ದಿನಾಂಕ 6-05-2022 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಬೈಲಿನಲ್ಲಿ ನಿಲ್ಲಿಸಿದ್ದ ತಮ್ಮ ಟೊಯೋಟಾ ಯಾರಿಸ್ ಕಾರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂಬ ಚಂದ್ರುಕುಮಾರ್ ರವರು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0221/2022 ರಂದು ಕಲ್ಂ 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆ ಕೈಗೊಂಡ ಮಂಜುನಾಥ್ ಬಿಪಿಐ ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದ ದೂದ್ಯಾನಾಯ್ಕ್ ಐಎಸ್ ಐ, ಮನೋಹರ್ ಎ ಎಸ್ ಐ, ಹಾಗೂ ಸಿಬ್ಬಂಧಿಗಳಾದ ಹೆಚ್. ಸಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಸಿಪಿಸಿ ನಾಗಪ್ಪ ಎ. ಹರೀಶ್ ನಾಯ್ಕ ಮತ್ತು ಹರಿಹಂತ ಶಿರಹಟ್ಟಿ ರವರುಗಳನ್ನೊಳಗೊಂಡ ತಂಡವು ದಿನಾಂಕ 6-01-2023 ರಂದು ಆರೋಪಿತನಾದ 1) ಪ್ರಶಾಂತ್ ಜಿ, 29 ವರ್ಷ, ಸರಸ್ವತಿ ನಗರ, ದಾವಣಗೆರೆ ರವರುಗಳನ್ನು ದಸ್ತಗಿರಿ ಮಾಡಿರುತ್ತಾರೆ.
ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ 1 ನೇ ಆರೋಪಿಯಾದ ಚಂದ್ರುಕುಮಾರ್ ಈತನು ಸದರಿ ಪ್ರಕರಣದ ಪಿರ್ಯಾದಿಯಾಗಿದ್ದು, 2ನೇ ಆರೋಪಿಯಾದ ಪ್ರಶಾಂತ್ ಜಿ ಈತನೊಂದಿಗೆ ಸೇರಿ ಒಳಸಂಚು ರೂಪಿಸಿಕೊಂಡು ತನ್ನ ಕಾರಿನ ಮೇಲಿದ್ದ ಲೋನ್ ಅನ್ನು ಕಟ್ಟದೆ ಫೈನಾನ್ಸ್ ಗೆ ಮೋಸ ಮಾಡುವ ಮತ್ತು ಕಾರಿನ ಇನ್ಸೂರೆನ್ಸ್ ಪಡೆಯುವ ಸಲುವಾಗಿ ತನ್ನ ಮಾಲಿಕತ್ವದ ಟೊಯೋಟಾ ಯಾರಿಸ್ ಕಾರನ್ನು ಪ್ರಶಾಂತ್ ಜಿ ಗೆ ನೀಡಿ ದಾವಣಗೆರೆಗೆ ಕಳುಹಿಸಿಕೊಟ್ಟು ನಂತರ ಸದರಿ ಪ್ಲೇಟ್ ಅನ್ನು ಬದಲಾವಣೆ ಮಾಡಿಸಿ 1 ನೇ ಆರೋಪಿ ಚಂದ್ರುಕುಮಾರ್ ನು ಠಾಣೆಗೆ ಬಂದ ತನ್ನ ಕಾರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕಂಡು ಬಂದಿರುತ್ತದೆ. ನಂತರ ಸದರಿ ಪ್ರಕರಣದ ಟೊಯೋಟಾ ಯಾರಿಸ್ ಕಾರನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಕರಣದ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಶ್ಲಾಘಿಸಿ ಪ್ರಶಂಸಿರುತ್ತಾರೆ.
إرسال تعليق