ಗೃಹಸಚಿವ ಅರಗ ಜ್ಞಾನೇಂದ್ರ ವಿರುದ್ಧ ಕಿಮ್ಮನೆ-ಆರ್ ಎಂ ಎಂ ವಾಗ್ದಾಳಿ…

 ತೀರ್ಥಹಳ್ಳಿ : ಜನರಿಂದ ಆಯ್ಕೆಯಾದಂತಹ ಒಬ್ಬ ಜನಪ್ರತಿನಿಧಿಯನ್ನು ಒಬ್ಬ ಅಧಿಕಾರಿ ಹೊಡಿಯುತ್ತಾರೆ ಅಂದ್ರೆ ಏನರ್ಥ ? ಜ್ಞಾನೇಂದ್ರ ಗೆ ವಿಧಾನಸಭೆಯಲ್ಲಿ ಯಾವುದಾದರೂ ಅಧಿಕಾರಿ ಹೊಡೆದರೆ ಅದರ ಉತ್ತರ ಏನು ? ಒಬ್ಬ ಅಧಿಕಾರಿ ಆರಗ ಜ್ಞಾನೇಂದ್ರ ಅವರಿಗೆ ಹೊಡೆದರೆ ಅವರನ್ನು ಅಧಿಕಾರದಲ್ಲಿ ಇಡುತ್ತಾರ ಇವರಿಗೆ ಕಾಮನ್ ಸೆನ್ಸ್ ಬೇಡವಾ ? ನನ್ನ ಅನಿಸಿಕೆ ಜ್ಞಾನೇಂದ್ರರಂತವರಿಗೆ ಅಧಿಕಾರ ಕೊಟ್ಟಿದ್ದೆ ತಪ್ಪು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ಪಿಡಿಓ ಅವರನ್ನು ಕೆಲಸದಿಂದ ತೆಗೆಯಬೇಕು ಎಂದು ಮಂಗಳವಾರ ಗ್ರಾಮಪಂಚಾಯಿತಿಯಿಂದ ತಾಲೂಕು ಕಚೇರಿಯವರೆಗೆ ಪಾದಯಾತ್ರೆ ನೆಡೆಸಿ ಮಾತನಾಡಿದ ಅವರು ಆರಗ ಜ್ಞಾನೇಂದ್ರ ಬಂದ ಮೇಲೆ ಸುಮಾರು ಒಂದುವರೆ ಸಾವಿರ ಜನ ಮೇಲಿನಕುರುವಳ್ಳಿ ಬಂಡೆ ಕೆಲಸ ಮಾಡುವುದನ್ನು ಬಿಟ್ಟು ಬೇರೆ ಕಡೆ ಹೋಗಿದ್ದಾರೆ. ಜನರನ್ನು ಗುಳೆ ಎಬ್ಬಿಸಲಿಕ್ಕೆ ಬಂದಿರುವಂತಹವರು. ಗ್ರಾಮಪಂಚಾಯಿತಿ ಸಮಸ್ಯೆ ಹೇಳುವುದಕ್ಕೆ ಪ್ರತಿಭಟನೆ ಮಾಡಬೇಕಾ ಪಿಡಿಒ ನಾಲ್ಕು ತಿಂಗಳುಗಳಿಂದ ಬಿಲ್ ಪೆಂಡಿಂಗ್ ಇಟ್ಟುಕೊಂಡಿದ್ದಾರೆ. ಇಂತಹ ಅಧಿಕಾರಿಯನ್ನು ಈ ಕೂಡಲೇ ಕೆಲಸದಿಂದ ತೆಗೆಯಬೇಕು ಎಂದು ತಿಳಿಸಿದರು.

