ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಧ್ಯ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂವಿಧಾನ ರಕ್ಷಿಸಲು ಮತ್ತು ದಲಿತರು, ಅಲ್ಪಸಂಖ್ಯಾತರ ಭವಿಷ್ಯಕ್ಕಾಗಿ ಪ್ರಧಾನಿ ಮೋದಿ ಅವರ ಹತ್ಯೆಗೆ ಸಜ್ಜಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಮಾಜಿ ಸಚಿವ ಪಟೇರಿಯಾ
ಭೂಪಾಲ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಧ್ಯ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂವಿಧಾನ ರಕ್ಷಿಸಲು ಮತ್ತು ದಲಿತರು, ಅಲ್ಪಸಂಖ್ಯಾತರ ಭವಿಷ್ಯಕ್ಕಾಗಿ ಪ್ರಧಾನಿ ಮೋದಿ ಅವರ ಹತ್ಯೆಗೆ ಸಜ್ಜಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಈ ಹೇಳಿಕೆ ನೀಡಿರುವ ಮಾಜಿ ಸಚಿವ ರಾಜಾ ಪಟೇರಿಯಾ ವಿರುದ್ಧ ಎಫ್ ಐಆರ್ ದಾಖಲಿಸಲು ರಾಜ್ಯ ಸರ್ಕಾರ ಆದೇಶಿಸಿದೆ. 'ಪ್ರಧಾನಿ ಮೋದಿ ಅವರನ್ನು ಕೊಲ್ಲಲು ರೆಡಿಯಾಗಿ ಎಂದು ಪಟೇರಿಯಾ, ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿರುವ ಹೇಳಿಕೆಯ ವಿಡಿಯೋ ಸೋಮವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಮೋದಿ ಚುನಾವಣೆಗೆ ಅಂತ್ಯ ಕಾಣಿಸುತ್ತಾರೆ, ಧರ್ಮ, ಜಾತಿ ಮತ್ತು ಭಾಷೆ ಆಧಾರದ ಮೇಲೆ ವಿಭಜಿಸುತ್ತಿದ್ದಾರೆ. ದಲಿತರು, ಬುಡಕಟ್ಟು ಮತ್ತು ಅಲ್ಪಸಂಖ್ಯಾತರ ಭವಿಷ್ಯ ಅಪಾಯದಲ್ಲಿದೆ. ನೀವು ಸಂವಿಧಾನವನ್ನು ಉಳಿಸಲು ಬಯಸಿದರೆ, ಮೋದಿ ಹತ್ಯೆಗೆ ಸಿದ್ಧರಾಗಿ. ಮೋದಿ ಅವರನ್ನು ಸೋಲಿಸುವ ಭಾವನೆಯೊಂದಿಗೆ ಹತ್ಯೆ ಮಾಡಿ ಎಂದು ಪಟೇರಿಯಾ ಪನ್ನಾ ಜಿಲ್ಲೆಯ ಪವೈಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ.
ಪಟೇರಿಯಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವವರ ವಾಸ್ತವ ಏನೆಂಬುದು ಮುನ್ನೆಲೆಗೆ ಬಂದಿದೆ. ಪಟೇರಿಯಾ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಪಟೇರಿಯಾ ಹೇಳಿಕೆ ಆಕ್ಷೇಪಾರ್ಹಕಾರಿಯಾಗಿದೆ ಎಂದು ಹೇಳಿರುವ ಮಧ್ಯ ಪ್ರದೇಶ ಗೃಹ ಸಚಿವ ನಾರೊಟ್ಟಮ್ ಮಿಶ್ರಾ, ಕೂಡಲೇ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್ ಐಆರ್ ದಾಖಲಿಸಲು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿದ್ದಾರೆ.
إرسال تعليق