ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ವಿರೋಧ ! ಎಸ್.ಬಂಗಾರಪ್ಪ ಅವರ ಹೆಸರಿಡಲು ಆಗ್ರಹ.

   ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರಿಡುವಂತೆ ವಿಧಾನ ಸಭೆಯಲ್ಲಿ ಮಂಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಳೆದ ಭಾನುವಾರ ಘೋಷಣೆ ಮಾಡಿದ್ದಾರೆ.ಆದರೆ ಇದರ ಬೆನ್ನಲ್ಲೇ ಈಡಿಗ ಸಮುದಾಯದ ಮುಖಂಡರು ಈ ಸಂಬಂಧ ಅಸಮಾಧಾನ ಹೊರಹಾಕಿದ್ದಾರೆ.ಅಲ್ಲದೆ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರಿಡಬೇಕೆಂದು ಆಗ್ರಹಿಸಿದ್ದಾರೆ.

     ನಿನ್ನೆ ಈ ಸಂಬಂಧ ಮಾತನಾಡಿದ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಬಂಗಾರಪ್ಪ ಅವರ ಹೆಸರು ಇಡದೆ ಇರುವುದಕ್ಕೆ ಈಡಿಗ ಸಂಘ ಬೇಸರ ವ್ಯಕ್ತ ಪಡಿಸುತ್ತಿದೆ. ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ನಾಂದಿ ಹಾಡಿದವರು. ಶಿವಮೊಗ್ಗ ಸ್ಮಾರ್ಟ್ ಸಿಟಿ ಬಗ್ಗೆ ಕನಸು ಕಂಡವರು, ಥುನಗ ಏತ ನೀರಾವರಿ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಜಾರಿಗೆ ತಂದವರು. ಅಂಥವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕಿತ್ತು ಎಂದಿದ್ದಾರೆ.

     ಧೀಮಂತ ನಾಯಕ ಎನಿಸಿಕೊಂಡಿದ್ದ ಅವರ ಹೆಸರನ್ನು ಸೋಗಾನೆ ವಿಮಾನ ನಿಲ್ದಾಣಕ್ಕೆ ಇಡಬೇಕು. ಶಿವಮೊಗ್ಗದಲ್ಲಿ ಅತಿ ಹೆಚ್ಚು ಜನರು ಇರುವ ಸಮುದಾಯ ಆರ್ಯ ಈಡಿಗರದ್ದು. ಕುವೆಂಪು ಅವರ ಹೆಸರನ್ನು ಹಲವಾರು ಕಡೆಗಳಲ್ಲಿ ಇಡಲಾಗಿದೆ. ಆದರೆ ಬಂಗಾರಪ್ಪ ಅವರ ಹೆಸರನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ದೂರಿದ್ದಾರೆ.



   ಇನ್ನಂದೆಡೆ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷರು ಹಾಗೂ ನಾಲ್ವರು ಪದಾಧಿಕಾರಿಗಳು ನಡೆಸಿರುವ ಪತ್ರಿಕಾಗೋಷ್ಠಿ ಸರ್ವ ಸಮ್ಮತ ನಿರ್ಣಯವಲ್ಲ ಎಂದು ಉದ್ಯಮಿ ಸುರೇಶ್ ಕೆ.ಬಾಳೇಗುಂಡಿ ಆರೋಪಿಸಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಮೇಲೆ ಅಪಾರವಾದ ಗೌರವವಿದೆ.ಈಡಿಗರ ಸಂಘ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ನಿರ್ದೇಶಕ ಮಂಡಳಿ ಸಭೆ ಕರೆದು ಚರ್ಚಿಸಬೇಕು ಸಮಾಜದ ಹಿರಿಯರಾದ ಕಾಗೋಡು ತಿಮ್ಮಪ್ಪ , ಬಿ. ಸ್ವಾಮಿರಾವ್ ,ಡಾ.ಡಿ.ಜಿ. ನಾರಾಯಣಪ್ಪ ಶಾಸಕ ಹರತಾಳು ಸಮಾಜದ ನಾಯಕರೊಂದಿಗೆ ಚರ್ಚಿಸಿ , ಥಳುಕು ಸಂಘಟನೆಗಳ ಅಭಿಪ್ರಾಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಸೋಮವಾರ ನಡೆದ ಪತ್ರಿಕಾಗೋಷ್ಠಿ ಕೇವಲ ನಾಲ್ಕೈದು ಜನರ ಅಭಿಪ್ರಾಯವಾಗಿದೆ ಎಂದರು.

Post a Comment

أحدث أقدم