ಎಚ್ಚರ..! ನಿಮಗೆ ವಿದೇಶದ ಅಪರಿಚಿತ ನಂಬರಿನಿಂದ ಕರೆ ಬಂದಿದೆಯೇ?

 ಸೈಬರ್ ಕ್ರೈಮ್ ನಡೆಸುವ ಕ್ರಿಮಿನಲ್ ಗಳು ಪದೇಪದೇ ತಮ್ಮ ಕಾರ್ಯವಿಧಾನಗಳನ್ನು ಬದಲಿಸುತ್ತಿರುತ್ತಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯುತ್ತದೆ. ಇತ್ತೀಚೆಗೆ ಅವರು ಹೊಸ ವಿಧಾನವೊಂದನ್ನು ಅನುಸರಿಸುತ್ತಿದ್ದಾರೆ. ಅದೇನೆಂದು ತಿಳಿಯಿರಿ.

                 ಸಾಂದರ್ಭಿಕ ಚಿತ್ರ

By : Rekha.M
Online Desk

ಸೈಬರ್ ಕ್ರೈಮ್ ನಡೆಸುವ ಕ್ರಿಮಿನಲ್ ಗಳು ಪದೇಪದೇ ತಮ್ಮ ಕಾರ್ಯವಿಧಾನಗಳನ್ನು ಬದಲಿಸುತ್ತಿರುತ್ತಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯುತ್ತದೆ. ಇತ್ತೀಚೆಗೆ ಅವರು ಹೊಸ ವಿಧಾನವೊಂದನ್ನು ಅನುಸರಿಸುತ್ತಿದ್ದಾರೆ. ಅದೇನೆಂದು ತಿಳಿಯಿರಿ.

ಬಹಳಷ್ಟು ಭಾರತೀಯರು ಉದ್ಯೋಗಕ್ಕಾಗಿ ಮತ್ತು ವಿದ್ಯಾಭ್ಯಾಸದ ಸಲುವಾಗಿ ವಿದೇಶಗಳಲ್ಲಿ ನೆಲಸಿದ್ದಾರೆ. ಇವರ ಸಂಬಂಧಿಕರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ, ವಿದೇಶದಲ್ಲಿರುವ ತಮ್ಮ ಸಂಬಂಧಿಕರು ಭಾರಿ ಮೌಲ್ಯದ ಉಡುಗೊರೆ ಕಳಿಸಿದರು, ಹಣ ಕಳಿಸಿದರು ಇತ್ಯಾದಿ ಸಂಗತಿಗಳನ್ನು ಖುಷಿಯಿಂದ ಹೇಳಿಕೊಳ್ಳುತ್ತಿರುತ್ತಾರೆ.

ಇಂಥವುಗಳನ್ನು ಸೈಬರ್ ಕ್ರಿಮಿನಲ್ ಗಳು ಟ್ರ್ಯಾಕ್ ಮಾಡುತ್ತಿರುತ್ತಾರೆ. ದೇಶ – ವಿದೇಶದಲ್ಲಿರುವ ವ್ಯಕ್ತಿಗಳನ್ನು ತಮ್ಮ ಬಲೆಗೆ ಬೀಳಿಸಲು ಯತ್ನಿಸುತ್ತಾರೆ. ವಿದೇಶದಲ್ಲಿರುವ  ತಮ್ಮ ಬಂಧುಗಳು ಕಷ್ಟದಲ್ಲಿದ್ದರೆ  ಭಾರತದಲ್ಲಿರುವ ಬಂಧುಗಳು ಕೂಡ ಸಹಾಯಕ್ಕೆ ಧಾವಿಸುತ್ತಾರೆ ಎಂಬುದನ್ನು ಅರಿತು ಕಾರ್ಯಾಚರಣೆ ರೂಪಿಸುತ್ತಿದ್ದಾರೆ. ಇತ್ತೀಚೆಗೆ ಇಂಥ ಪ್ರಕರಣಗಳು ನಡೆದಿವೆ.

ಇಂಥ ಒಂದು ಪ್ರಕರಣ ಪಂಚಕುಲದಲ್ಲಿ ನಡೆದಿದೆ. ಇಲ್ಲಿನ ಪ್ರೇಮ್ ಚಂದ್ ಮತ್ತವರ ಪತ್ನಿಯ ಹತ್ತಿರದ ಸಂಬಂಧಿಕ ಕೆನಡಾದಲ್ಲಿ ಓದುತ್ತಿದ್ದಾರೆ. ಇತ್ತೀಚೆಗೆ ಇವರಿಗೆ ವಿದೇಶದ ಅಪರಿಚಿತ ಪೋನ್ ನಂಬರಿನಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತಾನು ಸೋದರಳಿಯ ಎಂದು ಹೇಳಿಕೊಂಡಿದ್ದಾನೆ. ತಾನು ಪಾರ್ಟಿಯೊಂದರಲ್ಲಿ  ಓರ್ವ ವ್ಯಕ್ತಿಯೊಂದಿಗೆ ಜಗಳವಾಡಿಕೊಂಡಿದ್ದೇನೆ. ಈ ಸಂದರ್ಭ ಆ ವ್ಯಕ್ತಿಗೆ ಗಾಯವಾಗಿದೆ. ಆತನಿಗೆ ಹಣ ಕೊಡದಿದ್ದರೆ ಕೆನಡಾ ಪೊಲೀಸರು ಬಂಧಿಸುತ್ತಾರೆ ಎಂದು ಹೇಳಿದ್ದಾನೆ. ತುರ್ತು ಹಣ ಸಹಾಯ ಮಾಡುವಂತೆ ಕೋರಿ ಅಕೌಂಟ್ ನಂಬರ್ ಕೊಟ್ಟಿದ್ದಾನೆ.

ತೀವ್ರ ಆತಂಕದಲ್ಲಿದ್ದ ಪಂಚಕುಲ ಕುಟುಂಬ ಹಿಂದೆಮುಂದೆ ವಿಚಾರಿಸದೇ ಆತ ಕೊಟ್ಟ ನಂಬರಿಗೆ 7.5 ಲಕ್ಷ ರೂಪಾಯಿ ವರ್ಗಾಯಿಸಿದ್ದಾರೆ. ಆ ನಂತರವೇ ಅವರಿಗೆ ತಾವು ಮೋಸ ಹೋಗಿರುವುದು ತಿಳಿದಿದೆ. ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.



Post a Comment

أحدث أقدم