ತೀರ್ಥಹಳಿ: ಕುಡಿದ ಅಮಲಿನಲ್ಲಿ ಜಗಳ ಮಾಡಿ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ: ಪ್ರಕರಣವನ್ನು ಭೇಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ತನಿಖಾ ತಂಡ.

 ದಿನಾಂಕ 24-03-2023 ರಂದು ರಾತ್ರಿ ತೀರ್ಥಹಳಿ ಪೊಲೀಸ್ ಠಾಣಾ ವ್ಯಾಪ್ತಿಯ ತೀರ್ಥಹಳಿ ಟೌನ್ ಸಂತೆ ಮೈದಾನದಲ್ಲಿ ಮಲಗಿದ್ದ ಪೂರ್ಣೇಶ, 39 ವರ್ಷ, ರಾವೆ ಗ್ರಾಮ, ಹೊಸನಗರ ತಾಲೂಕು ಈತನನ್ನು ಯಾವೂದೋ ಉದ್ದೇಶಕ್ಕಾಗಿ ಯಾರೋ ದುಷ್ಕರ್ಮಿಗಳು ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆಂದು ಮೃತನ ಸಹೋದರ ಪ್ರಕಾಶ್ ರವರು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0059/2023 ಕಲಂ 302 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

 ಪ್ರಕರಣದ ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್, ಐಪಿಎಸ್, ಮನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ, ಶ್ರೀ ಗಜಾನನ ವಾಮನ ಸುತರ, ಮಾನ್ಯ ಪೊಲೀಸ್ ಉಪಾಧೀಕ್ಷಕರು, ತೀರ್ಥಹಳಿ ಉಪ ವಿಭಾಗ ರವರ ಮೇಲ್ವೀಚಾರಣೆಯಲ್ಲಿ ಶ್ರೀ ಅಶ್ವತ್ಥ ಗೌಡ, ಜೆ. ಪೊಲೀಸ್ ನಿರೀಕ್ಷಕರು, ತೀರ್ಥಹಳಿ ಪೊಲೀಸ್ ಠಾಣೆ, ಶ್ರೀ ಗಾದಿಲಿಂಗಪ್ಪ ಪಿಎಸ್ ಐ ಮತ್ತು ಸಿಬ್ಬಂಡಿಗಳಾದ ಹೆಚ್. ಸಿ ಸುಧಾಕರ, ಪರಮೇಶ್ವರ ನಾಯ್ಕ, ದಿವಾಕರ, ಪಿಸಿ ದೀಪಕ್, ರವಿ ಮತ್ತು ಅವಿನಾಶ ರವರುಗಲನ್ನೊಳಗೊಂಡ ತಂದವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ಪ್ರಕರಣದ ಆರೋಪಿತನಾದ ಪ್ರಕಾಶ ಜಂಬಗಿ @ ಪಕೀರಪ್ಪ, 24 ವರ್ಷ, ಅರ್ಬನ್ ಓಣಿ ಗಲ್ಲಿ, ದೇಸಾಯಿ ಸರ್ಕಲ್ ಹತ್ತಿರ, ಸವದತ್ತಿ ರಸ್ತೆ, ನರಗುಂದ ತಾಲೂಕು, ಗದಗ ಜಿಲ್ಲೆ ಈತನನ್ನು ದಿನಾಂಕ 26-03-2023 ರಂದು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರ್ ಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದ್. 

ಆರೋಪಿತನನ್ನು ವಿಚಾರಣೆಗೊಳಪಡಿಸಿದಾಗ ದಿನಾಂಕ 24-03-2023 ರಂದು ರಾತ್ರಿ ಮೃತ ಪೂರ್ಣೇಶ ಮತ್ತು ಆರೋಪಿ ಪ್ರಕಾಶ ಜಂಬಗಿ@ ಪಕೀರಪ್ಪನಿಗೆ ಬೈದು ಜಗಳ ತೆಗೆದಿದ್ದು, ಆಗ ಆರೋಪಿಯು ಸಿಟ್ಟಿನಿಂದ ಪೂರ್ಣೇಶನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವುದು ಈ ವರೆಗಿನ ತನಿಖೆಯಿಂದ ತಿಳಿದು ಬಂದಿರುತ್ತದೆ.

ಸದರಿ ಪ್ರಕರಣದ ಆರೋಪಿಯನ್ನು ತ್ವರಿತವಾಗಿ ಪತ್ತೆ ಹಚ್ಚಿ ಉತ್ತಮ ಕರ್ತವ್ಯ ನಿರ್ವಹಿಸಿದ ತನಿಖಾ ತಂದಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.


Post a Comment

أحدث أقدم