ಕರಾವಳಿ ಕರ್ನಾಟಕದ ವೈದ್ಯಕೀಯ, ಇತರ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಒಳಗೊಂಡಿರುವ ಡ್ರಗ್ಸ್ ಪ್ರಕರಣದ ತನಿಖೆಯು ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದೆ. ಆನ್‌ಲೈನ್ ಫುಡ್ ಡೆಲಿವರಿಗಳ ಮೂಲಕ ವಿದ್ಯಾರ್ಥಿಗಳ ಕೊಠಡಿಗಳಿಗೆ ಈ ಪದಾರ್ಥಗಳು ಪ್ರವೇಶಿಸಿವೆ ಮತ್ತು ವಾಚ್ ವಿವರಣೆ ಟ್ಯಾಗ್‌ಗಳ ರೂಪದಲ್ಲಿ ಎಲ್‌ಎಸ್‌ಡಿಯನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರಉಡುಪಿ: ಕರಾವಳಿ ಕರ್ನಾಟಕದ ವೈದ್ಯಕೀಯ, ಇತರ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಒಳಗೊಂಡಿರುವ ಡ್ರಗ್ಸ್ ಪ್ರಕರಣದ ತನಿಖೆಯು ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದೆ. ಆನ್‌ಲೈನ್ ಫುಡ್ ಡೆಲಿವರಿಗಳ ಮೂಲಕ ವಿದ್ಯಾರ್ಥಿಗಳ ಕೊಠಡಿಗಳಿಗೆ ಈ ಪದಾರ್ಥಗಳು ಪ್ರವೇಶಿಸಿವೆ ಮತ್ತು ವಾಚ್ ವಿವರಣೆ ಟ್ಯಾಗ್‌ಗಳ ರೂಪದಲ್ಲಿ ಎಲ್‌ಎಸ್‌ಡಿಯನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರಾವಳಿ ಪ್ರದೇಶದಲ್ಲಿ ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕುತ್ತಿರುವ ಕರ್ನಾಟಕ ಪೊಲೀಸ್ ಇಲಾಖೆ, ಜನವರಿಯಲ್ಲಿ ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಒಳಗೊಂಡ ದಂಧೆಯನ್ನು ಪತ್ತೆ ಮಾಡಿತ್ತು. ಈ ಪ್ರಕರಣದಲ್ಲಿ ಒಟ್ಟು 24 ಮಂದಿಯನ್ನು ಬಂಧಿಸಲಾಗಿದ್ದು, 22 ಮಂದಿ ವೈದ್ಯಕೀಯ ಕ್ಷೇತ್ರದವರೇ ಆಗಿದ್ದಾರೆ.
ಮಹಿಳೆಯರು ಸೇರಿದಂತೆ ಉತ್ತರ ಪ್ರದೇಶ, ಕರ್ನಾಟಕ, ಕೇರಳ, ತೆಲಂಗಾಣ ಮತ್ತು ದೆಹಲಿಯ 20 ಮತ್ತು 30 ರ ಹರೆಯದ ವೈದ್ಯರನ್ನು ಬಂಧಿಸಲಾಗಿದೆ. ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಮಾದಕ ದ್ರವ್ಯ ದಂಧೆ ಮತ್ತು ಸೇವನೆ ಆರೋಪದ ಮೇಲೆ ಇಬ್ಬರು ವೈದ್ಯರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಅಂತೆಯೇ, ಶಿಕ್ಷಣ ಕೇಂದ್ರವೆಂದೇ ಹೆಸರಾಗಿರುವ ನೆರೆಯ ಉಡುಪಿ ಜಿಲ್ಲೆಯಲ್ಲಿ ಕೂಡ ಡ್ರಗ್ಸ್ ಮಾಫಿಯಾದ ಬೇರುಗಳ ಮೇಲೆ ಪೊಲೀಸರು ಚಾಟಿ ಬೀಸಿದ್ದಾರೆ. ಮಾದಕ ದ್ರವ್ಯ ಮತ್ತು ಮಾದಕ ವ್ಯಸನದಲ್ಲಿ ತೊಡಗಿರುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಂಸ್ಥೆಗಳಿಗೆ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹಾಕೇ ಅಕ್ಷಯ್ ಮಚ್ಚಿಂದ್ರ ಸೂಚಿಸಿದ್ದಾರೆ.
ಪೊಲೀಸ್ ಇಲಾಖೆಯ ನಿರ್ದೇಶನದ ಮೇರೆಗೆ ಉಡುಪಿ ಜಿಲ್ಲೆಯ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಎಚ್ಇ) 42 ವಿದ್ಯಾರ್ಥಿಗಳನ್ನು ಒಂದು ತಿಂಗಳ ಅವಧಿಗೆ ಅಮಾನತುಗೊಳಿಸಿದೆ.
ಹಲವು ವಿದ್ಯಾರ್ಥಿಗಳು ಡ್ರಗ್ ಪೆಡ್ಲರ್‌ಗಳಾಗಿ ಬದಲಾಗಿದ್ದು, ಹಲವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ವಿವರಿಸಿವೆ. ವಿದ್ಯಾರ್ಥಿಗಳು ಎಂಡಿಎಂಎ, ಎಲ್‌ಎಸ್‌ಡಿ ಮತ್ತು ಗಾಂಜಾ ಸೇವಿಸಿದ್ದಾರೆ. ಮೆಡಿಕಲ್, ಮ್ಯಾನೇಜ್‌ಮೆಂಟ್, ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೊಠಡಿಗಳಿಗೆ ಡ್ರಗ್ಸ್ ಪೂರೈಕೆಯಾಗುತ್ತಿತ್ತು.
ವಿದ್ಯಾರ್ಥಿಗಳು ಆನ್‌ಲೈನ್ ಫುಡ್ ಅಗ್ರಿಗೇಟರ್‌ಗಳಿಂದ ಆಹಾರವನ್ನು ಆರ್ಡರ್ ಮಾಡುತ್ತಿದ್ದರು ಮತ್ತು ತಡರಾತ್ರಿ ಆಹಾರ ಪೊಟ್ಟಣಗಳಲ್ಲಿ ಮಾದಕ ವಸ್ತುಗಳು ಬರುತ್ತಿದ್ದವು. ಡೆಲಿವರಿ ಬಾಯ್‌ನನ್ನು ಬಂಧಿಸಿದ ಬಳಿಕ ಈ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಎಸ್‌ಡಿಯನ್ನು ವಾಚ್ ವಿವರಣೆ ಟ್ಯಾಗ್‌ಗಳ ರೂಪದಲ್ಲಿ ಕಳುಹಿಸಲಾಗಿದೆ. ವಾಚ್ ಆರ್ಡರ್ ಮಾಡುವ ನೆಪದಲ್ಲಿ ವಿದ್ಯಾರ್ಥಿಗಳು ಇವುಗಳನ್ನು ಪಡೆಯುತ್ತಿದ್ದರು ಎಂದು ಮೂಲಗಳು ವಿವರಿಸಿವೆ.

إرسال تعليق