ದಿನಾಂಕ 27-01-2023 ರಂದು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಲ್ಕೋಳ ಗ್ರಾಮದ ವಾಸಿ ಮಾಣಿಕ್ಯಂ ರವರು ತಮ್ಮ ಮನೆಗೆ ಬೀಗವನ್ನು ಹಾಕಿ, ಬೀಕದ ಕೀ ಯನ್ನು ಮನೆಯ ಆವರಣದಲ್ಲಿನ ನೀರಿನ ಮೋಟಾರ್ ಕೆಳಗೆ ಇಟ್ಟು ಹೋಗಿದ್ದು, ಯಾರೋ ಕಳ್ಳರು ಸದರಿ ಬೀಗದ ಕೀಯನ್ನು ತೆಗೆದುಕೊಂಡು, ಮನೆಯ ಬಾಗಿಲನ್ನು ತೆರೆದು ಒಳಗೆ ಹೋಗಿ, ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು, ಬೆಳಿಯ ಚೈನು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0014/2023 ಕಲಂ 380 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿರುತ್ತದೆ.
ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪವಿಭಾಗ-ಬಿ ರವರ ಮೇಲ್ವುಚಾರಣೆಯಲ್ಲಿ, ಸದರಿ ಪ್ರಕರಣದಲ್ಲಿ ಕಳುವಾದ ವಸ್ತುಗಳು ಮತ್ತು ಆರೋಪಿತರ ಪತ್ತೆಗಾಗಿ ಶ್ರೀ ರವಿ ಎನ್ ಎಸ್, ಪೊಲೀಸ್ ನಿರೀಕ್ಷಕರು, ವಿನೋಬನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ರಮೇಶ್ ಎ ಎಸ್ ಐ ಮತ್ತು ಸಿಬ್ಬಂದಿಗಳಾದ ಸಿಪಿಸಿ ರಾಜು ಕೆ.ಆರ್ ಮತ್ತು ಚಂದ್ರಾ ನಾಯ್ಕ್ ರವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.
ಪ್ರಕರಣ ದಾಖಲಾದ 24 ಗಂಟೆಯ ಒಳಗಾಗಿ ಆರೋಪಿತರನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿದ ತನಿಖಾ ತಂಡದ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಶ್ಲಾಘಿಸಿ ಬಹುಮಾನವನ್ನು ಘೋಷಿಸಿ ಅಭಿನಂದಿಸಿರುತ್ತಾರೆ.
إرسال تعليق