ದಿನಾಂಕ: 24 /09 /2018 ರಂದು ಮಧ್ಯಾಹ್ನ ಭದ್ರಾವತಿ ಹಳೆನಗರ ಪೊಲೀಸ್ಫ್ ಠಾಣಾ ವ್ಯಾಪ್ತಿಯ ಸೀಗೆಬಾಗಿ ಗ್ರಾಮದ ಚೇತನ್, 21 ವರ್ಷ ರವರ ದೊಡ್ಡಮ್ಮನವರೊಂದಿಗೆ ಶಿವರುದ್ರಪ್ಪ @ಶಿವು ಎಂಬುವವನು ಹಳೇ ದ್ವೇಷದಿಂದ ಜಗಳ ಮಾಡುತಿದ್ದಾಗ, ಬಿಡಿಸಲು ಹೋದ ಚೇತನ್ ಗೆ ಮನುಸಿಂಗ್ @ಮನು ಎಂಬುವವನು ಮಚ್ಚಿನಿಂದ ತಲೆಗೆ ಮತ್ತು ಕೈಬೆರಳಿಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0291 /2018 ಕಲಾಂ 354 ,307 ,504 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಆಗಿನ ತನಿಖಾಧಿಕಾರಿಗಳಾದ ಶ್ರೀ ಭರತ್ ಕುಮಾರ್ .ಡಿ ಆರ್ , ಪಿಎಸ್ಐ ಭದ್ರಾವತಿ ಹಳೆನಗರ ಠಾಣೆಯವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಘನನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರವನ್ನು ಸಲ್ಲಿಸಿರುತ್ತಾರೆ.
ಪ್ರಕರಣದಲ್ಲಿ ಶ್ರೀಮತಿ ರತ್ನಮ್ಮ, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಮಾನ್ಯ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಪೀಠಾಸೀನ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಾಧೀಶರಾದ ಶ್ರೀ ಆರ್.ವೈ ಶಶಿಧರ ರವರು ಡಿ:18 /01 /2023 ರಂದು ಆರೋಪಿತನಾದ ಮನುಸಿಂಗ್ @ಮನು,20 ವರ್ಷ, ಸೀಗೆಬಾಗಿ ,ಭದ್ರಾವತಿ ತಾಲೂಕ್ ಈತನ ವಿರುದ್ಧ ಕಲಂ 307 ಐಪಿಸಿ ಕಾಯ್ದೆಯಡಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 4 ವರ್ಷ ಸದಾ ಕರವಾಸ ಶಿಕ್ಷೆ ಮತ್ತು 25,000 ರೂ ದಂಡ, ದಂಡ ವಿಫಲನಾದಲ್ಲಿ 6 ತಿಂಗಳು ಸದಾ ಕಾರವಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.
إرسال تعليق