ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಕೆಲವು ದಿನಗಳಿಂದ ರೈಲ್ವೆ ಕ್ಯಾಂಟೀನ್ ಅನ್ನು ಬಂದ್ ಮಾಡಲಾಗಿದೆ. ಈ ರೀತಿ ಮಾಡಿರುವುದರಿಂದ ಅಲ್ಲಿನ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ. ಕ್ಯಾಂಟೀನ್ ಬಂದ್ ಆಗಿರುವ ಕಾರಣ ಪ್ರಯಾಣಿಕರು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರು ಸಹ ಊಟ ಉಪಹಾರಕ್ಕಾಗಿ ಪರದಾಡುವಂತಾಗಿದೆ. ಹತ್ತಿರದಲ್ಲೂ ಸಹ ಯಾವುದೇ ಹೋಟೆಲ್ ಇಲ್ಲದಿರುವ ಕಾರಣ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ದೂರದ ಪ್ರಯಾಣ ಮಾಡುವ ಕಾರಣ ಪ್ರಯಾಣಿಕರಿಗೆ ಊಟ-ಉಪಹಾರದ ಅಗತ್ಯತೆ ಇದೆ. ಆದರೆ ದಿಡೀರ್ ಆಗಿ ರೈಲ್ವೆ ಕ್ಯಾಂಟೀನ್ ಬಂದ್ ಮಾಡಿರುವುದರಿಂದ ಪ್ರಯಾಣಿಕರೆಲ್ಲರಿಗೂ ಇದರಿಂದ ದೊಡ್ಡ ಮಟ್ಟದ ತೊಂದರೆಯಾಗುತ್ತಿದೆ. ಇದರಿಂದ ಬೇಸರಗೊಂಡ ಸಾರ್ವಜನಿಕರು ರೈಲ್ವೆ ಅಧಿಕಾರಿಗಳು ಆದಷ್ಟು ಶೀಘ್ರವಾಗಿ ಊಟ-ಉಪಹಾರ ಕಲ್ಪಿಸಿಕೊಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
إرسال تعليق