ಬಿಲ್ಡಿಂಗ್ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಸ್ಆರ್ಟಿಸಿ ಅಧಿಕಾರಿಗಳ (KSRTC) ಮೇಲೆ ಶಾಸಕ ತನ್ವೀರ್ ಸೇಠ್ (MLA Tanveer Sait) ಬೆಂಬಲಿಗರು ಗೂಂಡಾಗಿರಿ ಮಾಡಿರುವ ಘಟನೆ ಮೈಸೂರಿನ (Mysuru) ಸಾತಗಳ್ಳಿ ಬಸ್ ಡಿಪೋ ಆವರಣದಲ್ಲಿ ನಡೆದಿದೆ.
ಮಚ್ಚು ಹಿಡಿದು ಅವಾಜ್ ಹಾಕಿದ ಕಾಂಗ್ರೆಸ್ ಮುಖಂಡ ಶಫಿ, ಪತ್ನಿ
ಮೈಸೂರು: ಬಿಲ್ಡಿಂಗ್ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಸ್ಆರ್ಟಿಸಿ ಅಧಿಕಾರಿಗಳ (KSRTC) ಮೇಲೆ ಶಾಸಕ ತನ್ವೀರ್ ಸೇಠ್ (MLA Tanveer Sait) ಬೆಂಬಲಿಗರು ಗೂಂಡಾಗಿರಿ ಮಾಡಿರುವ ಘಟನೆ ಮೈಸೂರಿನ (Mysuru) ಸಾತಗಳ್ಳಿ ಬಸ್ ಡಿಪೋ ಆವರಣದಲ್ಲಿ ನಡೆದಿದೆ.
ಮೈಸೂರು ಸಾತಗಳ್ಳಿ ಡಿಪೋ ಬಳಿ ಅಧಿಕಾರಿ ವಿರುದ್ಧ ಶಾಸಕ ತನ್ವೀರ್ ಸೇಠ್ ಬೆಂಬಲಿಗ ಮತ್ತು ಕಾಂಗ್ರೆಸ್ ಮುಖಂಡ ಶಫಿ ಮತ್ತವರ ಪತ್ನಿಯ ಮಚ್ಚು ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಹೌದು.. ಮೈಸೂರು ನಗರದ ಸಾತಗಳ್ಳಿ ಬಸ್ ಡಿಪೋ (bus depot) ಬಳಿ ಇಂದು ನಾಟಕೀಯ ಸನ್ನಿವೇಶ ಸೃಷ್ಟಿಯಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಮೊಹ್ಮದ್ ಶಫಿ (Mohammad Shafi) ಎನ್ನುವ ವ್ಯಕ್ತಿಯೊಬ್ಬರು ಕೆಎಸ್ಆರ್ ಟಿಸಿ ಗೆ ಸೇರಿದ ಡಿಪೋ ಪಕ್ಕದ ಜಾಗವನ್ನು ಬಾಡಿಗೆ ಪಡೆದು ಕಾಲೇಜು ನಡೆಸುತ್ತಿದ್ದಾರೆ. ಶಫಿ ಬಾಡಿಗೆ ಕಟ್ಟದ ಕಾರಣ ಡಿಪೋ ಅಧಿಕಾರಿಯೊಬ್ಬರು (depot official) ನೋಟಿಸ್ ನೀಡಿದ್ದಾರೆ. ಇದರಿಂದ ಅಧಿಕಾರಿ ಮೇಲೆ ರೊಚ್ಚಿಗೆದ್ದ ಶಫಿಯ ಪತ್ನಿ ಗಂಡನ ಜೊತೆ ಡಿಪೋಗೆ ಬಂದು ಕೈಯಲ್ಲಿ ಮಚ್ಚು ಹಿಡಿದು ಕೊಚ್ಚಿ ಹಾಕ್ತೀನಿ ಎಂದು ಆವಾಜ್ ಹಾಕಿದ್ದಾರೆ. ಪೊಲೀಸರು ಅವರಿಬ್ಬರನ್ನು ಸಮಾಧಾನ ಪಡಿಸಿದರೂ ಜೋರಾದ ಧ್ವನಿಯಲ್ಲಿ ಅವಾಚ್ಯ ಪದಗಳನ್ನು ಬಳಿಸಿ ತೆಗಳಿದ್ದಾರೆ.
ಆರೋಪಿ ಕಾಂಗ್ರೆಸ್ ಮುಖಂಡ ಶಫಿ ಶಾಸಕ ತನ್ವೀರ್ ಸೇಠ್ ಬೆಂಬಲಿಗ ಎಂದು ಹೇಳಲಾಗಿದ್ದು, ಶಫಿ ಪತ್ನಿ ಪೊಲೀಸರ (Police) ಎದುರಿನಲ್ಲೇ ಅಧಿಕಾರಿಗಳಿಗೆ ಮಚ್ಚು ತೋರಿಸಿ ಧಮ್ಕಿ ಹಾಕಿದ್ದಾರೆ.
ಬಾಡಿಗೆ ಕೇಳಿದ್ದಕ್ಕೆ ಮಹಿಳೆ ರೌದ್ರಾವತಾರ
KRSTC ಬಸ್ ನಿಲ್ದಾಣದ ಕಟ್ಟಡವನ್ನು ಕಳೆದ 3- 4 ವರ್ಷಗಳ ಹಿಂದೆಯೇ ಬಾಡಿಗೆಗೆ ಪಡೆದಿದ್ದಾರೆ. ಇಂದು ಅಧಿಕಾರಿಗಳು ಬಾಡಿಗೆ ವಸೂಲಿ ಮಾಡಲು ಮುಂದಾದಾಗ ಮಹಿಳೆ ರೌದ್ರಾವತಾರ ತೋರಿದ್ದಾರೆ. ಪೇಪರ್ ಕವರ್ ನಲ್ಲಿ ಮಚ್ಚು ತಂದಿದ್ದ ಷಫಿ ಪತ್ನಿ. ಪೊಲೀಸರ ಎದುರೇ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ.
'ನಾವು ಮುಸ್ಲಿಮರು... ಮಚ್ಚಿನಲ್ಲಿ ಕೊಚ್ಚಿ ಹಾಕಿ ಜೈಲಿಗೆ ಹೋಗಲು ರೆಡಿ.. ಎಂದು ಜೋರಾಗಿ ಕೂಗಿಕೊಳ್ಳುತ್ತಾ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮಚ್ಚನ್ನು ಕಸಿಯಲು ಬಿಡದೆ ಮಹಿಳೆ ರಂಪಾಟ ಮಾಡಿದ್ದು, ಮಹಿಳೆಯ ರಂಪಾಟಕ್ಕೆ ಪೊಲೀಸರು ಕೂಡ ಹೈರಾಣಾದರು. ಶಾಸಕರ ಬೆಂಬಲಿಗರ ಬಹಿರಂಗ ಗೂಂಡಾಗಿರಿಗೆ ಉದಯಗಿರಿ, ಶಾಂತಿನಗರದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಮಚ್ಚು ಕಸಿದುಕೊಳ್ಳಲು ಪೊಲೀಸರು, ಅಧಿಕಾರಿಗಳ ಹರಸಾಹಸ ಪಟ್ಟಿದ್ದು, ಶಫಿ ಮತ್ತು ಅವರ ಪತ್ನಿಯ ಗೂಂಡಾಗಿರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳು ನಾಪತ್ತೆ
ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಶಫಿ ತನ್ನ ಧರ್ಮಪತ್ನಿಯೊಂದಿಗೆ ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಆರೋಪಿಗಳ ಪತ್ತೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
إرسال تعليق