ಬೆಂಗಳೂರು:ನಗರದ ಕೆ.ಹೆಚ್.ರಸ್ತೆಯ ಎಂ.ಟಿ.ಆರ್ ಹೋಟೆಲ್ ಎದುರು ಇರುವ ವಕ್ಫ್ ಮಂಡಳಿಗೆ ಸೇರಿದ ಬಡ ಮಕಾನ್ ದರ್ಗಾದ ಆಸ್ತಿಯನ್ನು ಕೆ.ಜಿ.ಎಫ್ ಬಾಬು ಕಾನೂನು ಬಾಹಿರವಾಗಿ ಸ್ವಾಧೀನಪಡಿಸಿಕೊಂಡಿದ್ದು,ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿ ಹೆಲ್ಫಿನ್ಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟ್ ಸಂಘಟನೆಯ ಅಧ್ಯಕ್ಷ ಆಲಂ ಪಾಷಾ ಆಗ್ರಹಿಸಿದರು.
ಬಾಬು ಮತ್ತು ಅವರಿಗೆ ನೆರವಾದ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನಾ ಶಫಿ ಸಾದಿ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್ ಐ ಆರ್ ದಾಖಲಾಗಿದೆ.ಈ ಇಬ್ಬರನ್ನು ಬಂಧಿಸಬೇಕು ಬಡ ಮಕಾನ್ ದರ್ಗಾದ 33 ಸಾವಿರ ಚದರಡಿ ಭೂಮಿ ರಕ್ಷಿಸುವಲ್ಲಿ ವಿಫಲವಾಗಿರುವ ಮಂಡಳಿ ಅಧ್ಯಕ್ಷರನ್ನು ಕೂಡಲೇ ವಜಾಗೊಳಿಸಬೇಕು ಎಂದು ಬುಧವಾರ ಸುದ್ಧಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಜ.27 ರಿಂದ ಫೆ.3 ರ ಅವಧಿಯಲ್ಲಿ ಹಲವು ಮಂದಿ ಅಪಾಯಕಾರಿ ಮಾರಾಕಾಸ್ತ್ರಗಳೊಂದಿಗೆ ತೆರಳಿ, ಜೆಸಿಬಿ ಯಂತ್ರಗಳ ಮೂಲಕ ಕಟ್ಟಡಗಳನ್ನು ಕೆಡವಿ , ಸರಕು ಸಾಗಣೆ ವಾಹನಗಳ ಅವಶೇಷಗಳನ್ನು ಸಾಗಾಟ ಮಾಡಿದ್ದಾರೆ. ಇದರಿಂದ ಮುಸ್ಲಿಂ ಸಮುದಾಯಕ್ಕೆ ನೋವಾಗಿದೆ. ಆದ್ದರಿಂದ ಸರ್ಕಾರವು ಆಸ್ತಿ ರಕ್ಷಿಸಬೇಕು ಎಂದು ಕೋರಿದರು.
إرسال تعليق