ಪ್ರಧಾನಿ ಮೋದಿ , ಅಮಿತ್ ಶಾ: 'ಭಾರತಕ್ಕೆ ಹಿಂದಿ ಭಾಷೆಯು ವಿಶೇಷ ಗೌರವ ತಂದಿದೆ '; 'ಹಿಂದಿ ದೇಶವನ್ನು ಏಕತೆಯ ಎಳೆಯಲ್ಲಿ ಒಂದುಗೂಡಿಸುತ್ತದೆ '

 ದೇಶಾದ್ಯಂತ ಇಂದು ಬುಧವಾರ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದಿ ದಿನದ ಪ್ರಾಮುಖ್ಯತೆ, ಹಿಂದಿ ಭಾಷೆ, ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ಒತ್ತು ನೀಡುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬರೆದುಕೊಂಡಿದ್ದಾರೆ.

                   ಅಮಿತ್ ಶಾ ಮತ್ತು ಪ್ರಧಾನಿ ಮೋದಿಯವರ ಸಂಗ್ರಹ ಚಿತ್ರ

By : Rekha.M
Online Desk

ನವದೆಹಲಿ: ದೇಶಾದ್ಯಂತ ಇಂದು ಬುಧವಾರ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದಿ ದಿನದ ಪ್ರಾಮುಖ್ಯತೆ, ಹಿಂದಿ ಭಾಷೆ, ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ಒತ್ತು ನೀಡುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿ, ಪ್ರಪಂಚದಾದ್ಯಂತ ಹಿಂದಿ ಭಾಷೆ, ಭಾರತಕ್ಕೆ ವಿಶೇಷ ಗೌರವವನ್ನು ತಂದಿದೆ. ಅದರ ಸರಳತೆ, ಸ್ವಾಭಾವಿಕತೆ ಮತ್ತು ಸೂಕ್ಷ್ಮತೆಯು ಯಾವಾಗಲೂ ಆಕರ್ಷಿಸುತ್ತದೆ. ಹಿಂದಿ ದಿವಸವಾದ ಇಂದು, ಅದನ್ನು ಸಮೃದ್ಧವಾಗಿ ಮತ್ತು ಸಬಲೀಕರಣಗೊಳಿಸಲು ದಣಿವರಿಯಿಲ್ಲದೆ ಕೊಡುಗೆ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ. 

ಹಿಂದಿ ಭಾಷೆ ಭಾರತದ ಎಲ್ಲಾ ಭಾಷೆಗಳ ಸ್ನೇಹಿಯಾಗಿದ್ದು ಅಧಿಕೃತ ಭಾಷೆಯಾಗಿ ಐಕ್ಯತೆಯ ನೂಲಿನಲ್ಲಿ ಇಡೀ ದೇಶವನ್ನು ಒಗ್ಗೂಡಿಸುತ್ತದೆ ಎಂದು ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದಿಯ ಜೊತೆಗೆ ಎಲ್ಲಾ ಸ್ಥಳೀಯ ಭಾಷೆಗಳು ಸಮನಾಗಿ ಬೆಳವಣಿಗೆಯಾಗಬೇಕು ಎಂದಿದ್ದಾರೆ.

Post a Comment

أحدث أقدم