ಗೃಹಸಚಿವರಿಗೆ ಜನರ ಸಮಸ್ಯೆ ಬೇಕಾಗಿಲ್ಲ. ಸ್ಯಾಂಟ್ರೋ ರವಿ ಬೇಕು. ಪಿಎಸ್ಐ, ಸರ್ಕಲ್ ಇನ್ಸ್ಪೆಕ್ಟರ್, ಡಿವೈ ಎಸ್ ಪಿ ರವರನ್ನು ದುಡ್ಡು ತೆಗೆದುಕೊಂಡು ಟ್ರಾನ್ಸ್ಫರ್ ಮಾಡುವಂತದ್ದು ಇದನ್ನು ನಾನು ಹೇಳಿದ್ದಲ್ಲ ಅವರದೇ ಸರ್ಕಾರದ ಎಂಟಿಬಿ ನಾಗರಾಜ್ ರವರು ಹೇಳಿದ್ದು ಇದು ಜ್ಞಾನೇಂದ್ರ ಅವರ ಶಕ್ತಿ. ಈ ಮನುಷ್ಯನಿಗೆ ಏನಾಗಿದೆಯೋ ಗೊತ್ತಿಲ್ಲ ಪ್ರತಿಯೊಂದರಲ್ಲೂ ಈ ಮನುಷ್ಯನ ಆಡಳಿತವೇ ಹೀಗೆ ಆಗಿದೆ. ಜ್ಞಾನೇಂದ್ರನಷ್ಟೇ ಅಲ್ಲದೆ ಸಂಪೂರ್ಣ ಡಿಪಾರ್ಟ್ಮೆಂಟ್ ಗೆ ತಲೆ ಹಾಳಾಗಿದೆ. ಯಾವ ಪರಿಸ್ಥಿತಿ ಅಧಿಕಾರಿಗಳಿಗೆ ಬಂದಿದೆ ಎಂದರೆ ಒಂದು ಸಾರಿ ಜ್ಞಾನೇಂದ್ರ ಅವರ ಅಧಿಕಾರ ಹೋದರೆ ಸಾಕಪ್ಪ ಅನ್ನೋ ಪರಿಸ್ಥಿತಿಗೆ ಅಧಿಕಾರಿಗಳಿಗೆ ಬಂದಿದೆ ಎಂದರು.

ಇಡೀ ದಿನ ಕ್ಷೇತ್ರದಲ್ಲಿ ಮರಳು ಹೊಡೆಯುತ್ತಿದ್ದಾರೆ. ಅದನ್ನು ಕೇಳಲು ಯಾರಿಗೂ ಆಗುವುದಿಲ್ಲ. ಅಷ್ಟೇ ಅಲ್ಲದೆ ಆರಗ ಅವರ ಮನೆಯಿಂದ ಒಂದು ಕಿಲೋಮೀಟರ್ ಒಳಗಡೆ ಒಂದು ಕೊಲೆಯಾಗುತ್ತದೆ ಆ ಕೊಲೆಯಾಗಿದ್ದು ಅವರ ತಂದೆಯ ಹತ್ತಿರದ ಸಂಬಂಧಿಕರು. ಅವರ ಕುಟುಂಬದವರು ಕಂಪ್ಲೇಂಟ್ ಕೊಟ್ಟಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ರೀತಿ ತನಿಖೆ ಆಗಿಲ್ಲ.
ಬಿಜೆಪಿಯವರು ಮಾಡಿದ್ದು ಎಲ್ಲದೂ ನ್ಯಾಯ ಉಳಿದವರು ಮಾಡಿದ್ದು ಅನ್ಯಾಯ.
ಹೀಗೆ ಆದರೆ ಬದುಕುವುದಕ್ಕೆ ಸಾಧ್ಯನಾ. ಇವರಿಗೆ ಜನರೇ ತಕ್ಕ ಪಾಠ ಕಲಿಸಬೇಕು ಎಂದರು.

