ಓಲಾ ಎಲೆಕ್ಟ್ರಿಕ್ ಕಂಪನಿ ತಮಿಳುನಾಡಿನಲ್ಲಿ 7,614 ಕೋಟಿ ರೂ. ಮೌಲ್ಯದ ದೊಡ್ಡ ಮಟ್ಟದ ಹೂಡಿಕೆಯನ್ನು ಘೋಷಿಸಿದ್ದು, ಸುಧಾರಿತ ಸೆಲ್ ಮತ್ತು ಇವಿ ಉತ್ಪಾದನಾ ಸೌಲಭ್ಯಗಳು, ಮಾರಾಟಗಾರರು ಮತ್ತು ಪೂರೈಕೆದಾರರ ಉದ್ಯಾನವನಗಳು ಮತ್ತು ಇತರ ಸೌಕರ್ಯಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಇವಿ ಹಬ್ ಅನ್ನು ಸ್ಥಾಪಿಸುವುದಾಗಿ ತಿಳಿಸಿದೆ.
ಸಂಗ್ರಹ ಚಿತ್ರ
ಬೆಂಗಳೂರು: ಓಲಾ ಎಲೆಕ್ಟ್ರಿಕ್ ಕಂಪನಿ ತಮಿಳುನಾಡಿನಲ್ಲಿ 7,614 ಕೋಟಿ ರೂ. ಮೌಲ್ಯದ ದೊಡ್ಡ ಮಟ್ಟದ ಹೂಡಿಕೆಯನ್ನು ಘೋಷಿಸಿದ್ದು, ಸುಧಾರಿತ ಸೆಲ್ ಮತ್ತು ಇವಿ ಉತ್ಪಾದನಾ ಸೌಲಭ್ಯಗಳು, ಮಾರಾಟಗಾರರು ಮತ್ತು ಪೂರೈಕೆದಾರರ ಉದ್ಯಾನವನಗಳು ಮತ್ತು ಇತರ ಸೌಕರ್ಯಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಇವಿ ಹಬ್ ಅನ್ನು ಸ್ಥಾಪಿಸುವುದಾಗಿ ತಿಳಿಸಿದೆ.
ವಿಶ್ವದ ಅತಿದೊಡ್ಡ ಓಲಾ ಇವಿ ಹಬ್ ತಮಿಳುನಾಡಿನಲ್ಲಿ ಸ್ಥಾಪಿತವಾಗುತ್ತಿದ್ದು, ಓಲಾ ಹೂಡಿಕೆ ರಾಜ್ಯದ ಕೈ ತಪ್ಪಿದ್ದೇಕೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ವಿರುದ್ಧ ತಜ್ಞರು ಹಾಗೂ ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಇನ್ಫೋಸಿಸ್‌ನ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ ಅವರು, ಕರ್ನಾಟಕ ರಾಜ್ಯ ದೊಡ್ಡ ಹೂಡಿಕೆಯನ್ನು ಕಳೆದುಕೊಂಡಿದೆ. ಇವಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಕರ್ನಾಟಕ ಕಳೆದುಕೊಂಡಿದ್ದು ಏಕೆ? ದೇಶದಲ್ಲೇ ಮೊದಲು ಕರ್ನಾಟಕ ಇವಿ ನೀತಿಯನ್ನು ಜಾರಿಗೊಳಿಸಿದೆ. ಈ ಹೂಡಿಕೆ ಆಕರ್ಷಣೆ ಬಗ್ಗೆ ಗಮನ ಕೊಡುವ ಕೊರತೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಯವರು ಟ್ವೀಟ್ ಮಾಡಿ, ಓಲಾ ತಮಿಳುನಾಡಿನಲ್ಲಿ ಭಾರೀ ಹೂಡಿಕೆ ಮಾಡುತ್ತಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ. ಕಠಿಣ ನೀತಿಗಳಿಂದಾಗಿ ಕರ್ನಾಟಕ ಹೂಡಿಕೆದಾರರ ಮನವೊಲಿಸಲು, ಅನುಕೂಲಕರ ಪರಿಸರ ವ್ಯವಸ್ಥೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ವ್ಯವಹಾರ ನಡೆಸುವುದು ಕೇವಲ ಶೇ.40 ಕಮಿಷನ್ ಮಾತ್ರವೇ? ರಾಜ್ಯದ ಮುಖ್ಯಮಂತ್ರಿಗಳೇ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದಾರೆ.
ಇವಿ ತಯಾರಿಕೆ ಮತ್ತು ಬ್ಯಾಟರಿ ಉತ್ಪಾದನಾ ನೀತಿಯೊಂದಿಗೆ ಬಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಓಲಾ ತಮಿಳುನಾಡು ರಾಜ್ಯದಲ್ಲಿ ಹೂಡಿಕೆ ಮಾಡಿರುವುದನ್ನು ನೋಡಿದರೆ, ಬಿಜೆಪಿ ಸರ್ಕಾರದಲ್ಲಿ ವ್ಯವಹಾರವನ್ನು ಸುಲಭಗೊಳಿಸುವುದು ಕೇವಲ ಕಲ್ಪನೆಗಳಷ್ಟೇ. ಇಷ್ಟು ದೊಡ್ಡ ಮೊತ್ತದ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ನಾಶಗೊಂಡಿರುವುದಕ್ಕೆ ಯಾರು ಹೊಣೆ? ಯುವಕರಿಗೆ ಉದ್ಯೋಗ ಬೇಕು. ಆದರೆ, ಬಿಜೆಪಿ ಅವರನ್ನು ಗೋರಕ್ಷಕರನ್ನಾಗಿ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
إرسال تعليق