ಬಸ್ ಚಾಲಕನಿಗೆ ಹೃದಯಾಘಾತ: ಸ್ಟೀರಿಂಗ್ ಹಿಡಿದು ಬಸ್ ನಿಲ್ಲಿಸಿ ದೊಡ್ಡ ಅನಾಹುತ ತಪ್ಪಿಸಿದ ವಿದ್ಯಾರ್ಥಿನಿ!

 ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತವಾಗಿದ್ದು ನೋವಿನಿಂದ ಬಳಲಿದ್ದಾನೆ. ಈ ವೇಳೆ ಸಮಯಪ್ರಜ್ಞೆ ಮೆರೆದ ವಿದ್ಯಾರ್ಥಿನಿಯೊಬ್ಬಳು ಬಸ್ ಸ್ಟೀರಿಂಗ್ ಹಿಡಿದು ಬಸ್ ನಿಲ್ಲಿಸಿ ದೊಡ್ಡ ಅನಾಹುತ ತಪ್ಪಿದ್ದಾಳೆ. ಇದೀಗ ವಿದ್ಯಾರ್ಥಿನಿಯ ಧೈರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

                           ವಿದ್ಯಾರ್ಥಿನಿ ಭಾರ್ಗವಿ ವ್ಯಾಸ್

By : Rekha.M
Online Desk

ರಾಜ್ ಕೋಟ್: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತವಾಗಿದ್ದು ನೋವಿನಿಂದ ಬಳಲಿದ್ದಾನೆ. ಈ ವೇಳೆ ಸಮಯಪ್ರಜ್ಞೆ ಮೆರೆದ ವಿದ್ಯಾರ್ಥಿನಿಯೊಬ್ಬಳು ಬಸ್ ಸ್ಟೀರಿಂಗ್ ಹಿಡಿದು ಬಸ್ ನಿಲ್ಲಿಸಿ ದೊಡ್ಡ ಅನಾಹುತ ತಪ್ಪಿದ್ದಾಳೆ. ಇದೀಗ ವಿದ್ಯಾರ್ಥಿನಿಯ ಧೈರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

ರಾಜ್‌ಕೋಟ್‌ನಲ್ಲಿ ಚಲಿಸುತ್ತಿದ್ದ ಬಸ್‌ನ ಚಾಲಕ ಹೃದಯಾಘಾತದಿಂದ ಸ್ಟೀರಿಂಗ್ ಚಕ್ರದ ಮೇಲೆ ಕುಸಿದು ಬಿದ್ದಿದ್ದಾನೆ. ಈ ವೇಳೆ ಬಸ್ ಎರಡು ವಾಹನಗಳಿಗೆ ಗುದ್ದಿದೆ. ಆದರೆ ಈ ವೇಳೆ ಬಸ್ಸಿನಲ್ಲಿ ಕುಳಿತಿದ್ದ ವಿದ್ಯಾರ್ಥಿಯೊಬ್ಬ ಧೈರ್ಯ ತೋರಿಸಿ ಬಸ್ಸಿನ ಸ್ಟೀರಿಂಗ್ ಅನ್ನು ಹಿಡಿದು ಚಕ್ರವನ್ನು ರಸ್ತೆ ಬದಿಯ ಗೋಡೆಯ ಕಡೆಗೆ ತಿರುಗಿಸಿದ್ದಾಳೆ. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿದೆ. ನಂತರ ಸುತ್ತಮುತ್ತಲಿನ ಜನರು 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದು ಚಾಲಕನನ್ನು ತಕ್ಷಣವೇ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಬಸ್ ಗೊಂಡಲ್ ರಸ್ತೆ ಮೂಲಕ ಸಾಗುತ್ತಿತ್ತು. ಆಗ ಈ ಬಸ್ಸಿನ ಚಾಲಕನಿಗೆ ಹಠಾತ್ ಹೃದಯಾಘಾತವಾಗಿದ್ದು, ಸ್ಟೀರಿಂಗ್ ನಿಂದ ನಿಯಂತ್ರಣ ತಪ್ಪಿ ಹೋಗಿತ್ತು. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ರಾಜ್‌ಕೋಟ್‌ನ 17 ವರ್ಷದ ವಿದ್ಯಾರ್ಥಿನಿ ಭಾರ್ಗವಿ ವ್ಯಾಸ್ ಹೆದರುವ ಬದಲು ಧೈರ್ಯ ತೋರಿದ್ದಾಳೆ. ವಿದ್ಯಾರ್ಥಿನಿ ತಕ್ಷಣ ಬಸ್‌ನ ಸ್ಟೀರಿಂಗ್ ಅನ್ನು ಇನ್ನೊಂದು ಕಡೆಗೆ ತಿರುಗಿಸಿದ್ದು ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ.

ವಿದ್ಯಾರ್ಥಿ ತೋರಿದ ಸಮಯಪ್ರಜ್ಞೆಯಿಂದ ಶಾಲಾ ಬಸ್ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಘಟನೆಯ ನಂತರ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ಪೊಲೀಸರಿಗೆ ಹಾಗೂ 108 ಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಧಾವಿಸಿದ 108 ಆಂಬ್ಯುಲೆನ್ಸ್ ಮೂಲಕ ಬಸ್ ಚಾಲಕನನ್ನು ತಕ್ಷಣ ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನಿಸಲಾಯಿತು.



Post a Comment

أحدث أقدم