ಕರ್ನಾಟಕ ಶಿಕ್ಷಣ ಕಾಯಿದೆಯಡಿ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಕನಿಷ್ಠ 27 ಶಾಲೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು "ಅನಧಿಕೃತ" ಎಂದು ಪಟ್ಟಿ ಮಾಡಿದ್ದು, ಎಲ್ಲಾ 27 ಶಾಲೆಗಳಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಸಾಂದರ್ಭಿಕ ಚಿತ್ರಬೆಂಗಳೂರು: ಕರ್ನಾಟಕ ಶಿಕ್ಷಣ ಕಾಯಿದೆಯಡಿ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಕನಿಷ್ಠ 27 ಶಾಲೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು "ಅನಧಿಕೃತ" ಎಂದು ಪಟ್ಟಿ ಮಾಡಿದ್ದು, ಎಲ್ಲಾ 27 ಶಾಲೆಗಳಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಈ ಶಾಲೆಗಳು 35,000 ಖಾಸಗಿ ಶಾಲೆಗಳ ಇಲಾಖೆಯ ರಾಜ್ಯವ್ಯಾಪಿ ಪರಿಶೀಲನೆಯ ಭಾಗವಾಗಿ ಪಟ್ಟಿ ಮಾಡಲಾದ ಅನಧಿಕೃತ ಸಂಸ್ಥೆಗಳ ಮೊದಲ ಬ್ಯಾಚ್ ಆಗಿದ್ದು, 10 ರಿಂದ 15 ಶಾಲೆಗಳು ಕಾಯಿದೆಯಡಿ ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ ಸಿ ನಾಗೇಶ್ ಅವರಿಗೆ ಮಾಹಿತಿ ನೀಡಿದ ನಂತರ ಅವರು ರಾಜ್ಯಾದ್ಯಂತ 35,000 ಖಾಸಗಿ ಶಾಲೆಗಳ ವಿವರವಾದ ಪರಿಶೀಲನೆಗೆ ಆದೇಶಿಸಿದ್ದಾರೆ.
ಪಟ್ಟಿ ಮಾಡಲಾದ ಶಾಲೆಗಳಲ್ಲಿ ಬೆಂಗಳೂರು ಉತ್ತರ ಶಿಕ್ಷಣ ಜಿಲ್ಲೆಯಲ್ಲಿ 11 ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 16 ಶಾಲೆಗಳು ಸೇರಿವೆ. ಬೆಂಗಳೂರು ದಕ್ಷಿಣ ಜಿಲ್ಲೆಯೊಂದರಲ್ಲೇ 16 ಶಾಲೆಗಳಲ್ಲಿ 925ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ನೊಟೀಸ್ ನೀಡುವುದರ ಜೊತೆಗೆ ನಾಲ್ಕು ಶಾಲೆಗಳನ್ನು ಮುಚ್ಚಲಾಗಿದೆ. ಬೆಂಗಳೂರು ಉತ್ತರದಲ್ಲಿ ಒಂದು ಶಾಲೆಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮಕ್ಕಳನ್ನು ಬೇರೆ ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅನುಮತಿ ಇಲ್ಲದೆ ಕೆಲವು ತರಗತಿಗಳನ್ನು ಆರಂಭಿಸಿರುವ 40 ಶಾಲೆಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಒಂದನ್ನು ಮುಚ್ಚಿ ಮಕ್ಕಳಿಗೆ ವರ್ಗಾವಣೆ ಪ್ರಮಾಣ ಪತ್ರಗಳನ್ನೂ ಕೂಡ ನೀಡಲಾಗಿದೆ. ಅಲ್ಲದೆ ಶಿಕ್ಷಣ ಇಲಾಖೆಯ ಅನುಮತಿ ಪಡೆಯದೇ 17 ಶಾಲೆಗಳನ್ನು ಬೇರೆ ಬೇರೆ ಕಡೆ ಸ್ಥಳಾಂತರ ಮಾಡಿರುವುದು ಕಂಡುಬಂದಿದೆ.
TNIEಗೆ ಲಭ್ಯವಾದ ದಾಖಲೆಗಳ ಪ್ರಕಾರ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 400 ಕ್ಕೂ ಹೆಚ್ಚು ಶಾಲೆಗಳು ತಮ್ಮ ಮಾನ್ಯತೆಯನ್ನು ನವೀಕರಿಸಿಲ್ಲ. ಜೊತೆಗೆ ನೋಂದಣಿ ಅಥವಾ ನವೀಕರಿಸದ ಶಾಲೆಗಳು ಅವರ ಮಾನ್ಯತೆ ಅಥವಾ ಅಂಗಸಂಸ್ಥೆ, ಇಲಾಖೆಯಿಂದ ಅನುಮತಿಯಿಲ್ಲದೆ ಮಾಲೀಕತ್ವ ಅಥವಾ ನಿರ್ವಹಣೆಯನ್ನು ವರ್ಗಾಯಿಸಿದ ಕೆಲವು ಶಾಲೆಗಳೂ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್ ಆರ್ ಅವರು ಮಾತನಾಡಿ, "ನಾವು ಎಲ್ಲಾ ಖಾಸಗಿ ಶಾಲೆಗಳ ದಾಖಲೆಗಳನ್ನು ಸಲ್ಲಿಸಲು ಆನ್‌ಲೈನ್ ಮಾಡ್ಯೂಲ್ ಮಾಡಿದ್ದೇವೆ, ಅವುಗಳು ನೋಂದಾಯಿಸಲ್ಪಟ್ಟಿವೆ, ಸಂಯೋಜಿತವಾಗಿವೆ / ಮಾನ್ಯತೆ ಪಡೆದಿವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಆ ದಾಖಲೆಗಳ ಪರಿಶೀಲನೆಗಾಗಿ ನಾವು ಆಫ್‌ಲೈನ್ ಮಾಡ್ಯೂಲ್ ಮಾಡಿದ್ದೇವೆ. ಮಕ್ಕಳ ಹಿತಾಸಕ್ತಿ ಕಾಪಾಡಲು ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಈ ಎಲ್ಲ ಶಾಲೆಗಳನ್ನು ಕ್ರಮಬದ್ಧಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
إرسال تعليق