ಮೋದಿ ಬಂದು ಸುಳ್ಳು ಹೇಳಿ ಯುವಕರಿಗೆಲ್ಲ ಉದ್ಯೋಗ ಕೊಡುತ್ತೇನೆ ಅಂತ ಹೇಳಿ ಎಂಟರಿಂದ ಒಂಬತ್ತು ವರ್ಷ ಆಯ್ತು. ಯಾರಿಗೂ ಕೆಲಸ ಕೊಡಲಿಕ್ಕೆ ಆಗಿಲ್ಲ. ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡುವಂತಹ ವ್ಯವಸ್ಥೆ ನರೇಂದ್ರ ಮೋದಿ ಅವರಿಂದ ಹಿಡಿದು ಜ್ಞಾನೇಂದ್ರರವರವರೆಗೂ ಮಾಡುತ್ತಿದ್ದಾರೆ.
ನಾನು ಅಧಿಕಾರದಲ್ಲಿದ್ದಾಗ ಧರ್ಮದ ಆಧಾರ ಮೇಲೆ ಜಾತಿ ಆಧಾರದ ಮೇಲೆ ಪಕ್ಷದ ಆಧಾರ ಮೇಲೆ ಯಾರಿಗೂ ಕೆಲಸ ಮಾಡಿಲ್ಲ ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ. ಒಬ್ಬರನ್ನು ನಾನು ವಾಪಸ್ ಕಳಿಸಿಲ್ಲ ಜ್ಞಾನೇಂದ್ರ ಇದನ್ನು ತಲೆಯಲ್ಲಿಟ್ಟುಕೊಳ್ಳಬೇಕು. ಮನುಷ್ಯನಿಗೆ ಕಾಯಿಲೆಗಳು ಜಾತಿ ಪಕ್ಷ ನೋಡಿ ಬರುತ್ತಾ ಇವರಿಗೆ ಕಾಮನ್ ಸೆನ್ಸ್ ಇಲ್ವಾ ? ಕ್ಯಾನ್ಸರ್ ಕಾಯಿಲೆ ಜಾತಿ ನೋಡಿ ಬರುತ್ತಾ ? ಯಾವುದಕ್ಕೆ ಆದರೂ ಮನುಷ್ಯತ್ವ ಬೇಕು. ಆದರೆ ಇಂತವರಿಂದ ನೀವು ಏನು ಒಳ್ಳೆಯದನ್ನು ಬಯಸಲು ಸಾಧ್ಯ ಎಂದರು.

ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ಪಿಡಿಓ ರವರು ಮತ್ತು ಜ್ಞಾನೇಂದ್ರರವರು ತುಂಬಾ ಕ್ಲೋಸ್ ಆಗಿದ್ದಾರೆ ಎಂದಾದರೆ ಅವರನ್ನು ತಮ್ಮ ಪಿಎ ( ಆಪ್ತ ಕಾರ್ಯದರ್ಶಿ ) ಮಾಡಿಕೊಳ್ಳಲಿ ಈಗಿರುವ ಬಸವರಾಜ ಅವರನ್ನು ಬದಲಿಸಿ ಪಿಡಿಓ ಗೆ ಕೆಲಸ ನೀಡಲಿ. ಅಂದಾಜು ಹತ್ತು ಜನ ಜ್ಞಾನೇಂದ್ರರವರ ಜೊತೆಗಿದ್ದಾರೆ ಅವರೆಲ್ಲ ಕಲೆಕ್ಷನ್ ಏಜೆಂಟರು ಗಳಾಗಿದ್ದಾರೆ. ಈಗಾಗಲೇ ದುಡ್ಡು ಬಂದು ಬಿದ್ದಿದೆ ಇದರ ಆಧಾರದ ಮೇಲೆ ಚುನಾವಣೆ ಮಾಡಲು ಹೊರಟಿದ್ದಾರೆ. ಅವರ ದುಡ್ಡನ್ನು ಕಾಲಿ ಮಾಡಿಸಬೇಕು ಹಾಗೂ ಜನತೆ ಅವರನ್ನು ಮನೆಗೆ ಕಳಿಸಬೇಕು ಎಂದರು.

