ಸಿವಿಲ್ ಪೊಲೀಸ್ ಪೇದೆಯ 1137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ತೃತೀಯ ಲಿಂಗಿಗಳಿಗೂ ಅವಕಾಶ!

 ಕರ್ನಾಟಕ ಸಿವಿಲ್ ಪೊಲೀಸ್ ಪೇದೆಗಳ (ಸಿಪಿಸಿ) 1137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು,  ರಾಜ್ಯ ಪೊಲೀಸ್‌ ಇಲಾಖೆಯು ಗೆಜೆಟ್ ಅಧಿಸೂಚನೆ ಹೊರಡಿಸಿದೆ.

                 ಸಾಂದರ್ಭಿಕ ಚಿತ್ರ

By : Rekha.M
Online Desk

ಬೆಂಗಳೂರು: ಕರ್ನಾಟಕ ಸಿವಿಲ್ ಪೊಲೀಸ್ ಪೇದೆಗಳ (ಸಿಪಿಸಿ) 1137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು,  ರಾಜ್ಯ ಪೊಲೀಸ್‌ ಇಲಾಖೆಯು ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದು, ಅರ್ಜಿ ಸ್ವೀಕಾರ ಪ್ರಕ್ರಿಯೆ 2022 ಅಕ್ಟೋಬರ್ 20ರಿಂದ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆ ದಿನಾಂಕ 2022ರ ನವಂಬರ್ 21ರ ಸಂಜೆ ಆರು ಗಂಟೆವರೆಗೆ ಅವಕಾಶ ಇರಲಿದೆ. ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ 2022ರ ನವಂಬರ್ 23. ಆನ್‌ಲೈನ್ ಅಥವಾ ಅಧಿಕೃತ ಬ್ಯಾಂಕ್ ಶಾಖೆಗಳು ಅಥವಾ ಸ್ಥಳೀಯ ಅಂಚೆ ಕಚೇರಿಗಳ ಮೂಲಕ ಪಾವತಿಸಬಹುದು.

ಪೊಲೀಸ್ ಕಾನ್‌ಸ್ಟೇಬಲ್ (ನಾಗರಿಕ) ಪುರುಷ ಅಭ್ಯರ್ಥಿಗಳಿಗೆ 683, ಮಹಿಳೆಯರಿಗೆ 229, ಪುರುಷ ತೃತೀಯ ಲಿಂಗ 22 ಹಾಗೂ ಮಹಿಳಾ ತೃತೀಯ ಲಿಂಗದ ಅಭ್ಯರ್ಥಿಗಳಿಗೆ 10 ಹುದ್ದೆಗಳು ಖಾಲಿ ಇವೆ. ಜೊತೆಗೆ ಸೇವಾನಿರತ ಪೊಲೀಸ್ ಕಾನ್‌ಸ್ಟೇಬಲ್ (ನಾಗರಿಕ) ಪುರುಷರ 134, ಮಹಿಳೆ 57, ಪುರುಷ ತೃತೀಯ ಲಿಂಗ 1 ಹಾಗೂ ಮಹಿಳಾ ತೃತೀಯ ಲಿಂಗ 1 ಹುದ್ದೆಗಳು ಖಾಲಿ ಇದ್ದು, ಒಟ್ಟು ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ಗಳಿಗಾಗಿ 1137 ಹುದ್ದೆಗಳು ಖಾಲಿ ಇವೆ.

ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://ksp.karnataka.gov.in/ ಅಥವಾ https://recruitment.ksp.gov.in/  ಗಳಲ್ಲಿ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕಾಗಿದೆ. ನೇರವಾಗಿ ಅಥವಾ ಅಂಚೆ ಮೂಲಕ ಅರ್ಜಿಗಳನ್ನು ಕಳಿಸಲು ಅವಕಾಶ ಇರುವುದಿಲ್ಲ.





Post a Comment

أحدث أقدم