ಕ್ಷೀರ ಅಭಾವದ ಪರಿಣಾಮ: ಬೆಣ್ಣೆನಗರಿ ದಾವಣಗೆರೆಯಲ್ಲಿ ಬೆಣ್ಣೆಗೆ ಬರ!

 ದಾವಣಗೆರೆ: ರಾಸುಗಳಿಗೆ ಚರ್ಮಗಂಟು ಕಾಯಿಲೆ, ಬೇಸಿಗೆ ಕಾಲಿಟ್ಟಿರುವುದು ಸೇರಿ ನಾನಾ ಕಾರಣಗಳಿಗೆ ಹಾಲು ಇಳುವರಿಯಲ್ಲಿ ಭಾರಿ ಕುಸಿತವಾಗಿದೆ. ಉಪ ಉತ್ಪನ್ನಗಳನ್ನು ತಯಾರಿಸಲು ಹಾಲಿನ ಕೊರತೆಯಿಂದ ಶಿವಮೊಗ್ಗ ಸೇರಿ ಹಲವು ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಬೆಣ್ಣೆಗೂ ಬರ ಬಂದಿದೆ. ಇದರಿಂದ ಬೆಣ್ಣೆದೋಸೆ ನಗರಿಗೆ ಬೇಡಿಕೆಯಷ್ಟು ಬೆಣ್ಣೆ ಸಿಗದೆ ಈ ನಗರ ತಲ್ಲಣಿಸುತ್ತಿದೆ.



ಒಂದು ಕಾಲದಲ್ಲಿ ರಾಜ್ಯದಲ್ಲಿ ಹಾಲಿನ ನೆರೆಯೇ ಉಕ್ಕಿ ಕೆಎಂಎಫ್‌ಗೆ ಮಾರಾಟ ಮಾಡುವುದೇ ಸವಾಲಾಗಿತ್ತು. ಹೊರ ರಾಜ್ಯ, ವಿದೇಶಗಳಿಗೂ ಹಾಲು ಇಲ್ಲಿಂದ ರವಾನೆ ಆಗುತ್ತಿತ್ತು. ಆದರೀಗ ರಾಜ್ಯದಲ್ಲಿ ಹಾಲು ಇಳುವರಿಯಲ್ಲಿ ಭಾರೀ ಕುಸಿತವಾಗಿದ್ದು ಕೆಲ ಒಕ್ಕೂಟಗಳಲ್ಲಿ ಉಪ ಉತ್ಪನ್ನ ಬೆಣ್ಣೆ, ತುಪ್ಪ ತಯಾರಿಸಲು ಆಗುತ್ತಿಲ್ಲ. ರಾಜ್ಯದಲ್ಲಿಉತ್ಪತ್ತಿ ಆಗುವ ಎಲ್ಲಾ ಹಾಲು ಲಿಕ್ವಿಡ್‌ ರೂಪದಲ್ಲಿ ಪಾಕೆಟ್‌ಗಳಲ್ಲಿಯೇ ಮಾರಾಟ ಆಗುತ್ತಿದ್ದು, ಹಾಲಿನ ಪೌಡರ್‌ ಮಾಡಲು ಹಾಲಿಲ್ಲ ಎಂಬಂಥ ಸ್ಥಿತಿಯಿದೆ. ಹಾಗಾಗಿ ಬೆಣ್ಣೆಗೂ ಬರ ಬಂದಿದ್ದು ಶಿಮೊಗ್ಗ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಕಳೆದ 20 ದಿನಗಳಿಂದ ಬೆಣ್ಣೆಯೇ ಸಿಗುತ್ತಿಲ್ಲ.

ಕುಸಿದ ಇಳುವರಿ:

ರಾಜ್ಯದಲ್ಲಿ ಜುಲೈ ತಿಂಗಳಿಂದ ಅಕ್ಟೋಬರ್‌ ತಿಂಗಳವರೆಗೂ ಕ್ಷೀರಾಭಿಷೇಕವೇ ಆಗಿತ್ತು. ಶಿವಮೊಗ್ಗ ಹಾಲು ಒಕ್ಕೂಟ ಒಂದರಲ್ಲಿಯೇ 6.80 ಲಕ್ಷ ಲೀಟರ್‌ ಹಾಲು ಹರಿದು ಬರುತ್ತಿತ್ತು. ಈಗ ಮಾರ್ಚ್ 6 ರ ಹೊತ್ತಿಗೆ 5,33,280 ಲೀಟರ್‌ಗೆ ಇಳಿದಿದೆ. ರಾಸುಗಳಿಗೆ ಚರ್ಮಗಂಟು ರೋಗದ ಜತೆ ಬೇಸಿಗೆ ಈ ಹೊತ್ತಲ್ಲಿ ಹಸಿರು ಮೇವು ಇಲ್ಲದೆ ಇಳುವರಿ ಕುಸಿತವಾಗುವುದು ಸಹಜ ಎಂದು ಒಕ್ಕೂಟಗಳು ಹೇಳುತ್ತಿವೆ. ಇದರ ಜತೆ ಬೆಲೆ ಸೇರಿದಂತೆ ನಾನಾ ಕಾರಣಗಳಿಗೆ ರೈತರು ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಸರಕಾರ ನೀಡುವ ಸಹಾಯಧನ ಐದಾರು ತಿಂಗಳಾದರೂ ಬರದೆ ಇರುವುದು ರೈತರ ಪಾಲಿಗೆ ಹೈನುಗಾರಿಕೆ ಹೊರೆಯಾಗಿದೆ.

