ದಿನಾಂಕ 04-02-2023 ರಂದು ವಿಶ್ವ ಕ್ಯಾನ್ಸರ್ ದಿನದ ಸೋಶಿಯಲ್ ಸರ್ವೀಸ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅನುಗ್ರಹ ಸೋಷಿಯಲ್ ವೆಲ್ ಫೇರ್ ಸೊಸೈಟಿ, ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಸರ್ಜಿ ಆಸ್ಪತ್ರೆ, ಕಟೀಲು ಅಶೋಕ ಪೈ ಸ್ಮಾರಕ ಕಾಲೇಜು ಮತ್ತು ಸಹ್ಯಾದ್ರಿ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ನಗರದ ಸೆಕ್ರೆಟ್ ಹಾರ್ಟ್ ಚರ್ಚ್ ಪ್ರಧಾನ ಆಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಥಾ ಮತ್ತು ಅರಿವು ಕಾರ್ಯಕ್ರಮದಲ್ಲಿ ಶ್ರೀ ಜಿ.ಕೆ ಮಿಥುನ್ ಕುಮಾರ್ ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಾಥಾಕ್ಕೆ ಚಾಲನೆ ನೀಡಿದರು.
ಶ್ರೀ ಜಿ.ಕೆ ಮಿಥುನ್ ಕುಮಾರ್ ಐಪಿಎಸ್ ಅವರಿಂದ ಕ್ಯಾನ್ಸರ್ ಜಾಥಾ ಮತ್ತು ಅರಿವು ಕಾರ್ಯಕ್ರಮಕ್ಕೆ ಚಾಲನೆವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನುಕುರುತು ಮಾತನಾಡಿ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದು, ಇದು ಒಂದು ಮಾರಕ ರೋಗ ವಾಗಿರುತ್ತದೆ ಆದ್ದರಿಂದ ಆರೋಗ್ಯಕರ ಮತ್ತು ಉತ್ತಮ ಜೀವನ ಶೈಲಿಯನ್ನು ರೂಡಿಸಿ ಕೊಳ್ಳುವ ಮೂಲಕ ಹಾಗೂ ಕಾಲಕಾಲಕ್ಕೆ ವೈದ್ಯಾಕೀಯ ಪರೀಕ್ಷಯನ್ನು ಮಾಡಿಸಿಕೊಳ್ಳುವ ಮುಖಾಂತರ ಕ್ಯಾನ್ಸರ್ ರೋಗದ ವಿರುದ್ದ ಜಾಗರೂಕರಾಗಿರಲು ಸಾದ್ಯವಿರುತ್ತದೆ ಎಂದು ಮಾಹಿತಿಯನ್ನು ನೀಡಿದರು.
ಕ್ಯಾನ್ಸರ್ ಗೆ ಸಂಬಧಿಸಿದಂತೆ ಶ್ರೀ ಜಿ.ಕೆ ಮಿಥುನ್ ಕುಮಾರ್ ಐಪಿಎಸ್ ರವರು ಮಾಹಿತಿ ನೀಡುತ್ತಿರುವುದು
ಈ ಸಂದರ್ಭದಲ್ಲಿ ಶ್ರೀ ರಾಜಣ್ಣಾ ಸ್ಂಕಣ್ಣನವರ್, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಶಿವಮೊಗ್ಗ, ಶ್ರೀ ಕ್ಲಿಫರ್ಡ್ ರೋಷನ್ ಫಿಂಟೋ, ನಿರ್ದೆಶಕರು, ಎಸ್.ಎಂ.ಎಸ್ ಎಸ್. ಶಿವಮೊಗ್ಗ ಡಾ॥ ಅಬ್ರಹಾಂ ಅರೀಪರಂಬಿಲ್, ನಿರ್ದೇಶಕರು, ಎಸ್.ಎಂ.ಎಸ್ ಎಸ್ ಎಸ್. ಶಿವಮೊಗ್ಗ ಹಾಗೂ ಎ ಎಸ್ ಡಬ್ಯುಎಸ್ ರವರು ಉಪಸ್ಥಿತರಿದ್ದರು.
ಜಾಥಾ ಮತ್ತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು
إرسال تعليق