ಪೂಜೆಗೆ ಇಡಲಾಗಿದ್ದ ಹಣ್ಣು ತಿಂದ ವಿದ್ಯಾರ್ಥಿಗೆ ಥಳಿತ

 


ಬಿಹಾರ: ದುರ್ಗಾ ದೇವಿಯ ಪೂಜೆಗೆಂದು ಇಡಲಾಗಿದ್ದ ಸೇಬು ಹಣ್ಣನ್ನು ತಿಂದ ಎಂಬ ಕಾರಣಕ್ಕೆ ಆರು ವರ್ಷದ ವಿದ್ಯಾರ್ಥಿ ಯನ್ನು ತನ್ನ ಶಾಲೆಯಲ್ಲಿ ಥಳಿಸಲಾಗಿದೆ.

ಘಟನೆ ಗಯಾದಲ್ಲಿ ನಡೆದಿದೆ. ಬಿಘಾ ಗ್ರಾಮದ ಲಿಟಲ್ ಲೀಡರ್ಸ್ ಪಬ್ಲಿಕ್ ಸ್ಕೂಲ್ ಎಂಬ ಶಾಲೆ ನಡೆಸುತ್ತಿರುವ ಇಬ್ಬರನ್ನು ಬಂಧಿಸಲಾಗಿದೆ.

ಮೃತ ಬಾಲಕನನ್ನು ವಿವೇಕ್ ಎಂದು ಗುರುತಿಸಲಾಗಿದೆ. ಶಾಲೆಯ ಆವರಣದೊಳಗೆ ದುರ್ಗಾಪೂಜೆ ಆಯೋಜಿಸಲಾಗಿತ್ತು. ಈ ವೇಳೆ ವಿವೇಕ್ ಪೂಜೆಗೆಂದು ಇಟ್ಟಿದ್ದ ಸೇಬು ಹಣ್ಣು ತಿಂದಿದ್ದಾನೆ. ಇದರಿಂದ ಕೋಪಗೊಂಡ ಶಾಲಾ ಸಿಬ್ಬಂದಿ ಆತನನ್ನು ಶಾಲಾ ಕೊಠಡಿಗೆ ಕರೆದೊಯ್ದು ಥಳಿಸಿದ್ದಾರೆ. ನಂತರ ಅವನನ್ನು ಶಾಲೆಯಿಂದ ಹೊರ ಹಾಕ ಲಾಯಿತು.

ವಿವೇಕ್ ಶಾಲೆಯ ಗೇಟ್‌ನ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಆಟೋ ಡ್ರೈವರ್ ಅವನನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವ ಮಾರ್ಗಮಧ್ಯೆ ವಿವೇಕ್ ಮೃತಪಟ್ಟಿದ್ದಾನೆ ಎಂದು ವಿವೇಕ್‌ ಅಜ್ಜ ಹೇಳಿದ್ದಾರೆ.

 


Post a Comment

أحدث أقدم