ಕುಡಿಯುವ ನೀರಿನ ಯೋಜನೆ, ಬೆಂಗಳೂರಿನಲ್ಲಿ ಟೆಂಡರ್ ಹಿಡಿಯುವುದು ಬೆಂಗಳೂರಿನಲ್ಲಿಯೇ ಯೋಜನೆ ಮಾಡುವುದು. ಉದ್ಘಾಟನೆ ಮಾಡಿದರೆ ಇದರಲ್ಲಿ ನೀರು ಇಲ್ಲ ಪೈಪು ಇಲ್ಲ. ಪಾರ್ಟಿ ಪರ್ಸೆಂಟ್ ಅಲ್ಲ. 70 ಪರ್ಸೆಂಟ್ ಕಲೆಕ್ಷನ್ ಬರುತ್ತೆ ಇವತ್ತು ತೀರ್ಥಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಏನು ಕೆಲಸ ಆಗುತ್ತಿದೆ ಜ್ಞಾನೇಂದ್ರ ಅವರು ಏನು ಮಾಡುತ್ತಿದ್ದಾರೆ ಇದನ್ನು ನೀವು ಅರ್ಥ ಮಾಡಿಕೊಳ್ಳಿ
ಕ್ಷೇತ್ರದಲ್ಲಿ ಬಿಜೆಪಿಯವರು ಎಲ್ಲಿದ್ದಾರೋ ಅಲ್ಲಿ ಮಾತ್ರ ಟಾರ್ ರೋಡ್ ಇದೆ ಮುಂದಕ್ಕೆ ಇರುವುದಿಲ್ಲ. ನಾನು ಊರೆಲ್ಲ ಓಡಾಟ ಮಾಡುತ್ತಿದ್ದೇನೆ, ನೋಡುತ್ತಿದ್ದೇನೆ ಇವರ 10 ರಷ್ಟು ಕೆಲಸ ನಾನು ಮಾಡಿದ್ದೇನೆ. ತೀರ್ಥಹಳ್ಳಿಯಿಂದ ದಬ್ಬಣ್ಣಗೆದ್ದೆಗೆ ರಿಪ್ಪನ್ ಪೇಟೆಗೆ ಶಿವಮೊಗ್ಗಕ್ಕೆ ಒಳ್ಳೆಯ ರಸ್ತೆ ಇರಲಿಲ್ಲ ಎಲ್ಲದನ್ನು ಮಾಡಿಸಿದ್ದು ನಾನು. ಆದರೆ ನಾನೇ ಮಾಡಿಸಿದ್ದು ಎಂದು ಎಲ್ಲೂ ಬೋರ್ಡ್ ಹಾಕಿಸಿಕೊಳ್ಳಲಿಲ್ಲ. ಆದರೆ ಈಗ ಇವರು ಎಲ್ಲದಕ್ಕೂ ಫೋಟೋ ಫ್ಲೆಕ್ಸ್ ಹಾಕಿಸಿ ಕೊಳ್ಳುತ್ತಿದ್ದಾರೆ. ಅದರಲ್ಲೂ ನಾನೇನು ಮಂಜೂರು ಮಾಡಿಸಿದ್ದೇನೆ ಅವುಗಳಿಗೆಲ್ಲ ಇವರ ಫೋಟೋಗಳು ತೀರ್ಥಹಳ್ಳಿಯಿಂದ ಆಗುಂಬೆ ಹೋಗುವ ಎನ್ಎಚ್ ಮಾಡಿಸಿದ್ದು ನಾನು ಈಗ ಎಲ್ಲದಕ್ಕೂ ಅವರ ಹೆಸರು ಎಂದರು.

ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ಇಡೀ ಗ್ರಾಮ ಪಂಚಾಯಿತಿಯ ಜನತಂತ್ರ ವ್ಯವಸ್ಥೆಯನ್ನು ಮುಚ್ಚಬೇಕು ಎನ್ನುವುದು ಬಿಜೆಪಿಯ ಮುನ್ನಾರ. ಬಿಜೆಪಿ ಇವತ್ತು ಚುನಾಯಿತ ಪ್ರತಿನಿಧಿಗಳ ಹಕ್ಕುಗಳನ್ನು ಕಿತ್ತು ಕೆಲಸ ಮಾಡುತ್ತಿದೆ. ಇವತ್ತು ಎಲ್ಲೆಲ್ಲಿ ವಿರೋಧ ಪಕ್ಷದ ಆಡಳಿತ ಇದೆ ಅಲ್ಲಿನ ಪಿಡಿಒಗಳು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ.
ಹೆಣ್ಣು ಮಕ್ಕಳು ನಡೆದುಕೊಂಡು ಬಂದು ಗೃಹ ಸಚಿವರ ವಿರುದ್ಧ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ ಎಂದರೆ ಗೃಹ ಸಚಿವರು ಗಮನ ಹರಿಸಬೇಕು ಎಂದರು.

