ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು(Bharat Jodo yatra) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿನ್ನೆ ಮೈಸೂರಿನ ಬಳಿ ಭಾರತ್ ಜೋಡೋ ಯಾತ್ರೆ ವೇಳೆ ಮಳೆಯನ್ನು ಲೆಕ್ಕಿಸದೆ ರಾಹುಲ್ ಗಾಂಧಿಯವರು(Rahul Gandhi) ಒದ್ದೆಯಾಗಿಕೊಂಡು ಭಾಷಣ ಮುಂದುವರಿಸಿದ್ದು ಭಾರೀ ಸದ್ದು ಮಾಡುತ್ತಿದೆ.
ನಂಜನಗೂಡು ತಲ್ಲೂಕಿನ ಬದನವಾಳಿನಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ರಾಹುಲ್ ಗಾಂಧಿಬದನವಾಳು (ಮೈಸೂರು ಜಿಲ್ಲೆ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು(Bharat Jodo yatra) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿನ್ನೆ ಮೈಸೂರಿನ ಬಳಿ ಭಾರತ್ ಜೋಡೋ ಯಾತ್ರೆ ವೇಳೆ ಮಳೆಯನ್ನು ಲೆಕ್ಕಿಸದೆ ರಾಹುಲ್ ಗಾಂಧಿಯವರು(Rahul Gandhi) ಒದ್ದೆಯಾಗಿಕೊಂಡು ಭಾಷಣ ಮುಂದುವರಿಸಿದ್ದು ಭಾರೀ ಸದ್ದು ಮಾಡುತ್ತಿದೆ.
ಅಷ್ಟೇ ಅಲ್ಲದೆ ನಿನ್ನೆ ರಾಹುಲ್ ಗಾಂಧಿಯವರು ಯಾತ್ರೆಯ ಭಾಗವಾಗಿ ಹಾಗೂ ಗಾಂಧಿ ಜಯಂತಿ ಅಂಗವಾಗಿ ಬದನವಾಳು ಗ್ರಾಮಕ್ಕೆ ಭೇಟಿ ನೀಡಿದ್ದು ಅಪರೂಪದ ವಿದ್ಯಮಾನ ನಡೆದು ಸುದ್ದಿ ಮಾಡಿದೆ. 1990 ರ ದಶಕದ ಆರಂಭದಿಂದಲೂ ಈ ಗ್ರಾಮ ಜಾತಿ ಸಂಘರ್ಷಣೆ ಜೋರಾಗಿತ್ತು. ಜಾತಿ ಘರ್ಷಣೆಯಿಂದ ನಲುಗಿ ಹೋಗಿದ್ದ ಗ್ರಾಮದ ಲಿಂಗಾಯತ ಮತ್ತು ದಲಿತ ಸಮುದಾಯಗಳು ರಾಹುಲ್ ಗಾಂಧಿ ಭೇಟಿಯಿಂದ ಒಂದಾಗಿವೆ.
ಹಲವು ವರ್ಷಗಳಿಂದ ಸಮುದಾಯಗಳ ನಡುವಿನ ದ್ವೇಷದಲ್ಲಿ ಇಲ್ಲಿ ಮೂವರು ಮೃತಪಟ್ಟಿದ್ದರು. ಇದೀಗ ಸಾಕಷ್ಟು ಸಾಮಾಜಿಕ ಸಾಮರಸ್ಯ ಉಂಟಾಗಿದೆ. ಇದಕ್ಕೆ ಕಾರಣ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ.
