ಚಲಿಸುವ ರೈಲಿಗೆ ಕಲ್ಲು ಹೊಡೆಯುವವರ ಮೇಲೆ ಕಣ್ಗಾವಲು; ಸಿಕ್ಕಿಬಿದ್ದರೆ 10 ವರ್ಷ ಜೈಲು ಶಿಕ್ಷೆ ಫಿಕ್ಸ್‌

 ರೈಲಿನ ಮೇಲೆ ಕಲ್ಲು ತೂರಾಟದಂತಹ ಕೃತ್ಯವೆಸಗಿದವರಿಗೆ ಹತ್ತು ವರ್ಷಗಳು ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿಅವಕಾಶವಿದ್ದು, ಪ್ರಾಣಹಾನಿ ಕಂಡುಬಂದಲ್ಲಿ ಜೀವಾವಧಿ ಶಿಕ್ಷೆಯೂ ಆಗಬಹುದು. ಭಿತ್ತಿಪತ್ರ, ಪ್ರಕಟಣೆ ಸೇರಿದಂತೆ ಹಲವಾರು ಕ್ರಮಗಳ ಮೂಲಕ ಸಾರ್ವಜನಿಕ ಆಸ್ತಿ ರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ನಿರ್ದೇಶಕಿ ಕುಸುಮಾ ಹರಿಪ್ರಸಾದ್‌ ತಿಳಿಸಿದ್ದಾರೆ.


ನೈರುತ್ಯ ರೈಲ್ವೆ ವಿಭಾಗದಲ್ಲಿರೈಲ್ವೆ ಸಂರಕ್ಷಣಾ ಪಡೆ ಪ್ರಸಕ್ತ ವರ್ಷದ ಜನವರಿಯಲ್ಲಿ21 ಮತ್ತು ಫೆಬ್ರವರಿಯಲ್ಲಿ13 ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳು ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶ, ಚನ್ನಸಂದ್ರ ಮತ್ತು ತುಮಕೂರು ಠಾಣೆಗಳ ವ್ಯಾಪ್ತಿಯಲ್ಲಿನಡೆದಿವೆ.


ಫೆ.25ರಂದು ಮೈಸೂರು ಚೆನ್ನೈ ಎಕ್ಸ್‌ಪ್ರೆಸ್‌ ವಂದೇ ಭಾರತ್‌ ರೈಲು (ಸಂಖ್ಯೆ 20608) ಕೃಷ್ಣರಾಜಪುರಂ ಮತ್ತು ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣಗಳ ನಡುವೆ ಚಲಿಸುವಾಗ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದರು. ಇದರಿಂದ ರೈಲು ಬೋಗಿಯ ಎರಡು ಕಿಟಕಿಗಳಿಗೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಬ್ಲಾಕ್‌ ಸ್ಪಾಟ್‌
ರೈಲ್ವೆ ಪ್ರಾಧಿಕಾರವು ರೈಲುಗಳಿಗೆ ಕಲ್ಲುತೂರುವ ಅಪಾಯಕಾರಿ ಸ್ಥಳಗಳನ್ನು ಬ್ಲಾಕ್‌ ಸ್ಪಾಟ್‌ಗಳಾಗಿ ಗುರುತಿಸಿದೆ. ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ವೈಟ್‌ಫೀಲ್ಡ್‌, ಕೆ.ಆರ್‌.ಪುರಂ, ಬಾಣಸವಾಡಿ, ಕಾರ್ಮೆಲರಾಮ್‌, ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶಗಳನ್ನು ಅಪಾಯಕಾರಿ ಬ್ಲಾಕ್‌ಸ್ಪಾಟ್‌ಗಳಾಗಿ ಗುರುತಿಸಿದೆ. ಈ ಭಾಗದಲ್ಲಿರೈಲ್ವೆ ರಕ್ಷಣಾ ಪಡೆ, ಜಿಧಿಆಧಿರ್‌ಪಿ ಸಿಧಿಬ್ಬಂದಿ ಹೆಚ್ಚು ಗಸ್ತು ತಿರುಗಲಿದ್ದಾರೆ. ಗಸ್ತಿಗಾಗಿ ಸುಮಾರು 35ರಿಂದ 40 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

15-25 ವರ್ಷದವರ ಕೃತ್ಯ
ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣವನ್ನು ರೈಲ್ವೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಕಲ್ಲುತೂರಾಟದ ಪ್ರಕರಣದಲ್ಲಿ ಭಾಗಿಯಾಗಿರುವವರು 15ರಿಂದ 25 ವರ್ಷದೊಳಗಿನವರನ್ನು ಎಂಬುದನ್ನು ಪತ್ತೆ ಹಚ್ಚಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಂಧಿಸಿ ತಕ್ಕ ಶಿಕ್ಷೆಗೆ ಗುರಿಪಡಿಸಲಾಗುವುದು. ಸಾರ್ವಜನಿಕರಲ್ಲೂ ಸಾರ್ವಜನಿಕ ಆಸ್ತಿ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ನೀಡಲು ಮನವಿ
''ಕಲ್ಲುತೂರಾಟ ಪ್ರಕರಣದಲ್ಲಿ15ರಿಂದ 25 ವರ್ಷದೊಳಗಿನವರು ಭಾಗಿಯಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸಾರ್ವಜನಿಕ ಆಸ್ತಿಗಳ ಬಗ್ಗೆ ಅರಿವು ಮೂಡಿಸಬೇಕು. ಸಾರ್ವಜನಿಕರು ಕೂಡ ಇಂತಹ ದುರ್ಘಟನೆಗಳು ಕಂಡುಬಂದರೇ ಕೂಡಲೇ 139 ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು. ಸಾಧ್ಯವಾದರೆ ಕಲ್ಲುತೂರುವಂತಹ ವ್ಯಕ್ತಿಯ ಫೋಟೊ ತೆಗೆದು ರೈಲ್ವೆ ಅಧಿಕಾರಿಗಳು ಅಥವಾ ಪೊಲೀಸ್‌ ಠಾಣೆಗಳಿಗೆ ಕಳುಹಿಸಬೇಕು'' ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ನಿರ್ದೇಶಕಿ ಕುಸುಮಾ ಹರಿಪ್ರಸಾದ್‌ ಮನವಿ ಮಾಡಿದ್ದಾರೆ.

Post a Comment

أحدث أقدم