ಲಾಡ್ಜ್ ನಲ್ಲಿ ದರೋಡೆಗೆ ಸ್ಕೆಚ್! ಸೀಗೆಹಟ್ಟಿಯ ಓರ್ವ ಸೇರಿ ಐವರು ಅರೆಸ್ಟ್!: ಶಿವಮೊಗ್ಗ ಪೋಲೀಸರ ರೋಚಕ ಕಾರ್ಯಾಚರಣೆ.

    ಶಿವಮೊಗ್ಗದಲ್ಲಿ ಸದ್ಯ ದರೋಡೆ ಪ್ರಕರಣಗಳು ಸದ್ದು ಮಾಡುತ್ತಿವೆ. ಸಾಗರ ರಸ್ತೆಯಲ್ಲಿ ನಡೆದ ದರೋಡೆ ಪ್ರಕರಣದ ಬೆನ್ನಲ್ಲೇ ಈ ಘಟನೆಗಳನ್ನು ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ.ಇದರ ನಡುವೆ ಲಾಡ್ಜ್ ವೊಂದರಲ್ಲಿ ಸಂಚು ರೂಪಿಸಿದ್ದ ಐವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. 

    ಶಿವಮೊಗ್ಗ ನಗರದ ಅಮೀರ್ ಅಹಮದ್ ಸರ್ಕಲ್ ಗೆ ಹೊಂದಿಕೊಂಡಂತೆಇರುವ ಪಲ್ಲವಿ ಹೋಟೆಲ್ ನಲ್ಲಿ ಅಲ್ಕೋ ಳ್ಳದ ಅಮಿತ್ ,ಸೀಗೆಹಟ್ಟಿಯ ವರ್ಷಿತ್ ,ಊರುಗಡೂರಿನ ದಿಲೀಪ,ಭದ್ರಾವತಿಯ ತೇಜಸ್ ,ಆಕಾಶ್ ಎಂಬ ಐವರನ್ನು ಪೊಲೀಸರು ಬಂಧಿಸಿದ್ದಾರೆ.ಗಾಜನೂರು ರಸ್ತೆಯಲ್ಲಿ ಇವರು ದರೋಡೆಗೆ ಸ್ಕೆಚ್ ಹಾಕಿದ್ದರು ಎಂಬ ಆರೋಪ ಹೊರಿಸಲಾಗಿದೆ.

  

Post a Comment

أحدث أقدم