ಮಧ್ಯ ಪ್ರದೇಶ: ಟಿ-90 ಯುದ್ಧ ಟ್ಯಾಂಕರ್ ನ ಬ್ಯಾರೆಲ್ ಸಿಡಿದು ಇಬ್ಬರು ಸೈನಿಕರು ಸಾವು

 ಮಧ್ಯಪ್ರದೇಶದ ಬಬಿನಾದಲ್ಲಿ ಫೀಲ್ಡ್ ಫೈರಿಂಗ್ ತರಬೇತಿ ವೇಳೆ ಟಿ -90 ಯುದ್ಧ ಟ್ಯಾಂಕ್ರ್ ನ ಬ್ಯಾರೆಲ್ ಸಿಡಿದು ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ...

          ಸಾಂದರ್ಭಿಕ ಚಿತ್ರ

By : Rekha.M
Online Desk

ಬಬಿನಾ: ಮಧ್ಯಪ್ರದೇಶದ ಬಬಿನಾದಲ್ಲಿ ಫೀಲ್ಡ್ ಫೈರಿಂಗ್ ತರಬೇತಿ ವೇಳೆ ಟಿ -90 ಯುದ್ಧ ಟ್ಯಾಂಕ್ರ್ ನ ಬ್ಯಾರೆಲ್ ಸಿಡಿದು ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ಸಂಜೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

"ಅಕ್ಟೋಬರ್ 6 ರಂದು ಬಾಬಿನಾ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ವಾರ್ಷಿಕ ಗುಂಡಿನ ದಾಳಿಯ ಸಂದರ್ಭದಲ್ಲಿ ಟ್ಯಾಂಕರ್ ನ ಬ್ಯಾರೆಲ್ ಸ್ಫೋಟಗೊಂಡಿತು. ಈ ಟ್ಯಾಂಕರ್ ಅನ್ನು ಮೂವರು ಸಿಬ್ಬಂದಿ ನಿರ್ವಹಿಸುತ್ತಿದ್ದರು. ಎಲ್ಲಾ ಸಿಬ್ಬಂದಿಗೆ ತಕ್ಷಣವೇ ವೈದ್ಯಕೀಯ ತುರ್ತು ಚಿಕಿತ್ಸೆ ನೀಡಿ ಬಬಿನಾದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು" ಎಂದು ಅವರು ತಿಳಿಸಿದ್ದಾರೆ.

ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಕಮಾಂಡರ್ ಮತ್ತು ಗನ್ನರ್ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಚಾಲಕ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ಸೇನೆ ತನಿಖೆಗೆ ಆದೇಶಿಸಿದೆ.



Post a Comment

أحدث أقدم