ಆಜಾನ್ ವಿವಾದ: ಡಿಸಿ ಕಚೇರಿಗೆ ಗೋಮೂತ್ರ ಸಿಂಪಡಿಸಿದ ಬಜರಂಗದಳ, ವಿಎಚ್‌ಪಿ ಕಾರ್ಯಕರ್ತರು

 ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ್ದ ಸ್ಥಳವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳದ ಕಾರ್ಯಕರ್ತರು ಸೋಮವಾರ ಗೋಮೂತ್ರ ಸಿಂಪಡಿಸಿ ಶುದ್ಧೀಕರಣ ಮಾಡಿದರು.

                                           ಗೋಮೂತ್ರ ಸಿಂಪಡಿಸುತ್ತಿರುವುದು.

By : Rekha.M
Online Desk



ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ್ದ ಸ್ಥಳವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳದ ಕಾರ್ಯಕರ್ತರು ಸೋಮವಾರ ಗೋಮೂತ್ರ ಸಿಂಪಡಿಸಿ ಶುದ್ಧೀಕರಣ ಮಾಡಿದರು.

ಪೊಲೀಸರ ಪ್ರತಿರೋಧದ ನಡುವೆಯೂ ಗೋಮೂತ್ರ ಸಿಂಪಡಣೆ ಮಾಡಲಾಯಿತು. ಇದರಿಂದ ಡಿಸಿ ಕಚೇರಿ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಹಿಂೂ ಸಂಘಟನೆಯ ಕಾರ್ಯಕರ್ತರು ಆಜಾನ್ ಕೂಗಿದ್ದ ಸ್ಥಳದಲ್ಲಿ ಗೋಮೂತ್ರ ಸಿಂಪಡಿಸಿದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗೋಮೂತ್ರ ಸಿಂಪಡಣೆ ಮಾಡದಂತೆ ತಡೆಯಲು ಮುಂದಾದರು. ಆದರೂ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಗೋ ಮೂತ್ರ ಸಿಂಪಡಿಸಿ ಘೋಷಣೆಗಳನ್ನು ಕೂಗಿದರು.

ಶಾಂತಿ ಕದಡಲು ಕೋಮುವಾದಿಗಳು ಆಜಾನ್ ಪಠಿಸಿದ್ದಾರೆ. ಇದರ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಶಾಂತಿ ಕದಡಲು ಕೋಮುವಾದಿಗಳು ಆಜಾನ್ ಪಠಿಸಿದ್ದಾರೆಂದು ಹೇಳಿದರು.

ಬಜರಂಗದಳದ ಮುಖಂಡ ರಾಜೇಶ್‌ಗೌಡ ಮಾತನಾಡಿ, ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಜಿಲ್ಲಾಧಿಕಾರಿ ಕಚೇರಿ ಎದುರು ಆಜಾನ್‌ ಹೇಳುವ ಮೂಲಕ ಕೋಮುವಾದ ಪ್ರದರ್ಶಿಸಲಾಗಿದೆ. ಇದು ಆಜಾನ್‌ ಹೇಳುವ ಸ್ಥಳವಲ್ಲ, ಹೀಗಾಗಿ ಸ್ಥಳವನ್ನು ಶುದ್ಧೀಕರಿಸಿದ್ದೇವೆಂದು ಹೇಳಿದರು.

ಕಳೆದ ಬಿಜೆಪಿ ಶಾಸಕ ಈಶ್ವರಪ್ಪ ಅವರು ಆಜಾನ್ ಕುರಿತು ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಹೇಳಿಕೆ ವಿರೋಧಿಸಿದ್ದ ಕೆಲ ಮುಸ್ಲಿಂ ಯುವಕರು ಜಿಲ್ಲಾಧಿಕಾರಿ ಕಚೇರಿ ಬಳಿ ಆಜಾನ್ ಪಠಿಸಿದ್ದರು. ಬಳಿಕ ಯುವಕನನ್ನು ಬಂಧಿಸಿದ್ದ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದರು. ಯುವಕ ಆಜಾನ್ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. ಇದಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Post a Comment

أحدث أقدم