ಶಿಮುಲ್‌ ವಾಸಿ:

ಶಿವಮೊಗ್ಗ, ಹಾಸನ ಮತ್ತು ಮಂಡ್ಯ ಒಕ್ಕೂಟಗಳಲ್ಲಿಬೇಸಿಗೆಯ ಹಾಲು ಇಳುವರಿಯಲ್ಲಿಹೆಚ್ಚಿನ ವ್ಯತ್ಯಾಸ ಆಗಿಲ್ಲ. ಅಲ್ಲಿಹಿಂದಿನ ಬೇಸಿಗೆ ದಿನಗಳಲ್ಲಿಎಷ್ಟು ಹಾಲು ಹರಿದು ಬರುತ್ತಿತ್ತೋ ಅಷ್ಟೇ ಇಳುವರಿಯಿದೆ. ಶಿಮುಲ್‌ನಲ್ಲಿಕಳೆದ ಈ ದಿನಗಳಲ್ಲಿ5.32 ಲಕ್ಷ ಲೀಟರ್‌ ಹಾಲು ಹರಿದು ಬರುತ್ತಿತ್ತು. ಈ ವರ್ಷ ಕಳೆದ ವರ್ಷಕ್ಕಿಂತ ಒಂದು ಸಾವಿರ ಲೀಟರ್‌ ಹಾಲು ಹೆಚ್ಚಿದೆ. ಆದರೆ, ಇತರೆ ಒಕ್ಕೂಟಗಳಲ್ಲಿಹಾಲು ಇಳುವರಿ ಕುಸಿದಿರುವುದರಿಂದ ಹಾಲನ್ನು ಇತರೆ ಜಿಲ್ಲೆಗಳಿಗೆ ರವಾನಿಸಲಾಗುತ್ತಿದೆ. ಹಾಗಾಗಿ ಬೆಣ್ಣೆ, ತುಪ್ಪದಂತ ಉಪ ಉತ್ಪನ್ನಗಳ ತಯಾರಿಕೆ ಮೇಲೆ ಪರಿಣಾಮ ಬಿದ್ದಿದ್ದು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ 20 ದಿನಗಳಿಂದ ಬೆಣ್ಣೆಗೆ ಬರ ಬಂದಿದೆ.

ಉತ್ತಮ ಮಳೆಯೂ ಕಾರಣ

ಕೋಲಾರ, ಬೆಂಗಳೂರು, ತುಮಕೂರು ಒಕ್ಕೂಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಆಗುತ್ತಿತ್ತು, ಈಗ ಭಾರಿ ಕುಸಿತವಾಗಿದೆ. ರಾಜ್ಯದೆಲ್ಲೆಡೆ ಕಳೆದ ಎರಡು ವರ್ಷದಿಂದ ಉತ್ತಮ ಮಳೆ ಬಿದ್ದಿರುವುದರಿಂದ ಹೈನುಗಾರಿಕೆ ಬಿಟ್ಟು ಬೇಸಾಯಕ್ಕೆ ಹಿಂತಿರುಗಿದ್ದಾರೆ. ಈ ಮೊದಲು ಬರ ಇದ್ದಿದ್ದರಿಂದ ಬೆಳೆ ಬೆಳೆಯಲು ಆಗದೆ ಬದುಕಿನ ಬಂಡಿ ಸಾಗಿಸಲು ರೈತರು ಹೈನುಗಾರಿಕೆಗೆ ಇಳಿದಿದ್ದರು ಎಂದು ಹೇಳಲಾಗುತ್ತಿದೆ.

ಬೆಣ್ಣೆದೋಸೆಗೆ ಅಘಾತ

ದಾವಣಗೆರೆ ಸೀಮೆಯಲ್ಲಿ ಕಳೆದ 20 ದಿನಗಳಿಂದ ಬೆಣ್ಣೆ ಸಿಗದೆ ಇರುವುದರಿಂದ ದೊಡ್ಡ ಸಮಸ್ಯೆ ಆಗಿದೆ. ಬೆಣ್ಣೆ ದೋಸೆ ಹೋಟೆಲ್‌ನವರು ಶಿಮುಲ್‌ ಮಾರಾಟ ಮಳಿಗೆಗಳ ಎಡತಾಕುತ್ತಿದ್ದಾರೆ. ಈ ಹಿಂದಿನಂತೆ ಸಂತೆಯಲ್ಲಿಮಾರಾಟ ಮಾಡುವ ಬೆಣ್ಣೆಗೂ ಮುಗಿ ಬಿದ್ದಿದ್ದು ಅಲ್ಲಿಯೂ ಬೆಣ್ಣೆ ಕೊರತೆ ಕಂಡು ಬಂದಿದೆ.


Post a Comment

أحدث أقدم