ಶಿವಮೊಗ್ಗ: ಪೊಲೀಸ್ ಇಲಾಖೆಯ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಕ್ಕಳ ಪ್ರಕರಣಗಳ ನಿರ್ವಹಣೆಯ ಕುರಿತಂತೆ ಒಂದು ದಿನದ ಸಾಮರ್ಥ್ಯ ಅಭಿವೃದ್ದಿ ತರಭೇತಿ .

 ದಿನಾಂಕ 06-02-2023 ರಂದು ಬೆಳಗ್ಗೆ ಶಿವಮೊಗ್ಗ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ವತಿಯಿಂದ ಪೊಲೀಸ್ ಇಲಾಖೆಯ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಕ್ಕಳ ಪ್ರಕರಣಗಳ ನಿರ್ವಹಣೆಯ ಕುರಿತಂತೆ ಒಂದು ದಿನದ ಸಾಮರ್ಥ್ಯ ಅಭಿವೃದ್ದಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿರುತ್ತದೆ.

               ಶ್ರೀ ಮಿಥುನ್ ಕುಮಾರ್  ಜಿ.ಕೆ, ಐಪಿಎಸ್ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು.

 ಶ್ರೀ ರಾಜಣ್ಣ ಸಂಕಣ್ಣನವರ, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಶಿವಮೊಗ್ಗ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿಸಿದ್ದು, ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷ್ಕರು ಶಿವಮೊಗ್ಗ ಜಿಲ್ಲೆ, ರವರು ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು, ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಬಾಲರಾಜ್, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪವಿಭಾಗ, ಶ್ರೀಮತಿ ರೇಖಾ ಜೇಂ ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ, ಡಾ॥ ಹರೀಶ ದೇಲಂತಬೆಟ್ಟ, ಬಾಲ ನ್ಯಾಯಮಂಡಳಿ ಸದಸ್ಯರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀ ಪ್ರಭು ಡಿ.ಟಿ ಪೊಲೀಸ್ ಉಪಾಧೀಕ್ಷಕರು, ಡಿಸಿಆರ್, ಬಿ ಶಿವಮೊಗ್ಗ ರವರು ಕಾರ್ಯಕ್ರಮದಲಿ ಭಾಗವಹಿಸಿದ ಎಲ್ಲರಿಗೂ ಸ್ವಾಗತ ಕೋರಿದರು.

                              ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹಲವು ಗಣ್ಯ ವ್ಯಕ್ತಿಗಳು.

ಶ್ರೀ ರೋಹಿತ್, ಸಿಜೆ, ಪೊಲೀಸ್ ತರಬೇತುದಾರರು, ತರಭೇತಿ ಮುಖ್ಯಾಲಯ ಬೇಂಗಳೂರು , ಶ್ರೀ ಮಂಜುನಾಥ್ ಪಾಟೀಲ್, ಪೊಲೀಸ್ ಹೆಡ್ ಕಾನ್ಸ್ಟೇಬಲ್, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಶಿವಮೊಗ್ಗ ಮತ್ತು ಶ್ರೀಮತಿ ಗಾಯತ್ರಿ ಡಿ.ಎಸ್ ರಕ್ಷಾಣಾಧಿಕಾರಿಗಳು (ಸಾಂಸ್ಥಿಕ) ಜ್ಲ್ಲಾ ಮಕ್ಕಳಾ ರಕ್ಷ್ಣಾ ಘಟಕ ಶಿವಮೊಗ್ಗ ಜಿಲ್ಲೆ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದು, ಕಾರ್ಯಕ್ರಮದಲ್ಲಿ ಹಾಜರಿದ್ದ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಕ್ಕಳ ನ್ಯಾಯ ( ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ- 2015, ನಿಯಮ 2016 ಪ್ರಕರಣ ನಿರ್ವಹಣೆ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಾಕದ  ಕಾರ್ಯನಿರ್ವಹಣ್ರ್, ಬಾಲ್ಯ ವಿವಾಹ ನಿಷೇಧ ಕಾಯ್ದೆ-2016, ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಕಾಯ್ದೆ 2016, ಬಾಲ ಮತ್ತು ಕಿಶೋರಾವಸ್ಥೆ ಕಾರ್ಮಿಕರ ದುಡಿಮೆ ( ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986, ತಿದ್ದುಪಡಿ ಕಾಯ್ದೆ 2016, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಡಿನಿಯಮ (ಪೋಕ್ಸೋ)-2012 ತಿದ್ದುಪಡಿ 2019, ನಿಯಮ 2020 ಪ್ರಕರಣ ನಿರ್ವಹಣೆ, ಮಕ್ಕಳ ಕಾಣೆಯಾದ ಪ್ರಕರಣಗಳಲ್ಲಿ ಪ್ರಮಾಣಿತ ನಿರ್ವಹಣಾ ಪ್ರಕ್ರಿಯೆ, ಮಕ್ಕಳ ಕಳ್ಳ ಸಾಗಾಣಿಕೆ ಮತ್ತು ಮಕ್ಕಳ ಬಿಕ್ಷಾಟನೆ ವಿಷಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು.

                        ಕಾರ್ಯಕ್ರಮಕ್ಕೆ ಆಗಮಿಸಿರುವ  ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಮಕ್ಕಳ ಕಲ್ಯಾಣ
                                                                                       ಅಧಿಕಾರಿಗಳು.



Post a Comment

أحدث أقدم