ಯಾತ್ರೆಯಿಂದ ಗ್ರಾಮ ಅಭಿವೃದ್ಧಿ: ಯಾತ್ರೆಯಿಂದಾಗಿ ಲಿಂಗಾಯತ ಬೀದಿಗಳು ಮತ್ತು ದಲಿತ ಕಾಲೋನಿಗಳನ್ನು ಸಂಪರ್ಕಿಸುವ ಬಳಕೆಯಾಗದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಮುದಾಯಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಬದನವಾಳು ಖಾದಿ ಗ್ರಾಮೋದ್ಯೋಗಕ್ಕೆ ರಾಹುಲ್ ಭೇಟಿಗೂ ಮುನ್ನ ಕೆಪಿಸಿಸಿ ನಾಯಕರು ಗಿಡಗಂಟಿಗಳನ್ನು ತೆರವುಗೊಳಿಸಿ, ನಿರ್ಲಕ್ಷಿಸಿರುವ ರಸ್ತೆಯನ್ನು ಇಕ್ಕೆಲಗಳಲ್ಲಿ ಕಸ, ಕಳೆಗಳನ್ನು ಕೀಳಿಸಿದ್ದಾರೆ. ಇಂಟರ್‌ಲಾಕ್ ಇಟ್ಟಿಗೆಗಳನ್ನು ಹಾಕಲು ನಿರ್ಧರಿಸಿ ‘ಭಾರತ್ ಜೋಡೋ ಯಾತ್ರಾ’ ರಸ್ತೆ ಎಂದು ನಾಮಕರಣ ಮಾಡಿದರು. ಕೆಲವು ಬಡವರ ಮನೆಗಳಿಗೆ ಬಣ್ಣ ಹಚ್ಚಲಾಗಿದೆ.
2000ಕ್ಕೂ ಹೆಚ್ಚು ಕುಟುಂಬಗಳಿಗೆ ಸಹೋದರತ್ವದ ಸಂದೇಶ ಸಾರಿದ ರಾಹುಲ್ ಗಾಂಧಿ ಗ್ರಾಮ ಪ್ರವೇಶ ಐತಿಹಾಸಿಕ. ಅವರು ಮತ್ತು ಇತರ ಕಾಂಗ್ರೆಸ್ ಮುಖಂಡರು ಎರಡೂ ಸಮುದಾಯದ ಮಕ್ಕಳೊಂದಿಗೆ ರಸ್ತೆಯನ್ನು ಉದ್ಘಾಟಿಸಿದರು. ಲಿಂಗಾಯತ ಮತ್ತು ದಲಿತ ಪ್ರದೇಶಗಳಿಗೆ ಭೇಟಿ ನೀಡಿದ ರಾಹುಲ್, ಅಲ್ಲಿನ ಜನರೊಂದಿಗೆ ಬೆರೆತರು. ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚುವ ಶ್ರಮದಾನದಲ್ಲಿ ಪಾಲ್ಗೊಂಡರು.
ಗಾಂಧಿ ಜಯಂತಿಯ ಮುನ್ನಾದಿನ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ತಾತ್ಕಾಲಿಕ ಭೋಜನಶಾಲೆಯಲ್ಲಿ ಉಳಿದುಕೊಂಡ ಕಾಂಗ್ರೆಸ್ ನಾಯಕರು ಗ್ರಾಮದ ಜನರಲ್ಲಿ ಪರಸ್ಪರ ವಿಶ್ವಾಸ ಮತ್ತು ಸೌಹಾರ್ದತೆಯನ್ನು ಬಲಪಡಿಸುವ ಮೂಲಕ ಲಿಂಗಾಯತ ಮತ್ತು ದಲಿತ ಸಮುದಾಯಗಳ ಸದಸ್ಯರು ಮತ್ತು ಗ್ರಾಮದ ಮುಖಂಡರೊಂದಿಗೆ ಮಧ್ಯಾಹ್ನದ ಊಟ ಮಾಡಿ ಕಾಂಗ್ರೆಸ್ ಮುಖಂಡರ ಮನ ಗೆದ್ದರು. ಬದನವಾಳು ಗ್ರಾಮದಲ್ಲಿ ವೀರಶೈವ – ದಲಿತ ಸಮುದಾಯದ ಜನರೊಂದಿಗೆ ಕುಳಿತು ಸಹಭೋಜನ (Lunch) ಮಾಡಿದರು. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡಗಳು ನಳನಳಿಸುತ್ತಿವೆ.
