ಬೆಂಗಳೂರು ನಗರದ ಸಮೀಪ ಸುಮಾರು 2,000 ಎಕರೆಯಷ್ಟು ಬೃಹತ್ ಕ್ಯಾಂಪಸ್ ನಲ್ಲಿ ರಾಜ್ಯ, ದೇಶ ಹಾಗೂ ಜಾಗತಿಕ ಮಟ್ಟದ ಎಲ್ಲಾ ಟಾಪ್ ವಿಶ್ವವಿದ್ಯಾಲಯಗಳೂ ಇರುವಂತಹ ನಾಲೆಡ್ಜ್ ಸಿಟಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ.
ಸಿಎಂ ಬೊಮ್ಮಾಯಿಬೆಂಗಳೂರು: ಬೆಂಗಳೂರು ನಗರದ ಸಮೀಪ ಸುಮಾರು 2,000 ಎಕರೆಯಷ್ಟು ಬೃಹತ್ ಕ್ಯಾಂಪಸ್ ನಲ್ಲಿ ರಾಜ್ಯ, ದೇಶ ಹಾಗೂ ಜಾಗತಿಕ ಮಟ್ಟದ ಎಲ್ಲಾ ಟಾಪ್ ವಿಶ್ವವಿದ್ಯಾಲಯಗಳೂ ಇರುವಂತಹ ನಾಲೆಡ್ಜ್ ಸಿಟಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ.
ಗುರುವಾರ ನೂತನ ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯ ಆವರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಒಂದೇ ಪ್ರದೇಶದಲ್ಲಿ ಸ್ಥಾಪಿಸಲು ನಾಲೆಡ್ಜ್ ಸಿಟಿ ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.
ಈ ನಾಲೆಡ್ಜ್ ಸಿಟಿಯಲ್ಲಿ ದೇಶ ಹಾಗೂ ವಿದೇಶಗಳ ವಿವಿಗಳು ಇರಲಿವೆ. ಈ ಪ್ರದೇಶವನ್ನು ಬೆಂಗಳೂರು ಶಿಕ್ಷಣ ಜಿಲ್ಲೆಯಾಗಿ ಅಭಿವೃದ್ಧಿಪಡಿಸಲಾಗುವುದು. ಇದು ಯಶಸ್ವಿಯಾದರೆ, ಈ ಪರಿಕಲ್ಪನೆಯನ್ನು ರಾಜ್ಯದ ಉಳಿದ ಭಾಗಗಳಿಗೆ ವಿಸ್ತರಿಸಲಾಗುವುದು. ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಲು ಬೆಂಗಳೂರು ಸಮೀಪ ನಾಲೆಡ್ಜ್ ಸಿಟಿ ನಿರ್ಮಿಸಿಲುವುದು ನಮ್ಮ ಕನಸಾಗಿದೆ ಎಂದು ತಿಳಿಸಿದರು.
إرسال تعليق