ಪೊಲೀಸ್ ದಾಳಿಯ ವೇಳೆ ತುಳಿತದಿಂದ ಶಿಶುವೊಂದು ಮೃತಪಟ್ಟಿದ್ದು ಜಾರ್ಖಂಡ್ ನ 6 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ನವಜಾತ ಶಿಶು (ಸಂಗ್ರಹ ಚಿತ್ರ)ಜಾರ್ಖಂಡ್: ಪೊಲೀಸ್ ದಾಳಿಯ ವೇಳೆ ತುಳಿತದಿಂದ ಶಿಶುವೊಂದು ಮೃತಪಟ್ಟಿದ್ದು ಜಾರ್ಖಂಡ್ ನ 6 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ 6 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದರೆ, 5 ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಜಾರ್ಖಂಡ್ ನ ಗಿರಿಡಿಹ್ ನಲ್ಲಿ ಈ ಘಟನೆ ನಡೆದಿದೆ. 4 ದಿನಗಳ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಾಗಿದ್ದು, ಪೊಲೀಸ್ ಅಧಿಕಾರಿಗಳ ಬೂಟಿನ ತುಳಿತಕ್ಕೆ ಒಳಗಾದ ಮಗುವಿನ ಗುಲ್ಮ (ದೇಹದ ಅಂಗ) ಛಿದ್ರಗೊಂಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಬ್ಬರು ವ್ಯಕ್ತಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದಾಗ ಈ ಘಟನೆ ನಡೆದಿದೆ. ಮಗುವಿನ ಅಜ್ಜ ಹಾಗೂ ಇನ್ನೂ ಇತರರ ವಿರುದ್ಧ ಪೊಲೀಸರು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲು ಹೋಗಿದ್ದರು.
ಘಟನೆಯ ಬಗ್ಗೆ ಸಿಎಂ ಹೇಮಂತ್ ಸೊರೇನ್ ತನಿಖೆಗೆ ಆದೇಶಿಸಿದ್ದರು.
إرسال تعليق