ಕಳಪೆ ರಸ್ತೆ ಕಾಮಗಾರಿ: ಬಿಬಿಎಂಪಿಯ ಇಬ್ಬರು ಎಂಜಿನೀಯರ್ ಗಳ ಅಮಾನತು

 ಸಹಾಯಕ ಕಾರ್ಯಪಾಲಕ ಎಂಜಿನಿ ಯರ್‌ ಎಂ.ಸಿ.ಕೃಷ್ಣೇಗೌಡ ಹಾಗೂ ಬಿಬಿಎಂಪಿ ರಸ್ತೆ ಅಭಿವೃದ್ಧಿ ವಿಭಾಗದ (ಪಶ್ಚಿಮ ವಿಭಾಗ) ವಿಷಕಂಠ ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.

                                                    ಸಾಂದರ್ಭಿಕ ಚಿತ್ರ

By : Rekha.M
Online Desk

ಬೆಂಗಳೂರು: ನ್ಯೂ ಬಿಇಎಲ್‌ ರಸ್ತೆಯಲ್ಲಿ ಕಳಪೆ ಕಾಮಗಾರಿ ನಡೆದಿದ್ದು, ಬಿಬಿಎಂಪಿಯ ಇಬ್ಬರು ಎಂಜಿನಿಯರ್‌ ಗಳನ್ನು ಅಮಾನತು ಮಾಡಲಾಗಿದೆ.

ಸಹಾಯಕ ಕಾರ್ಯಪಾಲಕ ಎಂಜಿನಿ ಯರ್‌ ಎಂ.ಸಿ.ಕೃಷ್ಣೇಗೌಡ ಹಾಗೂ ಬಿಬಿಎಂಪಿ ರಸ್ತೆ ಅಭಿವೃದ್ಧಿ ವಿಭಾಗದ (ಪಶ್ಚಿಮ ವಿಭಾಗ) ವಿಷಕಂಠ ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.

ಕಳೆದ ತಿಂಗಳು ನಡೆದಿದ್ದ ಇಲಾಖೆಗಳ ಆಂತರಿಕ ಸಮನ್ವಯ ಸಮಿತಿ ಸಭೆಯಲ್ಲಿ ಸಂಚಾರ ಪೊಲೀಸರು ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಬಿ.ಆರ್.ರವಿಕಾಂತೇಗೌಡ ಅವರ ದೂರಿನ ಆಧಾರದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಅವರು ತನಿಖೆಗೆ ಆದೇಶಿಸಿದ್ದಾರೆ.

ಕರ್ತವ್ಯ ಲೋಪ ಆರೋಪದ ಮೇಲೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್ ಅವರನ್ನು ಅಮಾನತುಗೊಳಿಸಲಾಗಿದೆ. ವರದಿಗಳ ಪ್ರಕಾರ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ ಬಾಲಾಜಿ, ಎಇಇ, ಎಇ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ,  ರಸ್ತೆ ಪರಿಶೀಲನೆ ವೇಳೆ ಲೋಪ ಕಂಡುಬಂದಿತ್ತು.

ಬಿಬಿಎಂಪಿಯ ತಾಂತ್ರಿಕ ವಿಚಕ್ಷಣಾ ಸಮಿತಿಯಿಂದ ತನಿಖೆ ನಡೆದಿದ್ದು,  ರಸ್ತೆ ಮೂಲಸೌಕರ್ಯ ಇಲಾಖೆಯ ಎಇಇ ಎಂ.ಸಿ.ಕೃಷ್ಣೇಗೌಡ ಹಾಗೂ ಎಇ ವಿಷ ಕಂಠಮೂರ್ತಿ ಅವರನ್ನು ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿಅಮಾನತುಗೊಳಿಸಲು ಬಿ.ಎಸ್.ಪ್ರಹ್ಲಾದ್ ಶಿಫಾರಸು ಮಾಡಿದ್ದಾರೆ’ ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತ ಯೋಗೇಶ್ ತಿಳಿಸಿದರು.


    Post a Comment

    أحدث أقدم