ್ದಾರ್, ತೀರ್ಥಹಳಿ, ತಾಲೂಕು ರವರ ಮಾರ್ಗದರ್ಶನದಲ್ಲಿ 03 ತಂಡಗಳು ಪ್ರತ್ಯೇಕ ದಾಳಿ  ನಡೆಸಿ, ಒಟ್ಟು 11 ಮರಳು ತುಂಬಿದ ಮತ್ತು 02 ಜಲ್ಲಿಕಲ್ಲು ತುಂಬಿದ್ದ ಒಟ್ಟು 13 ವಾಹನಗಳನ್ನು ವಶಕ್ಕೆ ಪಡೆದು, ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿರುತ್ತಾರೆ.


ತಂಡ-1 ಶ್ರೀ ಪ್ರವೀಣ್ ನೀಲಮ್ಮ ನವರ್, ಪೊಲೀಸ್ ವೃತ್ತ ರವರ ಮೇಲ್ವೀಚಾರಣೆಯಲ್ಲಿ,ಶ್ರೀ ಶಿವಕುಮಾರ್, ಪೊಲೀಸ್ ಉಪ ನಿರೀಕ್ಷಕರು, ಆಗುಂಬೆ ಪೊಲೀಸ್ ಠಾಣೆ, ಶ್ರೀ ಯಶವಂತ್, ಆರ್. ಐ ಮೇಘರವಳಿ, ಶ್ರೀ ಕುಮಾರ್, ಪಿಡಿಓ ಹೊನ್ನೆತಾಳು ರವರ ನೇತೃತ್ವದ ತಂಡವು, ಅರೇಹಳಿ, ಮಳಲೂರು, ಬಗ್ಗೋಡಿಗೆ ಮತ್ತು ಆಗುಂಬೆಯಲ್ಲಿ ಜಂಟಿ ದಾಳಿ ನಡೆಸಿ 03 ಮರಳು ತುಂಬಿದ ಮತ್ತು 02 ಜಲ್ಲಿಕಲ್ಲು ತುಂಬಿದ್ದ ಒಟ್ಟು 05 ವಾಹನಗಳನ್ನು ವಶ ಪಡಿಸಿಕೊಂಡಿರುತ್ತಾರೆ.

ತಂಡ-2 ಶ್ರೀ ಪ್ರವೀಣ್ ನೀಲಮ್ಮ ನವರ್, ಪೊಲೀಸ್ ವೃತ್ತ ನಿರೀಕ್ಸಕರು, ಮಾಳೂರು ವೃತ್ತ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ನವೀನ್ ಮಠಪತಿ ಮತ್ತು ಶ್ರೀ ಶಿವಾನಂದ್ ಡಿ, ಪೊಲೀಸ್ ಉಪ ನಿರೀಕ್ಷಕರು, ಮಾಳೂರು ಪೊಲೀಸ್ ಠಾಣೆ, ಶ್ರೀ ಸುಗುಣೇಶ್, ಆರ್.ಐ  ಮತ್ತೂರು, ಶ್ರೀ ಸುರೇಶ್, ಪಿಡಿಓ ಕನ್ನಂಗಿ ರವರ ನೇತೃತ್ವದ ತಂಡವು, ಜಂಟಿ ದಾಳಿ ನಡೆಸಿ ಮುಡುಬಾದ ಬಳಿ 07 ಮರಳು ತೂಂಬಿದ ವಾಹನಗಳನ್ನು ವಶ ಪಡಿಸಿಕೊಂಡಿರುತ್ತಾರೆ.

ತಂಡ-03 ಶ್ರೀ ಅಶ್ವತ್ ಗೌಡ, ಪೊಲೀಸ್ ನಿರೀಕ್ಷಕರು, ತೀರ್ಥಹಳಿ ಪೊಲೀಸ್ ಠಾಣೆ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಸಾಗರ್ ಅತರವಾಲ, ಪೊಲೀಸ್ ಉಪ ನಿರೀಕ್ಷಕರು, ತೀರ್ಥಹಳಿ, ಶ್ರೀ ಮೌನೀಶ್, ವಿಎ, ಕುರುವಳಿ ವೃತ್ತ, ಶ್ರೀ ಸಿದ್ದಾರೂಡ, ವಿಎ, ಆರಗಾ ವೃತ್ತ ಮತ್ತು ಶ್ರೀ ರೇಣುಕಾರಾಧ್ಯ, ಪಿಡಿಓ, ದೇವಂಗಿ ರವರ ನೇತೃತ್ವದ ತಂಡವು, ಜಂಟಿ ದಾಳಿ ನಡೆಸಿ ಬಕ್ಲಾಪುರದ ಹತ್ತಿರ ಮರಳು ತುಂಬಿದ ವಾಹನವನ್ನು ವಶ ಪಡಿಸಿಕೊಂಡಿರುತ್ತಾರೆ.


Post a Comment

أحدث أقدم