ಎಫ್ ಐಆರ್ ಹಿನ್ನಲೆಯಲ್ಲಿ ಸೆಪ್ಟೆಂಬರ್ 29ರೊಳಗೆ ನೋಂದಾಯಿಸಿಕೊಳ್ಳುವಂತೆ ಶೋಭಾ ಸಿಟಿ ಡೆವಲರಪರ್ಸ್ ಗೆ RERA ಆದೇಶ ನೀಡಿದೆ.
ಸಾಂದರ್ಭಿಕ ಚಿತ್ರ
ಬೆಂಗಳೂರು: ಎಫ್ ಐಆರ್ ಹಿನ್ನಲೆಯಲ್ಲಿ ಸೆಪ್ಟೆಂಬರ್ 29ರೊಳಗೆ ನೋಂದಾಯಿಸಿಕೊಳ್ಳುವಂತೆ ಶೋಭಾ ಸಿಟಿ ಡೆವಲರಪರ್ಸ್ ಗೆ RERA ಆದೇಶ ನೀಡಿದೆ.
ತಮ್ಮಿಂದ ಅನುಮತಿ ಪಡೆಯದೆ ನಿರ್ಮಾಣ ಯೋಜನೆಗೆ ಮುಂದಾದಕ್ಕಾಗಿ ಅಗ್ನಿಶಾಮಕ ಇಲಾಖೆಯು ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ರೆರಾ-ಕೆ ಇತ್ತೀಚೆಗೆ ಶೋಭಾ ಲಿಮಿಟೆಡ್‌ಗೆ ಹೆಗ್ಡೆನಗರದ ಶೋಭಾ ಸಿಟಿ ಯೋಜನೆಯನ್ನು ಸೆಪ್ಟೆಂಬರ್ 19 ರೊಳಗೆ ನೋಂದಣಿ ಮಾಡುವಂತೆ ಆದೇಶಿಸಿದೆ.
ಪ್ರವರ್ತಕರು BWSSBಯೊಂದಿಗೆ ನೀರು ಸರಬರಾಜಿಗೆ ಅರ್ಜಿ ಸಲ್ಲಿಸಬೇಕೆಂದು RERA ಆದೇಶಿಸಿದ್ದು, ಶೋಭಾ ಸಿಟಿ ಬೆಂಗಳೂರು ಖರೀದಿದಾರರ ಸಂಘ ಸಲ್ಲಿಸಿದ್ದ ದೂರಿನ ಅನ್ವಯ ಈ ಆದೇಶ ಹೊರಡಿಸಲಾಗಿದೆ. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ, 2016 ರ ಸೆಕ್ಷನ್ 4 ರ ಅಡಿಯಲ್ಲಿ ಶೋಭಾ ಸಿಟಿಯ ಈಗಾಗಲೇ ನೋಂದಣಿ ಮಾಡಿರುವ ಬ್ಲಾಕ್ 4 ಅನ್ನು ಹೊರತುಪಡಿಸಿ ಎಲ್ಲಾ ಬ್ಲಾಕ್‌ಗಳನ್ನು ನೋಂದಾಯಿಸಲು ತಕ್ಷಣ ಕ್ರಮಗಳನ್ನು ಕೈಗೊಳ್ಳಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಖರೀದಿದಾರರು ಹಲವಾರು ಸಮಸ್ಯೆಗಳನ್ನು ಆರೋಪಿಸಿ RERA ಅನ್ನು ಸಂಪರ್ಕಿಸಿದ್ದರು. ಅರ್ಜಿದಾರರಾದ ಅಮೇಯಾ ಉಸ್ಗಾಂವ್ಕರ್ ಅವರು ಈ ಕುರಿತು TNIE ಜೊತೆ ಮಾತನಾಡಿದ್ದು, “ಯೋಜನೆಯು 1,500 ಮನೆಗಳಿಗೆ ಭಾಗಶಃ ಆಕ್ಯುಪೆನ್ಸೀ ಹೊಂದಿದೆ. ಹಣ ಕೊಟ್ಟರೂ ನಮಗೆ ಕಾವೇರಿ ನೀರಿನ ಸಂಪರ್ಕ ಸಿಕ್ಕಿಲ್ಲ. ಅಗ್ನಿಶಾಮಕ ಇಲಾಖೆ ಎನ್‌ಒಸಿ ಪಡೆಯಬೇಕಿದ್ದು, ಇಲಾಖೆ ಎಫ್‌ಐಆರ್ ದಾಖಲಿಸಿದೆ. ಬಿಲ್ಡರ್ ಗಳು ದಾಖಲೆಗಳನ್ನು ನಕಲಿ ಮಾಡಿದ್ದಾರೆ ಎಂದು ಇಲಾಖೆ ಆರೋಪಿಸಿದೆ ಎಂದು ಆರೋಪಿಸಿದ್ದಾರೆ.
ತಮ್ಮ ಅಪಾರ್ಟ್‌ಮೆಂಟ್‌ಗೆ 1.25 ಕೋಟಿ ರೂಪಾಯಿ ಪಾವತಿಸಿದ್ದ ಸುಬ್ರೋತೊ ಚಕ್ರವರ್ತಿ ಅವರು ಮಾತನಾಡಿ, ಕರ್ನಾಟಕ ಹೈಕೋರ್ಟ್ ತನ್ನ 2012 ರ ಆದೇಶದಲ್ಲಿ ಭಾಗಶಃ ಆಕ್ಯುಪೆನ್ಸಿ ಪ್ರಮಾಣೀಕರಣವನ್ನು ಕಾನೂನುಬಾಹಿರ ಎಂದು ಘೋಷಿಸಿದೆ. ಈ ಯೋಜನೆಯು ಸ್ಮಶಾನದ ಬಳಿ ಬಂದಿದೆ, ಅದರ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲ. ಇದು ರಾಷ್ಟ್ರೀಯ ಕಟ್ಟಡ ಸಂಹಿತೆಯ ಉಲ್ಲಂಘನೆಯಾಗಿದೆ. ನನ್ನ ಹೆಂಡತಿ ಇಲ್ಲಿ ಬಂದು ವಾಸಿಸಲು ನಿರಾಕರಿಸುತ್ತಿದ್ದಾಳೆ ಎಂದು ಅವರು ಹೇಳಿದರು.
ಫೋರಂ ಫಾರ್ ಪೀಪಲ್ಸ್ ಕಲೆಕ್ಟಿವ್ ಎಫರ್ಟ್ಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶಂಕರ್ ಈ ಕುರಿತು ಪ್ರಶ್ನಿಸಿದ್ದು, “ನೋಂದಣಿ ಆದೇಶಗಳನ್ನು ನೀಡುವಾಗ RERA ನೋಂದಣಿ ಮಾಡದಿದ್ದಕ್ಕಾಗಿ ಏಕೆ ದಂಡ ವಿಧಿಸುತ್ತಿಲ್ಲ? ಅದರ ಕಾಯಿದೆಯ ಸೆಕ್ಷನ್ 59 ರ ಅಡಿಯಲ್ಲಿ ದಂಡವು ಕಡ್ಡಾಯವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
إرسال تعليق