ದೇಶದ ಸೇನಾಪಡೆಗಳ ನೂತನ ಮುಖ್ಯಸ್ಥರಾಗಿ ಜನರಲ್ ಅನಿಲ್ ಚೌಹಾಣ್ ಅಧಿಕಾರ ಸ್ವೀಕಾರ

 ಮಾಜಿ ಸೇನಾ ಕಮಾಂಡರ್  ಜನರಲ್ ಅನಿಲ್ ಚೌಹಾಣ್ ನೂತನ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ (ಸಿಡಿಎಸ್) ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

           ಜನರಲ್ ಅನಿಲ್ ಚೌಹಾಣ್

By : Rekha.M
Online Desk

ನವದೆಹಲಿ: ಮಾಜಿ ಸೇನಾ ಕಮಾಂಡರ್  ಜನರಲ್ ಅನಿಲ್ ಚೌಹಾಣ್ ನೂತನ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ (ಸಿಡಿಎಸ್) ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

ದೇಶದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ 9 ತಿಂಗಳ ನಂತರ ಅಧಿಕಾರ ವಹಿಸಿಕೊಂಡಿರುವ ಚೌಹಾಣ್, ಮೂರು ಸೇನಾಪಡೆಗಳ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ಪೂರ್ವ ಲಡಾಖ್ ನಲ್ಲಿ ಚೀನಾ ಮತ್ತು ಭಾರತ ನಡುವಣ ಗಡಿ ವಿವಾದದ ನಡುವೆ ಚೀನಾದ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರುವ ಚೌಹಾಣ್ ಅವರನ್ನು ಈ ಉನ್ನತ ಹುದ್ದೆಗೆ ನೇಮಕ ಮಾಡಲಾಗಿದೆ. 61 ವರ್ಷದ ಚೌಹಾಣ್ ಮಿಲಿಟರಿ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪೂರ್ವ ಸೇನಾ ಕಮಾಂಡರ್ ಆಗಿದ್ದಾಗ ಕಳೆದ ವರ್ಷ ಮೇ 31ರಂದು ಅವರು ಸೇವೆಯಿಂದ ನಿವೃತ್ತರಾದರು. ಅವರು ನಿವೃತ್ತಿಯ ನಂತರ  ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದ ರಾಷ್ಟ್ರೀಯ ಭದ್ರತಾ ಸಮಿತಿಯ ಮಿಲಿಟರಿ ಸಲಹೆಗಾರರಾಗಿ  ಸೇವೆ ಸಲ್ಲಿಸಿದ್ದರು. 
 


Post a Comment

أحدث أقدم