ಚೋಳರ ಅವಧಿಯಲ್ಲಿ ಹಿಂದೂ ಧರ್ಮ ಇರಲಿಲ್ಲ- ನಟ ಕಮಲ್ ಹಾಸನ್

 ರಾಜಾ ರಾಜಾ ಚೋಳ ಹಿಂದೂ ರಾಜ ಅಲ್ಲ ಎಂದು ರಾಷ್ಟ್ರಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ವೆಟ್ರಿ ಮಾರನ್ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದೀಗ ನಟ ಕಮಲ್ ಹಾಸನ್ ವೆಟ್ರಿ ಮಾರನ್ ಹೇಳಿಕೆ ಬೆಂಬಲಿಸುವ ಮೂಲಕ ರಾಜನ ಧರ್ಮದ  ಬಗ್ಗೆ ತೀವ್ರ ರೀತಿಯ ಚರ್ಚೆಯಾಗುತ್ತಿದೆ.

            ಕಮಲ್ ಹಾಸನ್

By : Rekha.M
Online Desk

ಚೆನ್ನೈ: ರಾಜಾ ರಾಜಾ ಚೋಳ ಹಿಂದೂ ರಾಜ ಅಲ್ಲ ಎಂದು ರಾಷ್ಟ್ರಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ವೆಟ್ರಿ ಮಾರನ್ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದೀಗ ನಟ ಕಮಲ್ ಹಾಸನ್ ವೆಟ್ರಿ ಮಾರನ್ ಹೇಳಿಕೆ ಬೆಂಬಲಿಸುವ ಮೂಲಕ ರಾಜನ ಧರ್ಮದ  ಬಗ್ಗೆ ತೀವ್ರ ರೀತಿಯ ಚರ್ಚೆಯಾಗುತ್ತಿದೆ.

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ವೆಟ್ರಿ ಮಾರನ್, ರಾಜಾ ರಾಜಾ ಚೋಳನ್ ಹಿಂದೂ ಅಲ್ಲ ಆದರೆ, ಬಿಜೆಪಿಯವರು ನಮ್ಮ ಗುರುತನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ. ತಿರುವಳ್ಳೂರು ಅವರನ್ನು ಈಗಾಗಲೇ ಅವರು ಕೇಸರಿಕರಣ ಮಾಡಿದ್ದಾರೆ. ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಎಂದಿದ್ದರು.

ನಟ ಕಮಲ್ ಹಾಸನ್ ಕೂಡಾ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ರಾಜ ರಾಜ ಚೋಳನ್ ಅವಧಿಯಲ್ಲಿ ಹಿಂದೂ ಧರ್ಮ ಎಂದು ಕರೆಯುವ ಯಾವುದೇ ಹೆಸರು ಇರಲಿಲ್ಲ.  ವೈನವಂ, ಶಿವಂ ಮತ್ತು ಸಮಾನಂಗಳಿದ್ದವು ಮತ್ತು ಬ್ರಿಟಿಷರೇ ಹಿಂದೂ ಪದವನ್ನು ಸೃಷ್ಟಿಸಿದರು. ಅವರಿಗೆ ಏನು ಹೇಳಬೇಕೆಂದು ತಿಳಿಯದ ಕಾರಣ ಅವರು ತುತ್ತುಕುಡಿಯನ್ನು ಟುಟಿಕೋರಿನ್ ಆಗಿ ಬದಲಾಯಿಸಿದರು ಎಂದು ಹೇಳಿದ್ದಾರೆ.

ಮಣಿರತ್ನಂ ಅವರ ಬಹು ನಿರೀಕ್ಷಿತ ಪೊನ್ನಿಯಲ್ ಸೆಲ್ವನ್ 1 ಚಿತ್ರ ಬಿಡುಗಡೆಯಾದ ನಂತರ ಈ ವೆಟ್ರಿಮಾರನ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಪೊನ್ನಿಯಲ್ ಸೆಲ್ವನ್ 1  ರಾಜ ರಾಜ ಚೋಳನ್ ಅವರಿಂದ ಪ್ರೇರಿತವಾದ ಕಲ್ಕಿ ಅವರ ಕಾಲ್ಪನಿಕ ಕಾದಂಬರಿ ಆಧರಿಸಿದ ಸಿನಿಮಾ ಎನ್ನಲಾಗಿದೆ.

ವೆಟ್ರಿಮಾರನ್ ಹೇಳಿಕೆಗೆ ಬಿಜೆಪಿ ಮುಖಂಡ ಹೆಚ್ ರಾಜಾ ತಿರುಗೇಟು ನೀಡಿದ್ದಾರೆ.  ರಾಜ ರಾಜ ಚೋಳನ್ ಹಿಂದೂ ರಾಜನೇ ಆಗಿದ್ದ. ನಾನು ವೆಟ್ರಿ ಮಾರನ್ ಅವರಂತೆ ಇತಿಹಾಸವನ್ನು ಚೆನ್ನಾಗಿ ತಿಳಿದಿಲ್ಲ. ಆದರೆ, ಅವರು ರಾಜ ರಾಜ ಚೋಳನ್ ನಿರ್ಮಿಸಿದ ಎರಡು ಚರ್ಚ್ ಮತ್ತು ಮಸೀದಿಗಳನ್ನು ಸೂಚಿಸಲಿ,ಅವರು ತಮ್ಮನ್ನು ಶಿವಪಾದ ಶೇಖರನ್ ಎಂದು ಕರೆದುಕೊಂಡಿದ್ದರು. ಆಗ ಆತ ಹಿಂದೂ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.


Post a Comment

أحدث أقدم