ಶಿವಮೊಗ್ಗ ಎಸ್.ಪಿ ಮಿಥುನ್ ಕುಮಾರ್, ಶಿವಮೊಗ್ಗ ಜಿಲ್ಲೆಯ ಪೊಲೀಸ್ ವಿಭಾಗಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಹೊಸ ಹೊಸ ಪ್ರಯತ್ನಗಳ ಮೂಲಕ ಕ್ರೈಮ್ ಕಂಟ್ರೋಲ್ ಗೆ ಮುಂದಾಗುತ್ತಿದ್ದಾರೆ. ಇದೀಗ ಏರಿಯಾಗಳಲ್ಲಿ ಬೀಟ್ ಸಮಿತಿ ನಡೆಸುತ್ತಿದ್ದು, ಈ ಪ್ರಯತ್ನ ಲೋಕಲ್ ಏರಿಯಾಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
ಭದ್ರಾವತಿಯಲ್ಲಿ ನಡೆಸಿದ ಬೀಟ್ ಮೀಟಿಂಗ್ಈ ಸಂಬಂಧ ಭದ್ರಾವತಿಯಲ್ಲಿ ಹಳೇನಗರ ಪೊಲೀಸ್ ಸ್ಟೇಷನ್ ಲಿಮಿಟ್ ನಲ್ಲಿ ಪೊಲೀಸರು ಬೀಟ್ ಮೀಟಿಂಗ್ ನಡೆಸಿದ್ದಾರೆ.ಇಲ್ಲಿನ ಅನ್ವರ್ ಕಾಲೋನಿಯಲ್ಲಿ ಸಿಪಿ ಐ ಶಾಂತಿನಾಥ್ ಬೀಟ್ ಸಮಿತಿ ಸಭೆ ನಡೆಸಿ, ಕೆಲವೊಂದು ಮಾರ್ಗದರ್ಶನ ನೀಡಿದರು.
ಮನೆಗಳನ್ನು ಬಾಡಿಗೆ ಕೊಡುವ ಸಂದರ್ಭದಲ್ಲಿ, ಬಾಡಿಗೆದಾರರ ಪೂರ್ವಾಪರ ಮತ್ತು ದಾಖಲೆಗಳಾದ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ಗಳನ್ನು ಪರಿಶೀಲಿಸಬೇಕು ಹಾಗೂ ಜೆರಾಕ್ಸ್ ಇಟ್ಟುಕೊಂಡಿರಬೇಕು ಎಂದು ತಿಳಿಸಿದರು.
ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಣ್ಣ ಪುಟ್ಟ ಘಟನೆಗಳು ಜರುಗಿದ ಸಂದರ್ಭದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದರಿಂದ,ಸಮಸ್ಯೆಯು ಚಿಕ್ಕದಿರುವಾಗಲೇ ಬಗೆಹರಿಸಬಹುದು.ಸಮಸ್ಯೆ ದೊಡ್ಡದಾಗುವುದನ್ನು ತಡೆಯಬಹುದು ಎಂದರು.
ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ/ಪೊಲೀಸ್ ಕಂಟ್ರೋಲ್ ರೂಮ್ /112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.
إرسال تعليق