ಭದ್ರಾವತಿ ನ್ಯೂಟನ್ ಪೊಲೀಸ್ ಠಾಣ ವ್ಯಾಪ್ತಿಯ ಬೊಮ್ಮನಕಟ್ಟೆ ವಾಸಿಯಾದ ಮಹಮದ್ ಅಜರ್ @ ಮಹಮದ್ ಶ್ಪಿ ರವರ 16 ವರ್ಷದ ಅಪ್ರಾಪ್ತ ವಯಸ್ಸಿನ ಮಗನನ್ನು ದಿನಾಂಕ:22-12-2022 ರಂದು ರಾತ್ರಿ ಸಮಯದಲ್ಲಿ ಇಟಿಯೋಸ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟು ಅಪಹರಣ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0172/2022 ಕಲಂ 364(ಎ) ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆ ಸಂಬಂದ ಶ್ರೀ ಜಿತೇಂದ್ರ ದಯಾಮ ಎ ಎಸ್ ಪಿ ಭದ್ರಾವತಿ ಉಪವಿಭಾಗ & ಶ್ರೀ ರಾಘವೇಂದ್ರ ಕಾಂಡಿಕೆ ಸಿಪಿಐ ನಗರ ವೃತ್ತ ಭದ್ರಾವತಿ ರವರ ನೇತೃತ್ವದಲ್ಲಿ ನ್ಯೂಟನ್ ಪೊಲೀಸ್ ಠಾಣೆ ಪಿಎಸ್ಐ ರಂಗನಾಥ ಅಂತರಗಟ್ಟಿ ಮತ್ತು ಸಿಬ್ಬಂದಿಯವರಾದ ಎ ಎಸ್ ಐ ವೆಂಕಟೇಶ್, ಸಿಹೆಚ್ ಸಿ ರಾಘವೇಂದ್ರ, ಶ್ಯಾಮಕುಮಾರ್, ಶ್ರೀಧರ, ರೂಪೇಶ, ಹಾಲಪ್ಪ & ಸಿಪಿಸಿ ಮಾನೇಶ್, ಪೈರೋಜ್, ಸುನೀಲ್ ಕುಮಾರ್, ತೀರ್ಥಲಿಂಗಪ್ಪ ರವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತಂಡವು ದಿನಾಂಕ:23-12-2022 ರಂದು ಅಪಹರಣಕ್ಕೊಳಗಾದ ಬಾಲಕನನ್ನು ಪತ್ತೆ ಮಾಡಿ ಆರೋಪಿಗಳಾದ 1) ಮುಭಾರಕ್ @ ಡಿಚ್ಚಿ, 24 ವರ್ಷ, ಪೇಟಿಂಗ್ ಕೆಲಸ, ನೆಹರೂನಗರ, ಭದ್ರಾವತಿ, 2) ಜಾಬೀರ್ ಭಾಷಾ @ ರಾಬರ್ಟ್,22 ವರ್ಷ, ಚಾಲಕ ವೃತ್ತಿ, ಹಾನುಭಿ ಏರಿಯಾ ಸಾಗರ, 3) ಮುಸ್ತಫಾ, 26 ವರ್ಷ, ಟೈಲ್ಸ್ ಕೆಲಸ, ಟಿಪ್ಪುನಗರ, ಶಿವಮೊಗ್ಗ. 4) ಅಬ್ದುಲ್ ಸಲಾಂ. 26 ವರ್ಷ, ಅಡಿಕೆ ವ್ಯಾಪಾರಿ, ನೂರುಲ್ ಹುದಾ ಮಸೀದಿ ಪಕ್ಕ ಕೆಳದಿ ರಸ್ತೆ ಸಾಗರ . 5) ಇರ್ಫಾನ್, 31 ವರ್ಷ, ಚಾಲಕ ವೃತ್ತಿ, ವಾಸ ಅಣಲೆಕೊಪ್ಪ, ಸಾಗರ ರವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ನೀಡಲಾಗಿದೆ.
ಸದರಿ ತನಿಖಾ ತಂಡದ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆಯ ರವರು ಪ್ರಶಂಸಿ ಅಭಿನಂದಿಸಿರುತ್ತಾರೆ.
إرسال تعليق