ಸರ್ಕಾರದ ನಿರಾಸಕ್ತಿಗೆ ಬೇಸತ್ತ ಕೊಪ್ಪಳದ 39 ಗ್ರಾಮಗಳು: ಚುನಾವಣೆ ಬಹಿಷ್ಕಾರದ ಬೆದರಿಕೆ

 ಹಲವು ವರ್ಷಗಳಿಂದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ರೈತರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಏಪ್ರಿಲ್/ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.

                                                           ಸಾಂದರ್ಭಿಕ ಚಿತ್ರ

By : Rekha.M
Online Desk

ಗದಗ: ಹಲವು ವರ್ಷಗಳಿಂದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ರೈತರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಏಪ್ರಿಲ್/ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.

ಕೊಪ್ಪಳದ ಗಂಗಾವತಿ ತಾಲೂಕಿನ ಇರ್ಕಲಗಡ ಹೋಬಳಿಯ ಮೂವತ್ತೊಂಬತ್ತು ಗ್ರಾಮಗಳು ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಹೊರಗುಳಿಯುವಂತೆ ಒತ್ತಾಯಿಸುತ್ತಿರುವುದರಿಂದ ಚುನಾವಣೆಯಿಂದ ದೂರವಿರಲು ಮುಂದಾಗಿವೆ.

ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದ ನೂರಾರು ರೈತರು ಕಳೆದ ಅರ್ಧ ಶತಮಾನದಿಂದ ಇಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದರಿಂದ ಗ್ರಾಮಸ್ಥರನ್ನು ಸ್ಥಳಾಂತರ ಮಾಡುವಂತೆ  ಸೂಚಿಸಿದ್ದಾರೆ ಎನ್ನಲಾಗಿದೆ.

‘ನಾವು ಬಹಳ ದಿನಗಳಿಂದ ಆಡಳಿತ ಮತ್ತು ಅರಣ್ಯ ಇಲಾಖೆಯೊಂದಿಗೆ ಜಗಳವಾಡುತ್ತಿದ್ದೇವೆ, ಕರಡಿಗಳ ಕಾಟದಿಂದ ರೈತರು ಒಂಟಿಯಾಗಿ ಜಮೀನಿಗೆ ಹೋಗುವುದು ಅಸಾಧ್ಯವಾಗಿದೆ. ಮರ ಬಿದ್ದರೆ ಅರಣ್ಯಾಧಿಕಾರಿಗಳು ಕ್ಷಿಪ್ರವಾಗಿ ಸ್ಥಳಕ್ಕೆ ಬರುತ್ತಾರೆ. ಕತ್ತರಿಸುತ್ತಾರೆ. ಆದರೆ ಕರಡಿಯನ್ನು ರಕ್ಷಿಸಲು ನಾವು ಕರೆದರೆ ಅವರು ಬರಲೇ ಇಲ್ಲ, ಗ್ರಾಮಸ್ಥರು ಹಿಡಿದ ನಂತರ ಅವರು ಪ್ರಾಣಿಯನ್ನು ತೆಗೆದುಕೊಂಡು ಹೋಗಲು ಬರುತ್ತಾರೆ, ಭೂಮಿಯನ್ನು ತೆರವುಗೊಳಿಸಿ ಮಾಡುತ್ತಿರುವ ಕೃಷಿಯನ್ನು ನಿಲ್ಲಿಸುವಂತೆ ಅರಣ್ಯಾಧಿಕಾರಿಗಳು  ಕೇಳುತ್ತಿದ್ದಾರೆ. 1970ರಿಂದ ನಾವು ಇಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದೇವೆ. ಈ ಸಮಸ್ಯೆಗೆ ಸರ್ಕಾರ ಮಧ್ಯಪ್ರವೇಶಿಸಿ ಪರಿಹರಿಸುವಂತೆ ಮನವಿ ಮಾಡುತ್ತಿದ್ದೇವೆ ಎಂದುಹೋರಾಟಗಾರ ಕರಿಯಣ್ಣ ಎಚ್.ಸಂಗಟಿ ಹೇಳಿದರು.

ಭೂದಾಖಲೆ ಸಿಗುವವರೆಗೆ ಆಡಳಿತದ ವಿರುದ್ಧ ಪ್ರತಿಭಟಿಸುತ್ತೇವೆ, ಕೇವಲ ಹನ್ನೆರಡು ರೈತರು ಮಾತ್ರ ತಮ್ಮ ಹೆಸರಿಗೆ ಭೂ ದಾಖಲೆಗಳನ್ನು ಹೊಂದಿದ್ದಾರ. ನಮ್ಮಲ್ಲಿ ಯಾವುದೇ ದಾಖಲೆಗಳಿಲ್ಲ, ಅರಣ್ಯ ಇಲಾಖೆಯು ಕೃಷಿಯನ್ನು ನಿಲ್ಲಿಸುವಂತೆ ನಮಗೆ ಒತ್ತಡ ಹೇರುತ್ತಿದೆ. ಕುಟುಂಬಗಳು ಎಲ್ಲಿಗೆ ಹೋಗಬೇಕು? ಎಂದು ಮತ್ತೊಬ್ಬ ಕಾರ್ಯಕರ್ತ ವೈ.ಎನ್.ಗೌಡ ಪ್ರಶ್ನಿಸಿದ್ದಾರೆ.

ಸಾಗುವಳಿ ಪ್ರದೇಶವು ಅರಣ್ಯ ಭೂಮಿ ಎಂದು ಹಳೆಯ ದಾಖಲೆಗಳು ಸಾಬೀತುಪಡಿಸುತ್ತವೆ . ರೈತರಿಗೆ ಹಲವು ಬಾರಿ ನೋಟಿಸ್ ಕಳುಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅರಣ್ಯ ಇಲಾಖೆಯು ಸಾಮಾನ್ಯವಾಗಿ ಚಿರತೆ ಮತ್ತು ಕರಡಿಗಳು ಜನವಸತಿ ಸಮೀಪ ಬಂದಾಗ ರಕ್ಷಣಾ ಕರೆಗಳಿಗೆ ಸ್ಪಂದಿಸುತ್ತದೆ ಎಂದು ಕೊಪ್ಪಳದ ಅರಣ್ಯಾಧಿಕಾರಿ ತಿಳಿಸಿದ್ದಾರೆ.


    Post a Comment

    أحدث أقدم