2022ನೇ ಸಾಲಿನ ಜಿಲ್ಲಾ ಪೋಲೀಸರ ಅದ್ಭುತ ಕಾರ್ಯಾಚರಣೆ ಒಟ್ಟು 283 ಪ್ರಕರಣಗಳ ಪತ್ತೆ : ವಾರಸುದಾರರ ಕೈ ಸೇರಿದ ಬರೋಬ್ಬರಿ 4 ,32 ,71 ,203 ರೂ ಮೌಲ್ಯದ ವಸ್ತುಗಳು.

    ದಿನಾಂಕ:15/12/2022 ರಂದು ಶಿವಮೊಗ್ಗ ಜಿಲ್ಲಾ ಪೊಲಿಸ್ ವತಿಯಿಂದ ಪೊಲಿಸ್ ಕವಾಯತು ಮೈದಾನ ಡಿಎಆರ್  ಶಿವಮೊಗ್ಗದಲ್ಲಿ 2022 ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕವಾಯತನ್ನು ಹಮ್ಮಿಕೊಂಡಿದ್ದು, 2022ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲಿಸ್  ಸ್ಟೇಷನ್ ಗಳಲ್ಲಿ ಒಟ್ಟು 633 ಸ್ವತ್ತು ಕಳವು ಪ್ರಕರಣಗಳು ವರದಿಯಾಗಿರುತ್ತವೆ.


       ಸದರಿ ಪ್ರಕರಣಗಳಲ್ಲಿ 1ಲಾಭಕ್ಕಾಗಿ ಕೊಲೆ,  5 ದರೊಡೆ, 24 ಸುಲಿಗೆ, 56 ಕನ್ನಕಳವು, 46 ಸಾಮಾನ್ಯ ಕಳವು, 4 ಜಾನುವಾರು ಕಳವು, 99 ವಾಹನ ಕಳವು ಹಾಗೂ 5 ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 238 ಪ್ರಕರಣಗಳನ್ನು ಪತ್ತೆ ಮಾಡಿ ಅಂದಾಜು ಮೌಲ್ಯ 3,80,91,328/- ರೂಗಳ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ಮೊಬೈಲ್ ಪೋನ್ ಗಳು, ವಾಹನಗಳು, ಜಾನುವಾರುಗಳು, ನಗದು ಹಣ,ಎಲೆಕ್ಟ್ರಾನಿಕ್ ವಸ್ತುಗಳು ಅಡಿಕೆ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.


     ಅಲ್ಲದೇ ಹಿಂದಿನ ವರ್ಷಗಳಲ್ಲಿ  ವರದಿಯಾದ ಪ್ರಕರಣಗಳಲ್ಲಿ 4 ಸುಲಿಗೆ, 12 ಕನ್ನಕಳವು, 9 ಸಾಮಾನ್ಯ ಕಳವು,20 ವಾಹನ ಕಳವು ಸೇರಿದಂತೆ ಒಟ್ಟು 45 ಪ್ರಕರಣಗಳನ್ನು ಸಹಾ ಪತ್ತೆ ಮಾಡಿ ಅಂದಾಜು ಮೌಲ್ಯ 51,79,875 /- ರೂ ಗಳ ಮಾಲನ್ನು ವಶಪಡಿಸಿಕೊಳ್ಳಲಾಗಿರುತ್ತದೆ.


   2022ನೇ ಸಾಲಿನ 238 ಪ್ರಕರಣಗಳು ಮತ್ತು ಹಿಂದಿನ ವರ್ಷಗಳ 45 ಪ್ರಕರಣಗಳು ಸೇರಿ ಒಟ್ಟು 283 ಪ್ರಕರಣಗಳನ್ನು ಪತ್ತೆ ಮಾಡಿ, ಅಂದಾಜು ಮೌಲ್ಯ 4,32,71,203 /- ರೂಗಳ ಮಾಲುಗಳನ್ನು ವಶಪಡಿಸಿಕೊಂಡಿದ್ದು ಸದರಿ ಮಾಲನ್ನು ಈ ದಿನ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.

       

Post a Comment

أحدث أقدم