ಶಿವಮೊಗ್ಗ: ವೃದ್ಧೆಯ ಅನುಮಾನಾಸ್ಪದ ಸಾವು : ಸಾವಿನ ಮೂಲ ಹುಡುಕಿ ಆರೋಪಿತನನ್ನು ಬಂದಿಸಿದ ಭದ್ರಾವತಿ ಪೇಪರ್ ಟೌನ್ ಠಾಣಾ ವ್ಯಾಪ್ತಿಯ ಪೊಲೀಸ್ ತನಿಖಾ ತಂಡ

ಭದ್ರಾವತಿ ಪೇಪರ್ ಟೌನ್  ಠಾಣಾ ವ್ಯಾಪ್ತಿಯ ಸುಣ್ಣದಹಳ್ಳಿ ಗ್ರಾಮದ ವಾಸಿಯಾದ ಶಂಕ್ರಮ್ಮ 70 ವರ್ಷ ರವರು ಅದೇ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ  ಬರುವ ಭಕ್ತಾದಿಗಳಿಂದ ಹಣ ಬೇಡಿ ಪಡೆದು ಜೀವನ ಸಾಗಿಸುತ್ತಿದ್ದು, ರಾತ್ರಿ ವೇಳೆಯಲ್ಲಿ ದೇವಸ್ಥಾನದ ಎದುರಿರುವ ಅಂತಘಟ್ಟಮ್ಮ ದೇವರ ಗುಡಿಯ ಕಾಂಪೌಂಡ್ ನ ಒಳ ಭಾಗ ಮಲಗುತ್ತಿದ್ದರು. 3-12-2022  ರಂದು ದೇವಸ್ಥಾನದ  ಅರ್ಚಕರು ಕರೆ ಮಾಡಿ  ಶಂಕ್ರಮ್ಮನವರು ಮೃತಪಟ್ಟಿದ್ದಾರೆಂದು ತಿಳಿಸಿದ್ದು. ಹೋಗಿ ನೋಡಿದಾಗ ಯಾರೋ ಅಪರಿಚಿತರು ಶಂಕ್ರಮ್ಮನವರನ್ನು ಕೊಲೆ ಮಾಡಿ ಅವರ ಎರೆಡು ಕಿವಿಯಲ್ಲಿದ್ದ ಚಿನ್ನದ ಒಲೆಗಳು ಮತ್ತು ಮೂಗುಬೊಟ್ಟನ್ನು ಕಿತ್ತಿಕೊಂಡು ಹೋಗಿರುತ್ತಾರೆಂಬ ಮೃತೇಯ ಮೊಮ್ಮಗಳು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 151/2022 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತದೆ.
ಸದರಿ ಪ್ರಕರಣದ ಆರೋಪಿತರ ಪತ್ತೆಗಾಗಿ ಶ್ರೀ ಜಿತೇಂದ್ರಕೂಮಾರ್ ದಯಾಮ, ಐಪಿಎಸ್ ರವರ ಮೇಲ್ವಿಚಾರಣೆಯಲ್ಲಿ ಪೇಪರ್ ಟೌನ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಮಂಜುನಾಥ ಈಓ ರವರ ನೇತೃತ್ವದಲ್ಲಿ ಪಿಎಸ್ ಐ ಶಿಲ್ಪಾ ನಾಯನೇಗಲಿ ಮತ್ತು ಸಿಬ್ಬಂಧಿಗಳಾದ ಶ್ರೀ ರತ್ನಾಕರ, ಶ್ರೀ ವಾಸುದೇವ, ಶ್ರೀ ಚಿನ್ನ ನಾಯ್ಕ, ಶ್ರೀ ಹನುಮಂತ ಅವಟಿ, ಶ್ರೀ ಆದರ್ಶ ಶೆಟ್ಟಿ, ಶ್ರೀ ಮೌನೇಶ ಶೀಖಲ್, ಶ್ರೀ ಅರುಣ್ ಆರ್, ಶ್ರೀ ವಿಕ್ರಮ್ ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.


ಸದರಿ ತನಿಖಾ ತಂಡವು ದಿನಾಂಕ 17-12-2022 ರಂದು ಪ್ರಕರಣದ ಆರೋಪಿತನಾದ ಕರುಣಾಕರ ದೇವಾಡಿಗ ,24 ವರ್ಷ, ಗಾರೆ ಕೆಲಸ, ದುಗ್ಗದ ಮನೆ, ಕಂಬದ ಕೋಣೆ, ಕುಂದಪುರ, ಬೈಂದೂರ್ ತಾಲ್ಲೂಕು , ಉಡುಪಿ ಜಿಲ್ಲೆಯ ಈತನನ್ನು ದಸ್ತಗಿರಿ ಮಾಡಿ, ಮೃತೆ ಶಂಕ್ರಮ್ಮನವರ  ಮೈಮೇಲಿಂದ ಕಿತ್ತುಕೊಂಡಿದ್ದ ಅಂದಾಜು ಮೌಲ್ಯ 14000/- ರೂಗಳ ಒಂದು ಜೊತೆ ಬಂಗಾರದ ಒಲೆ ಮತ್ತು ಮೂಗುತ್ತಿಯನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿತನು  ದಿನಾಂಕ 02-12-2022 ರಂದು  ರಾತ್ರಿ ಶಂಕ್ರಮ್ಮನವರ ಕಿವಿಯಲ್ಲಿದ್ದ ಬಂಗಾರದ ಒಲೆ ಮತ್ತು ಮೂಗಿನಲ್ಲಿದ್ದ ಮೂಗು ಬೊಟ್ಟನ್ನು ಕಿತ್ತು ಕೊಳ್ಳುವ ಸಂಬಂಧ ಆಕೆಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ  ಕೊಲೆ ಮಾಡಿ ಒಲೆ ಮತ್ತು ಮೂಗುಬೊಟ್ಟನ್ನು ಕಿತ್ತುಕೊಂಡು ಹೋಗಿರುವುದು  ವಿಚಾರಣೆಯಲ್ಲಿ ಕಂಡುಬಂದಿರುತ್ತದೆ.
ಸದರಿ ತನಿಖಾ ತಂಡದ  ಉತ್ತಮ ಕಾರ್ಯವನ್ನು ಮಾನ್ಫ಼್ಯ ಪೊಲೀಸ್ ಅದ್ಯಕ್ಷರು, ಶಿವಮೊಗ್ಗ ಜಿಲ್ಲೆ ರವರು ಶ್ಲಾಘಿಸಿ ಪ್ರಶಂಸಿರುತ್ತಾರೆ.

Post a Comment

أحدث أقدم