ಆಗಿದ್ದೇನು? 1993ರಲ್ಲಿ ದೇವಸ್ಥಾನ ಲೋಕಾರ್ಪಣೆ ವಿಚಾರವಾಗಿ ವೀರಶೈವ ಹಾಗೂ ದಲಿತರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಮೂವರು ದಲಿತರ ಹತ್ಯೆಯಾಗಿತ್ತು. ಈ ಘಟನೆ ಹಿನ್ನಲೆಯಲ್ಲಿ ಎರಡು ಸಮುದಾಯದ ನಡುವೆ ವೈಷಮ್ಯ ಮೂಡಿತ್ತು. ಆದರೆ ಜೋಡೋ ಯಾತ್ರೆಯ (Bharat Jodo Yatra) ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಸಹಭೋಜನ ನಡೆಸುವ ಮೂಲಕ ಇಪ್ಪತ್ತೊಂಬತ್ತು ವರ್ಷಗಳ ನಂತರ ಈ ಹಳೇ ವೈಷಮ್ಯವನ್ನು ಶಮನ ಮಾಡಿದ್ದಾರೆ.
ದಲಿತರು, ಹಿಂದುಳಿದ ವರ್ಗ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದ 28 ಜನರೊಂದಿಗೆ ಒಟ್ಟಿಗೆ ಕುಳಿತು ಸಹಭೋಜನ ಮಾಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ , ಕೆ.ಸಿ ವೇಣುಗೋಪಾಲ್ ಮತ್ತಿತರ ನಾಯಕರ ಉಪಸ್ಥಿತರಿದ್ದರು.
ರಾಹುಲ್ ಭೇಟಿಯಿಂದ ಸಂತಸವಾಗಿದೆ ಎಂದು ಗ್ರಾಮಸ್ಥರಾದ ಬಸವಣ್ಣ ಹೇಳುತ್ತಾರೆ. ಮಹಾತ್ಮ ಗಾಂಧಿ 1927 ಮತ್ತು 1932ರಲ್ಲಿ ದಲಿತ ಕಾಲೋನಿಗೆ ಭೇಟಿ ನೀಡಿದ್ದರು. ಖಾದಿ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಗಾಂಧಿ ಗ್ರಾಮಕ್ಕೆ ಭೇಟಿ ನೀಡಿದ್ದರು. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸರ್ಕಾರ ಅಂತಹ ಮಾರ್ಗಗಳ ಬಗ್ಗೆ ಯೋಚಿಸಬೇಕು ಎಂದು ಸ್ಥಳೀಯ ಶಿವ ಮೂರ್ತಿ ಹೇಳಿದರು.
ಅಹಿಂಸೆಯ ಹಾದಿ, ಸ್ವರಾಜ್ಯ
ಮಹಾತ್ಮ ಗಾಂಧಿ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷ್ ರಾಜ್ ವಿರುದ್ಧ ಹೋರಾಡಿದಂತೆಯೇ, ಅವರನ್ನು ಕೊಂದ ಸಿದ್ಧಾಂತದೊಂದಿಗೆ ಕಾಂಗ್ರೆಸ್ ಯುದ್ಧವನ್ನು ಪ್ರಾರಂಭಿಸಿದೆ. “1927 ರಲ್ಲಿ ಮಹಾತ್ಮ ಗಾಂಧಿಯವರು ಭೇಟಿ ನೀಡಿದ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ನಾವು ಅವರ 153 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.
ಭಾರತದ ಆ ಮಹಾನ್ ಪುತ್ರನನ್ನು ನೆನೆದು ನಮನ ಸಲ್ಲಿಸುತ್ತೇವೆ. ಭಾರತ ಜೋಡೋ ಯಾತ್ರೆಯ 25ನೇ ದಿನದ ಪಾದಯಾತ್ರೆಯಲ್ಲಿ ನಾವು ಅವರ ಅಹಿಂಸೆ, ಏಕತೆ, ಸಮಾನತೆ ಮತ್ತು ನ್ಯಾಯದ ಹಾದಿಯಲ್ಲಿ ನಡೆಯುತ್ತಿರುವುದು ನಮ್ಮ ಸ್ಮರಣೆಯನ್ನು ಹೆಚ್ಚು ಕಟುವಾಗಿಸುತ್ತಿದೆ ಎಂದಿದ್ದಾರೆ.

إرسال تعليق