ಮಹಮದ್ ಬಿನ್ ತೊಗಲಕ್ಕನ ಆದೇಶದಂತೆ ಬೆಳಗ್ಗೆ ಒಂದು ಆದೇಶ ರಾತ್ರಿ ಒಂದು ಆದೇಶ ನೀಡುತ್ತಾರೆ. ಜನರು ಪ್ರೀತಿಯಿಂದ ಆಯ್ಕೆ ಮಾಡಿದಂತಹ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡು ಅವರ ಅಧಿಕಾರವನ್ನು ಮೊಟುಕು ಮಾಡುವುದರ ಜೊತೆಗೆ ಟೀಕೆ ಮಾಡುತ್ತಾರೆ. ಮೇಲಿನ ಕುರುವಳ್ಳಿ ಪಿಡಿಓ ಬಗ್ಗೆ ಗೃಹ ಸಚಿವರ ಬಳಿ ಕೇಳುತ್ತೇನೆ. ಪಿಡಿಓ ಅವರು ಒಳ್ಳೆಯವರಾದರೆ ನಿಮ್ಮ ಪಿಎಸ್ ಅಥವಾ ಅವರನ್ನು ನಿಮ್ಮ ಸೆಕ್ರೆಟರಿ ಆಗಿ ಮಾಡಿಕೊಳ್ಳಿ ನಿಮ್ಮ ಕಚೇರಿಯಲ್ಲಿ ಒಬ್ಬ ಅಧಿಕಾರಿಯನ್ನಾಗಿ ಮಾಡಿಕೊಳ್ಳಿ ಅದನ್ನು ಬಿಟ್ಟು ಅಧಿಕಾರಿಗಳನ್ನು ಬಳಸಿಕೊಂಡು ಜನತಂತ್ರ ವ್ಯವಸ್ಥೆಯನ್ನು ಹತ್ತಿಕ್ಕುವ ಮಟ್ಟಕ್ಕೆ ಗೃಹ ಸಚಿವರು ಹೋಗಿದ್ದಾರೆ ಎಂದರೆ ವಿಷಾದಕರ ಎಂದರು.

ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಹೇಳಿದರು ಡಿಸೆಂಬರ್ 30ರೊಳಗೆ ಶರಾವತಿ ಸಂತ್ರಸ್ತ ಮುಳುಗಡೆಯವರಿಗೆ ಎಲ್ಲರಿಗೂ ಹಕ್ಕು ಪತ್ರ ನೀಡುತ್ತೇವೆ ಅಂತ ಹೇಳಿದ್ದರು. ಹಕ್ಕು ಪತ್ರ ಇದ್ದವರಿಗೂ ಸಾಲ ಪಡೆಯುವುದಕ್ಕೆ ತಹಶೀಲ್ದಾರ್ ರವರು ಏನ್ ಓ ಸಿ ನೀಡುತ್ತಿಲ್ಲ. ಗೃಹ ಸಚಿವರು ಈ ರೀತಿ ಜನರ ಸೇವೆ ಮಾಡುವ ಅಧಿಕಾರಿಗಳನ್ನು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಬರುತ್ತಿದೆ.
ಈ ಸರ್ಕಾರ ಹೋದರೆ ಸಾಕು ಎಂಬ ರೀತಿ ಜನರು ತಮ್ಮ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಈ ಸರ್ಕಾರಕ್ಕೆ ಕಣ್ಣು ಇಲ್ಲ ಕಿವಿಯೂ ಇಲ್ಲ ಬಾಯಿಯೂ ಇಲ್ಲ. ಇದು ಜನರ ಆಯ್ಕೆಯ ಸರ್ಕಾರ ಅಲ್ಲ ಹಣದ ಆಯ್ಕೆಯ ಸರ್ಕಾರ. ಜನರಿಂದ ಆಯ್ಕೆ ಆಗಿ ಜನರನ್ನ ತುಳಿಯುವಂತಹ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ. ಭ್ರಷ್ಟ ಸರ್ಕಾರವನ್ನು ಹೋಗಲಾಡಿಸುವಂತಹ ದಿನಗಳು ಬಹಳ ದೂರದಲ್ಲಿ ಇಲ್ಲ ಎಂದರು.

