ರೋಣ: ಇನ್ನೂ ಮುಗಿಯದ ಜಿಗಳೂರು ಕೆರೆ ಕಾಮಗಾರಿ; ಉದ್ಘಾಟನೆಗೆ ಸಿಎಂ ಬೊಮ್ಮಾಯಿ ತರಾತುರಿ!

 ರೋಣ ತಾಲೂಕಿನ ಜಿಗಳೂರು ಕೆರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಆದರೆ ಸಿಎಂಬೊಮ್ಮಾಯಿ ಕಾಮಗಾರಿ ಉದ್ಘಾಟಿಸಲು ಮುಂದಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.



                                             ರೋಣ ತಾಲೂಕಿನಲ್ಲಿರುವ ಜಿಗಳೂರು ಕೆರೆ
By : Rekha.M
Online Desk

ಗದಗ: ರೋಣ ತಾಲೂಕಿನ ಜಿಗಳೂರು ಕೆರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಆದರೆ ಸಿಎಂಬೊಮ್ಮಾಯಿ ಕಾಮಗಾರಿ ಉದ್ಘಾಟಿಸಲು ಮುಂದಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವಿಧಾನಸಭೆ ಚುನಾವಣೆ ಅಧಿವೇಶನ ಹೊರಬೀಳುವ ಮೊದಲೇ ಹಲವು ಯೋಜನೆಗಳನ್ನು ಉದ್ಘಾಟಿಸಲು ಸಿಎಂ ಮುಂದಾಗಿದ್ದಾರೆ, ಜಿಗಳೂರು ಕೆರೆ ಕಾಮಗಾರಿ ಇನ್ನೂ ಶೇ,30 ರಷ್ಟು ಪೂರ್ಣಗೊಳ್ಳಬೇಕಾಗಿರುವುದರಿಂದ ಶನಿವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ.

ರೋಣ-ಗಜೇಂದ್ರಗಡ ರಸ್ತೆಯ ಜಿಗಳೂರು ಕೆರೆ ಕಾಮಗಾರಿ 10 ವರ್ಷಗಳಿಂದ ನಡೆಯುತ್ತಿದ್ದರೂ ಇನ್ನೂ ಶೇ.30ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುದು ನಿವಾಸಿಗಳ ಕೊರಗು. ಈ ಕೆರೆಯು 340 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಬರಗಾಲದ ಸಂದರ್ಭದಲ್ಲಿ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು, ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ. 

ಕೆರೆಯಲ್ಲಿ ಇನ್ನೂ ಕಳೆ ತುಂಬಿದ್ದು, ಕಾಮಗಾರಿ ಅಪೂರ್ಣವಾಗಿದ್ದರೂ ಉದ್ಘಾಟನೆಗೆ ಸಿಎಂ ಅವರನ್ನು ಆಹ್ವಾನಿಸಲಾಗಿದೆ. ಕೆಲವು ನಿವಾಸಿಗಳು ಎರಡು ದಿನಗಳ ಹಿಂದೆ ಸಾಂಕೇತಿಕ ಪ್ರತಿಭಟನೆಯನ್ನು ಪ್ರಾರಂಭಿಸಿದರು, ಈಗ ಅನೇಕ ನಿವಾಸಿಗಳು ಪ್ರತಿಭಟನೆಗೆ ಸೇರುತ್ತಿದ್ದಾರೆ.

ಎರಡು ದಶಕಗಳಿಂದ ಕೆರೆಯ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸ್ಥಳೀಯರು ಬೇಡಿಕೆ ಇಟ್ಟಿದ್ದರು, ಕೊನೆಗೂ 10 ವರ್ಷಗಳ ಹಿಂದೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಇದೀಗ ಅನಿಯಮಿತ ನೀರು ಪೂರೈಕೆಯಿಂದ ನಿವಾಸಿಗಳು ಪರದಾಡುವಂತಾಗಿದೆ. ಕೆರೆ ಕಾಮಗಾರಿ ಪೂರ್ಣಗೊಂಡಿದ್ದರೆ ರೋಣ ಮತ್ತು ಗಜೇಂದ್ರಗಡ ತಾಲೂಕಿನ ಏಳಕ್ಕೂ ಹೆಚ್ಚು ಗ್ರಾಮಗಳಿಗೆ ನಿರಂತರ ನೀರು ಪೂರೈಕೆಯಾಗುತ್ತಿತ್ತು. ಇನ್ನು ಕಾಮಗಾರಿ ನಡೆಯುತ್ತಿದ್ದು, ಬೊಮ್ಮಾಯಿ ಕೆರೆ ಉದ್ಘಾಟನೆಗೆ ಬರುತ್ತಿದ್ದಾರೆ ಎಂದು ರೋಣ ನಿವಾಸಿ ಶಿವಪ್ಪ ನವಲಗುಂದ ಹೇಳಿದರು.

ಜಿಲ್ಲಾಧಿಕಾರಿ ಬಂದು ಕಾಮಗಾರಿ ಪರಿಶೀಲಿಸಿ ಗ್ರೀನ್ ಸಿಗ್ನಲ್ ನೀಡಬೇಕು. ಶೇ.30ರಷ್ಟು ಕಾಮಗಾರಿ ಬಾಕಿ ಉಳಿದಿರುವ ಕೆರೆ ಉದ್ಘಾಟನೆ ವೇಳೆ ವೇಳೆ ಪ್ರತಿಭಟಿಸಿ ಸಿಎಂ ಗಮನಕ್ಕೆ ತರಲು ನಿರ್ಧರಿಸಿದ್ದೇವೆ, ಜಿಗಳೂರು ಕೆರೆ ಕುರಿತು ದೂರು ಬಂದಿದ್ದು, ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ ಎಂದು ಗದಗ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Post a Comment

أحدث أقدم