ಕಾಶ್ಮೀರದ ತಿತ್ವಾಲ್ ನಲ್ಲಿ ನಿರ್ಮಾಣವಾಗುತ್ತಿರುವ ಶಾರದಾ ದೇವಿ ದೇವಾಲಯಕ್ಕೆ ಕರ್ನಾಟಕದ ಶೃಂಗೇರಿ ಶಾರದಾ ಪೀಠದಿಂದ ಶಾರದೆಯ ಪಂಚಲೋಹ ವಿಗ್ರಹವನ್ನು ಹಸ್ತಾಂತರ ಮಾಡಲಾಗಿದೆ.
ಕಾಶ್ಮೀರಿ ಪಂಡಿತರ ತಂಡಕ್ಕೆ ವಿಗ್ರಹ ಹಸ್ತಾಂತರಿಸುತ್ತಿರುವ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಶ್ರೀಗಳುಶೃಂಗೇರಿ: ಕಾಶ್ಮೀರದ ತಿತ್ವಾಲ್ ನಲ್ಲಿ ನಿರ್ಮಾಣವಾಗುತ್ತಿರುವ ಶಾರದಾ ದೇವಿ ದೇವಾಲಯಕ್ಕೆ ಕರ್ನಾಟಕದ ಶೃಂಗೇರಿ ಶಾರದಾ ಪೀಠದಿಂದ ಶಾರದೆಯ ಪಂಚಲೋಹ ವಿಗ್ರಹವನ್ನು ಹಸ್ತಾಂತರ ಮಾಡಲಾಗಿದೆ.
ವಿಜಯದಶಮಿಯ ದಿನದಂದು ಶೃಂಗೇರಿ ಮಠದ ಉಭಯ ಶ್ರೀಗಳಾದ ಶ್ರೀ ಭಾರತೀ ತೀರ್ಥ ಸ್ವಾಮಿಗಳು ಮತ್ತು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ನೂತನ ವಿಗ್ರಹಕ್ಕೆ ವಿಶೇಷ ಪೂಜೆ ನೆರವೇರಿಸಿ ದೇವಾಲಯ ನಿರ್ಮಿಸುತ್ತಿರುವ ಕಾಶ್ಮೀರಿ ಪಂಡಿತರ ತಂಡಕ್ಕೆ ವಿಗ್ರಹವನ್ನು ಹಸ್ತಾಂತರಿಸಿದರು.
ಶೃಂಗೇರಿಯಿಂದ ಕಾಶ್ಮೀರದ ನೀಲಂಕಣಿವೆಯ ತ್ರೀತ್ವಾಲ್ಗೆ ಶಾರದೆಯ ವಿಗ್ರಹ ತೆಗೆದುಕೊಂಡು ಹೋಗಲಾಗುತ್ತಿದ್ದು, ಮುಂದಿನ ವರ್ಷ ಸಂಕ್ರಾಂತಿಯ ನಂತರ ಉತ್ತರಾಯಣ ಸಮಯದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಶಂಕರಾಚಾರ್ಯ ಆದಿಯಾಗಿ ಅನೇಕ ವಿದ್ವಾಂಸರು ಸರ್ವಜ್ಞ ಪೀಠಾರೋಹಣ ಮಾಡಿದ ಕಾಶ್ಮೀರದಲ್ಲಿನ ಪುರಾತನ, ಐತಿಹಾಸಿಕ ಶಾರದಾ ದೇವಾಲಯ ಪುರಾಣ ಪ್ರಸಿದ್ಧವಾಗಿದ್ದು ಈಗ ಅದು ಪಿಒಕೆಯಲ್ಲಿದೆ, ಈ ಹಿನ್ನೆಲೆಯಲ್ಲಿ ತೀತ್ವಾಲ್ನಲ್ಲಿ ನೂತನ ಶಾರದ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ.
إرسال تعليق