ಡಿಸಿಪಿ ನಿಶಾ ಜೇಮ್ಸ್ ವಿರುದ್ಧ 50 ದೂರು ದಾಖಲು: ಐಪಿಎಸ್ ಅಧಿಕಾರಿಗೆ ಹಲವು ಪೊಲೀಸರ ಬೆಂಬಲ!

 ನಗರ ಪೊಲೀಸ್‌ ಆಯುಕ್ತರ ಕಚೇರಿಯ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್‌ ಅವರ ವಿರುದ್ಧ ಕಡತ ವಿಲೇವಾರಿ ವಿಳಂಬ, ಸಿಬ್ಬಂದಿ ಮೇಲೆ ಕಾನೂನುಬಾಹಿರ ಶಿಸ್ತುಕ್ರಮ ಹಾಗೂ ವಾರ್ಷಿಕ ವೇತನ ಬಡ್ತಿ ತಡೆ ಇನ್ನಿತರ ಆರೋಪಗಳು ಕೇಳಿಬಂದಿವೆ.

                                   ನಿಶಾ ಜೇಮ್ಸ್

By : Rekha.M
Online Desk

ಬೆಂಗಳೂರು: ನಗರ ಪೊಲೀಸ್‌ ಆಯುಕ್ತರ ಕಚೇರಿಯ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್‌ ಅವರ ವಿರುದ್ಧ ಕಡತ ವಿಲೇವಾರಿ ವಿಳಂಬ, ಸಿಬ್ಬಂದಿ ಮೇಲೆ ಕಾನೂನುಬಾಹಿರ ಶಿಸ್ತುಕ್ರಮ ಹಾಗೂ ವಾರ್ಷಿಕ ವೇತನ ಬಡ್ತಿ ತಡೆ ಇನ್ನಿತರ ಆರೋಪಗಳು ಕೇಳಿಬಂದಿವೆ.

ಎಫ್ ಡಿ ಎ ಮತ್ತು ಎಸ್ ಡಿಎ ಸಿಬ್ಬಂದಿಗಳು ನಿಶಾ ಜೇಮ್ಸ್ ವಿರುದ್ಧ ಹೆಚ್ಚುವರಿ ಪೊಲೀಸ್ ಆಡಳಿತ ಮಹಾನಿರ್ದೇಶಕ ಎಂ ಎ ಸಲೀಂ ಅವರಿಗೆ 13 ಪುಟಗಳ ದೂರನ್ನು ಸಲ್ಲಿಸಿದ್ದಾರೆ. ಜೇಮ್ಸ್ ತಡರಾತ್ರಿಯವರೆಗೂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಹೊರಡುವವರೆಗೂ ಕಚೇರಿಯಲ್ಲಿ ಇರುವಂತೆ ಸಿಬ್ಬಂದಿಯನ್ನು ಒತ್ತಾಯಿಸುತ್ತಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.

ಡಿಸಿಪಿ ನಿಶಾ ಜೇಮ್ಸ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆದಿದೆ. 'ವಿ ಸಪೋರ್ಟ್ ಯೂ' ಎಂದು ಕೆಲ ಪೋಲೀಸ್ ಸಿಬ್ಬಂದಿ ನಿಶಾ ಬೆಂಬಲಕ್ಕೆ ನಿಂತಿದ್ದಾರೆ.‌ ಪೊಲೀಸ್ ಆಯುಕ್ತರ ಕಚೇರಿಯ ಸಿಬಂದಿ ಆಡಳಿತ ವಿಭಾಗದ ಎಡಿಜಿಪಿಗೆ ನಿಶಾ ಜೇಮ್ಸ್ ವಿರುದ್ಧವೇ ದೂರು ನೀಡಿದ್ದಾರೆ ಎನ್ನುವ ಸುದ್ದಿ ಬೆನ್ನಲ್ಲೇ ಕೆಲವರು ನಿಶಾ ಪರವಾಗಿ ನಿಂತಿದ್ದಾರೆ.

ಈ ವಿಷಯವನ್ನು ಚರ್ಚಿಸಲು ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದಿದ್ದು. ಈ ಬಗ್ಗೆ ಇಲಾಖಾ ತನಿಖೆ ಆರಂಭಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಲು ನಿಶಾ ಜೇಮ್ಸ್ ನಿರಾಕರಿಸಿದ್ದಾರೆ.



    Post a Comment

    أحدث أقدم