ಗ್ರಾಮಪಂಚಾಯಿತಿ ಅಧ್ಯಕ್ಷೆ ಭವ್ಯ ಮಾತನಾಡಿ ಗ್ರಾಮಪಂಚಾಯಿತಿಯ ಸಭೆಯಲ್ಲಿ ನಮ್ಮನ್ನ ನೆಗ್ಲೆಟ್ ಮಾಡುತ್ತಾರೆ, ಪಿಡಿಓ ನಮಗೆ ಬೆಲೆ ಕೊಡುವುದಿಲ್ಲ. ಅಧಿಕಾರಿಗಳಿಗೆ ಸಚಿವರ ಕುಮ್ಮಕ್ಕು ಇದೆ. ಎಲ್ಲದಕ್ಕೂ ಗೃಹಸಚಿವರೇ ನೇರ ಕಾರಣ, ಸಾಮಾನ್ಯ ಸಭೆಯಲ್ಲಿ ಈ ಸ್ವತ್ತು ಸೇರಿ ಯಾವುದೇ ಕೆಲಸವೂ ಆಗುವುದಿಲ್ಲ. ಸಭೆ ಮಾಡಿದಾಗ ಆ ಸಭೆಯಲ್ಲಿ ಪಿಡಿಓ ನಮಗೆ ಹೊಡೆಯುತ್ತಾರೆ. ಅಷ್ಟೇ ಅಲ್ಲದೆ ದಾವಣಗೆರೆಯಲ್ಲಿ ಜಾತಿ ನಿಂದನೆ ಮಾಡಿದ್ದೇವೆ ಎಂದು ಕಂಪ್ಲೇಂಟ್ ಕೊಟ್ಟಿದ್ದಾರೆ.
ನಮಗೆ ಜೀವ ಬೆದರಿಕೆ ಕರೆ ಬರುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಬೆದರಿಕೆ ಹಾಕುತ್ತಾರೆ. ನಮಗೆ ಪಿಡಿಓ ಬೇಡ ಪಿಡಿಓ ಇದ್ದರೆ ನಾವು ಗ್ರಾಮಪಂಚಾಯಿತಿಗೆ ಬರಲ್ಲ ಎಂದರು.

ಗ್ರಾಮಪಂಚಾಯಿತಿ ಉಪಾಧ್ಯಕ್ಷ ಪ್ರಭಾಕರ್ ಮಾತನಾಡಿ ಆರಗ ಜ್ಞಾನೇಂದ್ರ ಮಂತ್ರಿಯೊ ಅಥವಾ ಈಓ ನೋ ಗೊತ್ತಿಲ್ಲ. ಈಓ ಗೆ ಪಿಡಿಓ ರನ್ನು ವರ್ಗಾವಣೆ ಮಾಡಲು ಅಧಿಕಾರ ಕೊಟ್ಟಿದ್ದಾರೆ ಆದರೆ ಗೃಹಸಚಿವರು ಅದನ್ನು ಬದಲಾಯಿಸುತ್ತಾರೆ.
ಇತ್ತ ಪಿಡಿಓ ಎಸ್ ಸಿ ಮಹಿಳಾ ಕೋರ್ಟ್ ಗೆ ಮಾಹಿತಿ ನೀಡಿ ಕೇಸ್ ಹಾಕುತ್ತಾರೆ. ಪಿಡಿಓ ಅವರನ್ನು ಟ್ರಾನ್ಸ್ಪರ್ ಮಾಡಿದ್ದರು ಕೂಡ ಆ ಆದೇಶ ವಾಪಸ್ ತೆಗೆದುಕೊಳ್ಳುವ ರೀತಿ ಸಚಿವರು ಮಾಡಿದ್ದಾರೆ. ಗೃಹಸಚಿವರಿಗೆ ಅಲ್ಪನಿಗೆ ಐಶ್ವರ್ಯ ಬಂದ ಹಾಗೆ ಆಗಿದೆ. ನಿಮ್ಮ ದಬ್ಬಾಳಿಕೆ ಜಾಸ್ತಿ ಆಗಿದೆ ಎಂದರು.

ಈ ಸಂದರ್ಭದಲ್ಲಿ ಡಾ. ಸುಂದರೇಶ್, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ, ರತ್ನಾಕರ್ ಶೆಟ್ಟಿ, ಗ್ರಾಮಪಂಚಾಯಿತಿ ಸದಸ್ಯರಾದ ಬಂಡೆ ವೆಂಕಟೇಶ್, ಕುರುವಳ್ಳಿ ನಾಗರಾಜ್, ಅನಿತಾ ಪ್ರವೀಣ್, ಅಮರನಾಥ ಶೆಟ್ಟಿ, ಜೈಕರ್ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.




Post a Comment

أحدث أقدم